ಕೆಸೆಟ್‌ 2026ರ ತಾತ್ಕಾಲಿಕ ಫಲಿತಾಂಶ ಪ್ರಕಟ

Published on:

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್)‌ಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ(ಅ.24) ಪ್ರಕಟಿಸಿದೆ.

ಒಟ್ಟು 37 ವಿಷಯಗಳ ಪತ್ರಿಕೆ-1 ಮತ್ತು ಪತ್ರಿಕೆ-2 ಒಳಗೊಂಡ ಪರೀಕ್ಷೆಯನ್ನು ರಾಜ್ಯದ ನಾನಾ ಪರೀಕ್ಷಾ ಕೇಂದ್ರಗಳಲ್ಲಿ ಅ.11ರಂದು ನಡೆಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ವಯ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/kset2026ದಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ಅ.26ರ ಬೆಳಗ್ಗೆ 10:30ರೊಳಗೆ ಪೂರಕ ದಾಖಲೆಗಳ ಮೂಲಕ ಸಲ್ಲಿಸಬಹುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಳಮೀಸಲಾತಿ ಜಾತಿ ಪ್ರಮಾಣದ (ಎಸ್‌ಸಿಎ/ಎಸ್‌ಸಿಬಿ/ಎಸ್‌ಸಿಸಿ) ಆರ್‌ಡಿ ಸಂಖ್ಯೆಯನ್ನು ನಮೂದಿಸದೇ ಇರುವ ಅಭ್ಯರ್ಥಿಗಳ ಹಿತದೃಷ್ಟಯಿಂದ ಕೆಸೆಟ್‌ ತಾತ್ಕಾಲಿಕ ಫಲಿತಾಂಶ ಪರಿಶೀಲನೆಯ ಸಂದರ್ಭದಲ್ಲಿ ಆರ್‌ಡಿ ಸಂಖ್ಯೆಯನ್ನು ಅ.28ರ ಬೆಳಗ್ಗೆ 10 ಗಂಟೆಯೊಳಗೆ ನಮೂದಿಸಲು ಅವಕಾಶ ನೀಡಲಾಗಿದೆ. ಇಲ್ಲದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು ಎಂದು ಕೆಇಎ ಸೂಚಿಸಿದೆ.

ಕೆಸೆಟ್‌ 2026ರ ಫಲಿತಾಂಶ ಪರಿಶೀಲನೆ ಹೇಗೆ?

ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspxಕ್ಕೆ ಭೇಟಿ ನೀಡಿ.

ಹಂತ-2 ಮುಖಪುಟದಲ್ಲಿ ಮೆನುನಲ್ಲಿ “ಪ್ರವೇಶ” ವಿಭಾಗದಲ್ಲಿ “ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2026” ಉಪವಿಭಾಗದಡಿ ನೀಡಲಾದ “KSET – 2026 ತಾತ್ಕಾಲಿಕ ಫಲಿತಾಂಶಗಳ ಲಿಂಕ್ . 24/10/2026” ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ.

ಹಂತ-3 ಹೊಸಪುಟ ತೆರೆದುಕೊಳ್ಳುತ್ತದೆ, ಅಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ(Enter Application Number) ಮತ್ತು ಹುಟ್ಟಿದ ದಿನಾಂಕ(Date of Birth) ಹಾಕಿ, Submit(ಸಲ್ಲಿಸು) ಬಟನ್‌ ಮೇಲೆ ಕ್ಲಿಕ್ಕಿಸಬೇಕು. ಈಗ ಫಲಿತಾಂಶ ಪರದೆಯಾಗುತ್ತದೆ.

ಕೆಸೆಟ್‌ 2026ರ ತಾತ್ಕಾಲಿಕ ಫಲಿತಾಂಶ ಪ್ರಕಟ
ಕೆಸೆಟ್‌ 2026ರ ತಾತ್ಕಾಲಿಕ ಫಲಿತಾಂಶ ವಿಂಡೋ

ಮುಖ್ಯ ಲಿಂಕ್‌ಗಳು:

ಕೆಸೆಟ್‌ 2026ರ ತಾತ್ಕಾಲಿಕ ಫಲಿತಾಂಶ ಲಿಂಕ್ಈಗಲೇ ಪರಿಶೀಲಿಸಿ
ಕೆಸೆಟ್‌ 2026ರ ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆ ಸಲ್ಲಿಕೆ ಲಿಂಕ್ಆಕ್ಷೇಪಣೆ ಸಲ್ಲಿಸಿ
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment