ದೆಹಲಿ ಪೊಲೀಸ್ ಪರೀಕ್ಷೆ 2025: ಸಿಬಿಟಿ ಫಲಿತಾಂಶ ಪ್ರಕಟ
ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು 2025ನೇ ಸಾಲಿನ ದೆಹಲಿ ಪೊಲೀಸ್ ಪರೀಕ್ಷೆ (ಕಾನ್ಸ್ಟೇಬಲ್-ಕಾರ್ಯನಿರ್ವಾಹಕ)ಗೆ ಸಂಬಂಧಿಸಿದಂತೆ 2025ರ ಡಿ.18 ರಿಂದ 2026ರ ಜ.06ರವರೆಗೆ ನಡೆಸಿದ್ದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ(ಜೂ.19)ರಂದು ಪ್ರಕಟಿಸಿದೆ. ಸದರಿ ಪರೀಕ್ಷೆಯಲ್ಲಿ ದೈಹಿಕ ಸಹಿಷ್ಣುತೆ ಮತ್ತು ಅಳತೆ ಪರೀಕ್ಷೆ (ಪಿಎ&ಎಂಟಿ)/ದಾಖಲೆ ಪರಿಶೀಲನೆಗೆ(ಡಿವಿ) ಒಟ್ಟು 66,076 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅವರಲ್ಲಿ ಪುರುಷ ವರ್ಗದಲ್ಲಿ 38,559, ಮಹಿಳಾ ವರ್ಗದಲ್ಲಿ 22,235, ಮಾಜಿ ಸೈನಿಕ(ಇತರರು) ವರ್ಗದಲ್ಲಿ 2,186 ಹಾಗೂ ಮಾಜಿ ಸೈನಿಕರು(ಕಮಾಂಡೋ) ವರ್ಗದಲ್ಲಿ 3,096 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. … More