ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಭರ್ತಿ; ಕೆಇಎ ಆರ್ಜಿ ಆಹ್ವಾನ

ಜೂ.22ರಿಂದ ಅರ್ಜಿ | ಪಿಯುಸಿ ಅರ್ಹತೆ

Published on:

Updated On:

ಬೆಂಗಳೂರು: ಕರ್ನಾಟಕ ಪೊಲೀಸ್‌ ಇಲಾಖೆಯ ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಧಿಸೂಚನೆ ಹೊರಡಿಸಿದೆ.

ಒಟ್ಟು 1600(1421 ಆರ್‌ಪಿಸಿ + 179 ಕೆಕೆ) ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಲಿಖಿತ ಪರೀಕ್ಷೆ ಸೇರಿದಂತೆ ನಾನಾ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕ ನಡೆಯಲಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ(https://cetonline.karnataka.gov.in/kea/indexnew)ದಲ್ಲಿ ಲಭ್ಯವಿರುವ ಲಿಂಕ್‌ ಮುಖೇನ ಜು.22ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜೂನ್‌ 22
  • ಅರ್ಜಿ ಸಲ್ಲಿಸಲು ಕೊನೆ ದಿನ – ಜುಲೈ 22
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 24

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ವಯೋಮಿತಿ:

22-07-2026ರಂತೆ;

ಕನಿಷ್ಠ 18 ವರ್ಷಗಳು

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 35 ವರ್ಷಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪವರ್ಗ-1 ಅಭ್ಯರ್ಥಿಗಳಿಗೆ 38 ವರ್ಷಗಳು

ಸೂಚನೆ: ಸರ್ಕಾರಿ ನಿಯಮಾನುಸಾರ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ(ಒಎಂಆರ್‌)
  • ದೇಹದಾರ್ಢ್ಯತೆ ಪರೀಕ್ಷೆ(ಪಿಎಸ್‌ಟಿ)
  • ಸಹಿಷ್ಣುತೆ ಪರೀಕ್ಷೆ(ಇಟಿ)
  • ವೈದ್ಯಕೀಯ ಪರೀಕ್ಷೆ(ಎಂಇ)
  • ದಾಖಲಾತಿ ಪರಿಶೀಲನೆ

ಸಂಬಳ:

ವೇತನ ಶ್ರೇಣಿ; ರೂ.37.500-76100/-

ಅರ್ಜಿ ಶುಲ್ಕ:

ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ-2ಎ/2ಬಿ/3ಎ/3ಬಿ ವರ್ಗದವರಿಗೆ ₹750/-
ಪ.ಜಾತಿ/ಪ.ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500/-

ಇದನ್ನೂ ಓದಿ: ಕರ್ನಾಟಕ ಪೊಲೀಸ್‌ ಕಾನ್ಸ್ಟೇಬಲ್‌(ಸಿವಿಲ್‌) ನೇಮಕಾತಿ; ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?

ಹಂತ-1 ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ.

ಹಂತ-2 ನಂತರ ಮೆನುನಲ್ಲಿ “ನೇಮಕಾತಿ” ವಿಭಾಗದಡಿ “ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್(CAR/DAR) -2026” ಎಂಬ ಉಪವಿಭಾಗ ಕ್ಲಿಕ್ಕಿಸಿ, ಮುಂದೆ ಇದರಡಿ ನೀಡಲಾದ “ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR)(RPC) ಅಥವಾ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) (KK)“ರಡಿ ಒದಗಿಸಲಾದ ಅರ್ಜಿ ನಮೂನೆ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು.

Important Direct Links:

Official Notification PDF(RPC)Download
Official Notification PDF(KK)Download
Online Application Form(RPC)Apply Now
Online Application Form(KK)(Apply Now
Official Websitekea.kar.nic.in
More UpdatesKarnatakaHelp.in

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

9 thoughts on “ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಭರ್ತಿ; ಕೆಇಎ ಆರ್ಜಿ ಆಹ್ವಾನ”

Leave a Comment