SSC ಜಿಡಿ, ಎಂಟಿಎಸ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ. ಬಹು-ಕಾರ್ಯ ಸಿಬ್ಬಂದಿ(MTS) ಮತ್ತು ಹವಾಲ್ದಾರ್ ಹುದ್ದೆಗಳಿಗೆ ಸಂಬಂಧಿಸಿದ ಪರೀಕ್ಷೆಯು ಫೆ.04 ರಂದು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPFs), ಎಸ್‌ಎಸ್‌ಎಫ್‌ನಲ್ಲಿನ ಕಾನ್ಸ್‌ಟೇಬಲ್(GD) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿನ ರೈಫಲ್‌ಮನ್(GD) ಹುದ್ದೆಗಳ ಭರ್ತಿಗಾಗಿ ಫೆ.23ರಂದು ಪರೀಕ್ಷೆ ನಡೆಯಲಿವೆ ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ. ಸದರಿ ಪರೀಕ್ಷೆಗಳ ವೇಳಾಪಟ್ಟಿಯನ್ನು SSC ಅಧಿಕೃತ ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು … More