ವಿಶಾಖಪಟ್ಟಣಂ: ರಕ್ಷಣಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್(ಹೆಚ್‌ಎಸ್‌ಎಲ್)ನಲ್ಲಿ ನಾನಾ ಹುದ್ದೆಗಳನ್ನು ಶಾಶ್ವತ ಹಾಗೂ ಸ್ಥಿರ ಅವಧಿಯ ಒಪ್ಪಂದ(ಎಫ್‌ಟಿಸಿ) ಆಧಾರ ಮೇಲೆ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಪ್ರಾಜೆಕ್ಟ್ ಸೂಪರಿಂಟೆಂಡೆಂಟ್ ಸೇರಿದಂತೆ ಇತರೆ ಒಟ್ಟು 34 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತೆಯನ್ನು ಪೂರೈಸುವ ಆಸಕ್ತ ಅರ್ಜಿದಾರರು ಜೂ.24ರೊಳಗೆ ಹೆಚ್‌ಎಸ್‌ಎಲ್‌ನ ಅಧಿಕೃತ ಜಾಲತಾಣ https://hslvizag.in/en/careers ಕ್ಕೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜೂನ್ 03, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 24, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 24, 2026
ಹುದ್ದೆಯ ವಿವರಗಳು:
• ಮ್ಯಾನೇಜರ್ (ಟೆಕ್ನಿಕಲ್) 05
• ಮ್ಯಾನೇಜರ್ (HR) 02
• ಡೆಪ್ಯೂಟಿ ಮ್ಯಾನೇಜರ್(ಟೆಕ್ನಿಕಲ್) 10
• ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) 02
• ಡೆಪ್ಯೂಟಿ ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) 01
• ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್(ಟೆಕ್ನಿಕಲ್) 05
• ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್(ಸಿವಿಲ್) 03
• ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್(ಡಿಸೈನ್) 02
• ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್(HR) 02
• ಡೆಪ್ಯೂಟಿ .ಪ್ರಾಜೆಕ್ಟ್ ಆಫೀಸರ್(ಸೇಫ್ಟಿ) 01
• ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್(ಫೈರ್ ಸೇಫ್ಟಿ) 01
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಆಯಾ ಹುದ್ದೆಗಳಿಗೆ ಅನುಗುಣವಾಗಿ ಯಾವುದೇ ವಿಭಾಗದಲ್ಲಿ ಪದವಿ/ಎಲ್.ಎಲ್.ಬಿ/ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೋಮಾ ಅಥವಾ ಬಿ.ಇ/ಬಿ.ಟೆಕ್ ಇತರೆ ತತ್ಸಮನ ಅರ್ಹತೆಗಳನ್ನು ಹೊಂದಿರಬೇಕು.
ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
03-06-2026 ರಂತೆ
ಗರಿಷ್ಠ ವಯಸ್ಸಿನ ಮಿತಿ;
• ಮ್ಯಾನೇಜರ್(ಟೆಕ್ನಿಕಲ್) ಹುದ್ದೆಗಳಿಗೆ – 40 ವರ್ಷಗಳು
• ಮ್ಯಾನೇಜರ್(HR) ಹುದ್ದೆಗಳಿಗೆ – 45 ವರ್ಷಗಳು
• ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) ಹುದ್ದೆಗಳಿಗೆ – 35 ವರ್ಷಗಳು
• ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) ಮತ್ತು ಡೆಪ್ಯುಟಿ ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) ಹುದ್ದೆಗಳಿಗೆ – 57 ವರ್ಷಗಳು
• ಡೆಪ್ಯುಟಿ ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ – 40 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ (ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ ಹಾಗೂ ಒ.ಬಿ.ಸಿ) ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ವಿಧಾನ:
- ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ಸಂದರ್ಶನ
- ಅಂತಿಮ ಆಯ್ಕೆ
ವೇತನ:
• ಮ್ಯಾನೇಜರ್(ಟೆಕ್ನಿಕಲ್) ಹಾಗೂ ಮ್ಯಾನೇಜರ್(HR) ಹುದ್ದೆಗಳಿಗೆ ರೂ.60,000 – 1,80,000
• ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) ಹುದ್ದೆಗಳಿಗೆ ರೂ.50,000 -1,60,000
• ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) ಹುದ್ದೆಗಳಿಗೆ ರೂ.1,85,000
• ಡೆಪ್ಯುಟಿ ಪ್ರಾಜೆಕ್ಟ್ ಸೂಪರಿಂಟೆಂಡೆಂಟ್(ಟೆಕ್ನಿಕಲ್) ಹುದ್ದೆಗಳಿಗೆ ರೂ.1,70,000
• ಡೆಪ್ಯುಟಿ ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ ರೂ.90,000
ಅರ್ಜಿ ಶುಲ್ಕ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ.300/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪಿಡಬ್ಲ್ಯೂಡಿ ಹಾಗೂ ಆಂತರಿಕ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ.?
- ಅಭ್ಯರ್ಥಿಗಳು ಮೊದಲಿಗೆ HSL ಅಧಿಕೃತ ಜಾಲತಾಣ https://hslvizag.in/en/careers ಕ್ಕೆ ಭೇಟಿ ನೀಡಿ.
- ನಂತರ ಪ್ರಸ್ತುತ ಹುದ್ದೆಗಳು ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ.
- ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ವಿಭಾಗದಲ್ಲಿ ನೀಡಲಾಗಿರುವ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯನ್ನು ಆರಿಸಿ.
- ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ.
- ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ, ಸಹಿ, ಭಾವಚಿತ್ರ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
- ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | hslvizag.in |
| More Updates | KarnatakaHelp.in |
I t i
I want one part time job