SSC JE Vacancy 2025: ಜೂನಿಯರ್ ಎಂಜಿನಿಯರ್ (JE) ಖಾಲಿ ಹುದ್ದೆಗಳ ವಿವರ ಇಲ್ಲಿದೆ!

Published on:

ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ವಿವರವನ್ನು ಸಿಬ್ಬಂದಿ ನೇಮಕಾತಿ ಸಿಬ್ಬಂದಿ ಆಯ್ಕೆ ಆಯೋಗವು ಮಂಗಳವಾರ(ಆ.5) ಬಿಡುಗಡೆ ಮಾಡಿದೆ.

ಸಚಿವಾಲಯ, ಸಂಸ್ಥೆಗಳು ಹಾಗೂ ಇಲಾಖಾವಾರು ಖಾಲಿ ಇರುವ ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆಯ ತಾತ್ಕಾಲಿಕ ಹುದ್ದೆಗಳ ವಿವರಗಳನ್ನು SSC ಅಧಿಕೃತ ವೆಬ್ಸೈಟ್ https://ssc.gov.in/?ref=examinfo-ssc-cgl-result ನಲ್ಲಿ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ.

ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಸಚಿವಾಲಯ ಹಾಗೂ ಇಲಾಖಾವಾರು ಖಾಲಿ ಇರುವ ಹುದ್ದೆಗಳ ವಿವರ

• ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಪುರುಷ ಅಭ್ಯರ್ಥಿಗಳಿಗೆ ಮಾತ್ರ) JE(C) – 796 ಹುದ್ದೆಗಳು

• ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಪುರುಷ ಅಭ್ಯರ್ಥಿಗಳಿಗೆ ಮಾತ್ರ) JE(E&M) – 163 ಹುದ್ದೆಗಳು

• ಕೇಂದ್ರ ಜಲ ಆಯೋಗ JE (M) – 10 ಹುದ್ದೆಗಳು

• ಕೇಂದ್ರ ಜಲ ಆಯೋಗ JE (C) – 90 ಹುದ್ದೆಗಳು

• ಕೇಂದ್ರ ಲೋಕೋಪಯೋಗಿ ಇಲಾಖೆ JE (E) – 94 ಹುದ್ದೆಗಳು

• ಕೇಂದ್ರ ಲೋಕೋಪಯೋಗಿ ಇಲಾಖೆ JE (C) – 210 ಹುದ್ದೆಗಳು

• ಕೇಂದ್ರ ಜಲಶಕ್ತಿ ಸಂಶೋಧನಾ ಕೇಂದ್ರ JE (C) – 3 ಹುದ್ದೆಗಳು

• ಕೇಂದ್ರ ಜಲಶಕ್ತಿ ಸಂಶೋಧನಾ ಕೇಂದ್ರ JE (E) – 2 ಹುದ್ದೆಗಳು

• ಕೇಂದ್ರ ಜಲಶಕ್ತಿ ಸಂಶೋಧನಾ ಕೇಂದ್ರ JE (M) – 2 ಹುದ್ದೆಗಳು

• DGQA-NAVAL, ರಕ್ಷಣಾ ಸಚಿವಾಲಯ JE (E) – 3 ಹುದ್ದೆಗಳು

• DGQA-NAVAL, ರಕ್ಷಣಾ ಸಚಿವಾಲಯ JE (M) – 5 ಹುದ್ದೆಗಳು

• ಫರಕ್ಕಾ ಬ್ಯಾರೇಜ್ ಯೋಜನೆ, ಜಲಶಕ್ತಿ ಸಚಿವಾಲಯ JE (C) – 11 ಹುದ್ದೆಗಳು

• ಫರಕ್ಕಾ ಬ್ಯಾರೇಜ್ ಯೋಜನೆ, ಜಲಶಕ್ತಿ ಸಚಿವಾಲಯ JE (M) – 4 ಹುದ್ದೆಗಳು

• ಮಿಲಿಟರಿ ಎಂಜಿನಿಯರ್ ಸೇವೆ JE (C) – 202 ಹುದ್ದೆಗಳು

• ಮಿಲಿಟರಿ ಎಂಜಿನಿಯರ್ ಸೇವೆ – JE (E&M) – 136 ಹುದ್ದೆಗಳು

ಒಟ್ಟು 1731 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

Important Direct Links:

SSC JE Vacancy 2025 Details PDFDownload
Official Websitessc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment