ದೆಹಲಿ ಪೊಲೀಸ್‌ ಪರೀಕ್ಷೆ 2025: ಸಿಬಿಟಿ ಫಲಿತಾಂಶ ಪ್ರಕಟ

Published on:

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು 2025ನೇ ಸಾಲಿನ ದೆಹಲಿ ಪೊಲೀಸ್‌ ಪರೀಕ್ಷೆ (ಕಾನ್ಸ್ಟೇಬಲ್‌-ಕಾರ್ಯನಿರ್ವಾಹಕ)ಗೆ ಸಂಬಂಧಿಸಿದಂತೆ 2025ರ ಡಿ.18 ರಿಂದ 2026ರ ಜ.06ರವರೆಗೆ ನಡೆಸಿದ್ದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ(ಜೂ.19)ರಂದು ಪ್ರಕಟಿಸಿದೆ.

ಸದರಿ ಪರೀಕ್ಷೆಯಲ್ಲಿ ದೈಹಿಕ ಸಹಿಷ್ಣುತೆ ಮತ್ತು ಅಳತೆ ಪರೀಕ್ಷೆ (ಪಿಎ&ಎಂಟಿ)/ದಾಖಲೆ ಪರಿಶೀಲನೆಗೆ(ಡಿವಿ) ಒಟ್ಟು 66,076 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅವರಲ್ಲಿ ಪುರುಷ ವರ್ಗದಲ್ಲಿ 38,559, ಮಹಿಳಾ ವರ್ಗದಲ್ಲಿ 22,235, ಮಾಜಿ ಸೈನಿಕ(ಇತರರು) ವರ್ಗದಲ್ಲಿ 2,186 ಹಾಗೂ ಮಾಜಿ ಸೈನಿಕರು(ಕಮಾಂಡೋ) ವರ್ಗದಲ್ಲಿ 3,096 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು 7565 ಹುದ್ದೆಗಳ ಭರ್ತಿಗಾಗಿ ಆಯೋಗವು ಪರೀಕ್ಷೆ ನಡೆಸುತ್ತಿದೆ.

ಫಲಿತಾಂಶವನ್ನು ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಜಾಲತಾಣ(https://ssc.gov.in/)ಕ್ಕೆ ಭೇಟಿ ನೀಡಿ.

ಹಂತ-2 ಮುಖಪುಟದಲ್ಲಿ “Result” ವಿಭಾಗದ ಮೇಲೆ ಕ್ಲಿಕ್ಕಿಸಿ,

ಮುಂದೆ, “Constable(Executive) Male and Female in Delhi Police Examination, 2025 – Male Candidates qualified for PE and MT/ DV (List-I)
ಅಥವಾ
Constable(Executive) Male and Female in Delhi Police Examination, 2025 – Female Candidates qualified for PE and MT/ DV (List-II)“. ನಿಮಗೆ ಬೇಕಾದ ಲಿಂಕ್‌ ಕ್ಲಿಕ್ಕಿಸುವ ಮೂಲಕ ಫಲಿತಾಂಶವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

Delhi Police Constable Exam 2025 CBT Result Cut-Off PDFDownload
Delhi Police Constable Exam 2025 CBT Result Male Candidates List-1Download
Delhi Police Constable Exam 2025 CBT Result Female Candidates List-2Download
Official Websitessc.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ದೆಹಲಿ ಪೊಲೀಸ್‌ ಪರೀಕ್ಷೆ 2025: ಸಿಬಿಟಿ ಫಲಿತಾಂಶ ಪ್ರಕಟ”

Leave a Comment