ಕೆಎಸ್‌ಆರ್‌ಪಿ ಕಾನ್ಸ್ಟೇಬಲ್‌ ಕೀ ಉತ್ತರ ಪ್ರಕಟ

ಬೆಂಗಳೂರು ಸೆ.21: ರಾಜ್ಯ ಪೊಲೀಸ್‌ ಇಲಾಖೆಯ ವಿಶೇಷ ಮೀಸಲು ಪೊಲೀಸ್‌ ಕಾನ್ಸ್ಟೇಬಲ್‌(ಕೆಎಸ್‌ಆರ್‌ಪಿ, ಐಆರ್ಬಿ, ಕೆಎಸ್‌ಐಎಸ್‌ಎಫ್)ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.20ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ. ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದವಾರು ಕೀ ಉತ್ತರಗಳನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspx ದ ಮೂಲಕ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಸಿ… ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸೆ.23ರ ಬೆಳಗ್ಗೆ 10.30ರೊಳಗೆ ಪತ್ರಿಕೆ ವಿವರ, ವರ್ಷನ್‌ ಕೋಡ್‌, … More

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(ಕೆಆರ್‌ಪಿಸಿ) ಪರೀಕ್ಷೆ: ಹಾಲ್‌ ಟಿಕೆಟ್‌ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(ಕೆಆರ್‌ಪಿಸಿ), ಕೆಎಸ್‌ಐಎಸ್‌ಎಫ್‌ ಮತ್ತು ಐಆರ್‌ಬಿ ಹುದ್ದೆಗಳ ನೇಮಕಾತಿ ಸಂಬಂಧ ಸೆ.20ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಮಂಗಳವಾರ(ಸೆ.15) ಬಿಡುಗಡೆಗೊಳಿಸಿದೆ. ಸಾಮಾನ್ಯ ಜ್ಞಾನ(ಜಿಕೆ) ಪತ್ರಿಕೆಯನ್ನೊಳಗೊಂಡ ಆರ್‌ಪಿಸಿ ವೃಂದದ ಪತ್ರಿಕೆಯು ಬೆಳಗ್ಗೆ 10:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಕೆಕೆ ವೃಂದದ ಪತ್ರಿಕೆಯು ಮಧ್ಯಾಹ್ನ 3 ಗಂಟೆಯಿಂದ ಸಂಜೆ 4:30ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ ದಲ್ಲಿ ಲಭ್ಯವಿರುವ ಲಿಂಕ್‌ (https://www.cetonline.karnataka.gov.in/KEA_EXAM_PORTAL/Forms/Candidates/Login) ಮೂಲಕ ಪ್ರವೇಶ … More

ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌: ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು ಸೆ.11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ಹುದ್ದೆಗಳ ನೇಮಕಾತಿಗಾಗಿ ಸೆ.06ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಸದರಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೆ.07ರಂದು ಬಿಡುಗಡೆಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೆ.09ರವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅವಧಿಯಲ್ಲಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಸಿ ಸೆ.10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಇದರನ್ವಯ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ … More

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌; ಪರೀಕ್ಷೆಯ ಕೀ ಉತ್ತರ ಪ್ರಕಟ

ಬೆಂಗಳೂರು: ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.06ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಸೋಮವಾರ(ಸೆ.07) ಪ್ರಕಟಿಸಿದೆ. ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರಕಟವಾದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಅಧಿಕೃತ ಲಿಂಕ್-https://cetonline.karnataka.gov.in/keaobjections/forms/login.aspx‌ ಮುಖೇನ ಪತ್ರಿಕೆಯ ವಿವರ, ವರ್ಷನ್‌ ಕೋಡ್‌, ಪರೀಕ್ಷೆಯ ದಿನಾಂಕ ಹಾಗೂ ಪೂರಕ ದಾಖಲೆಗಳನ್ನು ಲಗತ್ತಿಸಿ, ಪ್ರತಿ ಪ್ರಶ್ನೆಗೆ ರೂ.25/-ರಂತೆ ಪಾವತಿಸುವ ಮೂಲಕ ಆಕ್ಷೇಪಣೆ ಮಾಡಬಹುದು. ಆಕ್ಷೇಪಣೆ ಲಿಂಕ್ ಆಕ್ಷೇಪಣೆ … More

ಕಾನ್ಸ್ಟೇಬಲ್ ಸಿಎಆರ್‌/ಡಿಎಆರ್‌ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಹುದ್ದೆಗಳ ಭರ್ತಿಗಾಗಿ ಸೆ.06ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ(ಆ.31) ಬಿಡುಗಡೆಗೊಳಿಸಿದೆ. ‌ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಪತ್ರಿಕೆ(ಜಿಕೆ) ವಿಷಯವನ್ನೊಳಗೊಂಡ ಪರೀಕ್ಷೆಯು ಆರ್‌ಪಿಸಿ ವೃಂದ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಕೆಕೆ ವೃಂದ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4:30ರವರೆಗೆ ಜರುಗಲಿದೆ. ಸದರಿ ನೇಮಕಾತಿ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ … More

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಅಂತಿಮ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಪೊಲೀಸ್ ಇಲಾಖೆಯ ಆರ್‌ಪಿಸಿ ಹಾಗೂ ಕೆಕೆ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆ.02ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ(ಆ.21) ಪ್ರಕಟಿಸಿದೆ. ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಆ.15 ರಂದು ಪ್ರಕಟಿಸಿ, ಆ.17ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಆಕ್ಷೇಪಣೆಗಳನ್ನು ಪರಿಶೀಲಿಸಿ ಆ.19ರಂದು ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಠ 30 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳ … More

ಪೊಲೀಸ್‌ ಕಾನ್ಸ್ಟೇಬಲ್: ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪೊಲೀಸ್‌ ಇಲಾಖೆಯು 2026-27ನೇ ಸಾಲಿನ ಸಿವಿಲ್, ಸಶಸ್ತ್ರ, ಕೆಎಸ್ಆರ್‌ಪಿ ಮತ್ತು ಕೆಎಸ್ಐಎಸ್ಎಫ್ ಪೊಲೀಸ್‌ ಕಾನ್ಸ್ಟೇಬಲ್‌ ಹುದ್ದೆಗಳ ನೇಮಕಾತಿಗಾಗಿ ಕೆಇಎ ನಡೆಸಲಿರುವ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ಮಾರ್ಗಸೂಚಿಗಳನ್ನು ಪ್ರಕಟಸಿದೆ. ಪೊಲೀಸ್‌ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ವೇಳಾಪಟ್ಟಿ ವಿವರಗಳು ಹುದ್ದೆಯ ವಿವರ/ಹೆಸರು ಲಿಖಿತ ಪರೀಕ್ಷೆಯ ದಿನಾಂಕ ಮತ್ತು ಸಮಯ 02/3-4/2026-27 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಉಳಿಕ ಮೂಲ ವೃಂದ 3395 ಹುದ್ದೆಗಳು) 02.08.2026, ಬೆಳಿಗ್ಗೆ: 10:30 ರಿಂದ 12:00 ರವರೆಗೆ 01/3-4/2026-27 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಸ್ಥಳೀಯ … More

KSRP, IRB & KSISF ಕಾನ್ಸ್ಟೇಬಲ್‌ ನೇಮಕಾತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ವಿಶೇಷ ಮೀಸಲು ಪೊಲೀಸ್‌ ಕಾನ್ಸ್ಟೇಬಲ್‌(ಕೆಎಸ್‌ಆರ್‌ಪಿ), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್‌) ಮತ್ತು ಭಾರತೀಯ ಮೀಸಲು ಪಡೆ(ಐಆರ್‌ಬಿ)ಯಲ್ಲಿ ಕೆಕೆ ವೃಂದ ಹಾಗೂ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಪೋಲಿಸ್‌ ಕಾನ್ಸ್ಟೇಬಲ್‌ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಕೆಎಸ್‌ಆರ್‌ಪಿ 334+(1455 ಆರ್‌ಪಿಸಿ), ಕೆಎಸ್‌ಐಎಸ್‌ಎಫ್‌ 364, ಐಆರ್‌ಬಿ 161 ಸೇರಿದಂತೆ ಒಟ್ಟು 2314 ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖಿತ … More

ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಭರ್ತಿ; ಕೆಇಎ ಆರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪೊಲೀಸ್‌ ಇಲಾಖೆಯ ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಧಿಸೂಚನೆ ಹೊರಡಿಸಿದೆ. ಒಟ್ಟು 1600(1421 ಆರ್‌ಪಿಸಿ + 179 ಕೆಕೆ) ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಲಿಖಿತ ಪರೀಕ್ಷೆ ಸೇರಿದಂತೆ ನಾನಾ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕ ನಡೆಯಲಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ(https://cetonline.karnataka.gov.in/kea/indexnew)ದಲ್ಲಿ ಲಭ್ಯವಿರುವ ಲಿಂಕ್‌ … More