ಮುಂಬೈ: ಇಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್(RBI)ನ ವಿವಿಧ ಕೇಂದ್ರ ಕಚೇರಿ ಇಲಾಖೆಗಳಿಗೆ ಯುವ ವೃತ್ತಿಪರರ(ಯಂಗ್‌ಪ್ರೊಫೆಷನಲ್ಸ್) ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 12 ಸ್ಥಾನಗಳಿಗೆ ನೇಮಕಾತಿ ನಡೆಯಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಜು.06ರೊಳಗೆ ರೊಳಗೆ ಆರ್‌ಬಿಐನ ಅಧಿಕೃತ ಜಾಲತಾಣ https://opportunities.rbi.org.in/scripts/bs_viewcontent.aspx?Id=5079ದ ಮೂಲಕ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಜತೆಗೆ ನಿಗದಿತ ದಾಖಲೆಗಳನ್ನು ಲಗತ್ತಿಸಿ, ಬ್ಯಾಂಕಿನ ಇ-ಮೇಲ್ ಸಂಖ್ಯೆ yphrmdco@rbi.org.inಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜೂನ್ 15, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 06, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಉದ್ಯೋಗ ಪ್ರದೇಶಗಳಿಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಬಿ.ಇ./ಬಿ.ಟೆಕ್/ಎಂ.ಇ./ಎಂ.ಟೆಕ್, ಚಾರ್ಟೆಡ್ ಅಕೌಂಟೆಂಟ್ ಅಥವಾ ಪಿ.ಎಚ್.ಡಿ ಅಂತಹ ತತ್ಸಮಾನ ಅರ್ಹತೆಗಳನ್ನು ಹೊಂದಿರಬೇಕು.
ವಯೋಮಿತಿ:
06-07-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು
ಆಯ್ಕೆ ವಿಧಾನ:
- ಪ್ರಾಥಮಿಕ ಸ್ಕ್ರೀನಿಂಗ್/ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
- ದಾಖಲೆ ಪರಿಶೀಲನೆ
- ಸಂದರ್ಶನ
ವೇತನ:
ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.1,50,000ವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ(ಬಹುಶಃ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸುವುದುದರಿಂದ ಅರ್ಜಿ ಶುಲ್ಕವಿರುವುದಿಲ್ಲ)
ಅರ್ಜಿ ಸಲ್ಲಿಸುವ ಕ್ರಿಯೆ…
• RBI ಅಧಿಕೃತ ಜಾಲತಾಣ https://opportunities.rbi.org.in/scripts/bs_viewcontent.aspx?Id=5079 ಕ್ಕೆ ಭೇಟಿ ನೀಡಿ.
• *ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಯುವ ವೃತ್ತಿಪರರ ತೊಡಗಿಸಿಕೊಳ್ಳುವಿಕೆ* ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಇಲ್ಲಿ ಕ್ಲಿಕ್ ಮಾಡಿ* ಆಯ್ಕೆಯನ್ನು ಆರಿಸಿ, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
• ಅಥವಾ ಅರ್ಜಿ ನಮೂನೆ ಡೌನ್ಲೋಡ್ ಮಾಡುವ ನೇರ ಲಿಂಕ್ – https://kh3.in/myjj5p
• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಭರ್ತಿ ಮಾಡಿದ ಅರ್ಜಿಯನ್ನು “YP ಅಪ್ಲಿಕೇಶನ್ ಅಭ್ಯರ್ಥಿ” ಹೆಸರಿನಲ್ಲಿ ಸೇವ್ ಮಾಡಿ.
• RBI ಇ-ಮೇಲ್ ವಿಳಾಸಕ್ಕೆ – yphrmdco@rbi.org.in ಜುಲೈ 06ರೊಳಗೆ ಅಥವಾ ಅದಕ್ಕೂ ಮೊದಲು ತಲುಪುವಂತೆ ಕಳುಹಿಸಬೇಕು.
Important Direct Links:
| Official Notification PDF | Download |
| Application Form PDF | Download |
| Official Website | www.rbi.org.in |
| More Updates | KarnatakaHelp.in |
I am interested
I will join the job and I will instretes