ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಗಳ ಭರ್ತಿ: ಅರ್ಜಿ ಆಹ್ವಾನ

ಒಟ್ಟು 1215 ಹುದ್ದೆ

Published on:

ಭಾರತೀಯ ರೈಲ್ವೆಯ ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಕೇಂದ್ರೀಕೃತ ಅಧಿಸೂಚನೆ ಸಂಖ್ಯೆ.08/2026ರಡಿ ‘ಸ್ಟೇಷನ್ ಮಾಸ್ಟರ್’ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ಮಂಡಳಿಯು ಕಂಪ್ಯೂಟರ್ ಆಧಾರಿತ ಪರೀಕ್ಷೆ , ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಒಟ್ಟು 1215 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- ಅಕ್ಟೋಬರ್‌ 27
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 25(ರಾತ್ರಿ 11:59 ಗಂಟೆಯವರೆಗೆ)
  • ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ- ನವೆಂಬರ್‌ 27
  • ಅರ್ಜಿ ತಿದ್ದುಪಡಿ ವಿಂಡೋ- ನವೆಂಬರ್ 28 ರಿಂದ ಡಿಸೆಂಬರ್‌ 07ರವರೆಗೆ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Degree) ಅಥವಾ ತತ್ಸಮಾನ ಅರ್ಹತೆ ಪಡೆದಿರಬೇಕು.

ಅಂತಿಮ ವರ್ಷದ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ವಯೋಮಿತಿ:

01-01-2027ಕ್ಕೆ ಅನ್ವಯವಾಗುವಂತೆ; 20 ರಿಂದ 33 ವರ್ಷ ವಯೋಮಾನದವರಾಗಿರಬೇಕು.

ಮೀಸಲಾತಿ ಅನುಗುಣವಾಗಿ ಆಯಾ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ನೇಮಕಾತಿಯು ನಾಲ್ಕು ಹಂತಗಳನ್ನು ಒಳಗೊಂಡಿದೆ:

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  2. ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT)
  3. ದಾಖಲೆಗಳ ಪರಿಶೀಲನೆ (DV)
  4. ವೈದ್ಯಕೀಯ ಪರೀಕ್ಷೆ (Medical Examination)

ಸಂಬಳ:

7ನೇ ವೇತನ ಆಯೋಗದ (7th CPC) ಮಟ್ಟ 6ರ ಪ್ರಕಾರ, ಆರಂಭಿಕ ವೇತನವು ರೂ.35,400 ಆಗಿರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 500 (CBT ಪರೀಕ್ಷೆಗೆ ಹಾಜರಾದ ನಂತರ ರೂ. 400 ಮರುಪಾವತಿಸಲಾಗುತ್ತದೆ).
  • ಮಹಿಳೆಯರು, ಪರಿಶಿಷ್ಟ ಜಾತಿ/ಪಂಗಡ, ಮಾಜಿ ಸೈನಿಕರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EBC): ರೂ. 250 (CBT ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ಶುಲ್ಕ ಮರುಪಾವತಿಸಲಾಗುತ್ತದೆ).

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ https://www.rrbapply.gov.in/ಗೆ ಸಂದರ್ಶಿಸಿ, ಹೊಸ ಅರ್ಜಿ ಸಲ್ಲಿಸುವ ಮೊದಲು ‘Create an Account’ ಲಿಂಕ್ ಮೂಲಕ ಖಾತೆಯನ್ನು ಸೃಜಿಸಿಕೊಂಡು(ಒಂದು ವೇಳೆ ಈಗಾಗಲೇ ಖಾತೆ ಹೊಂದಿದ್ದರೆ ಲಾಗಿನ್‌ ಆಗಿ), ಆನ್‌ಲೈನ್‌ ಅರ್ಜಿ ನಮೂನೆಯನ್ನು ತುಂಬಿ ಕೊನೆಗೆ ತಮಗೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್‌ ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣrrb.indianrailways.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment