ಗ್ರಾಮ ಆಡಳಿತಾಧಿಕಾರಿ(ಆರ್‌ಪಿಸಿ): ತಾತ್ಕಾಲಿಕ ಫಲಿತಾಂಶ ಪ್ರಕಟ

Published on:

ಬೆಂಗಳೂರು: ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ.04ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಸೋಮವಾರ(ಅ.19) ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅ.22ರವರೆಗೆ ಅವಕಾಶವಿದೆ.

ಸದರಿ ಪರೀಕ್ಷೆಗೆ ಸಂಬಂಧಿಸಿದಂತೆ ಅ.06ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಲ್ಲಿಕೆಯಾದ ಕೀ ಉತ್ತರಗಳನ್ನು ವಿಷಯ ತಜ್ಞರ ಸಮಿತಿ ಪರಿಶೀಲಿಸಿ ಪರಿಷ್ಕೃತ ಕೀ ಉತ್ತರಗಳನ್ನು ಅ.16ರಂದು ಪ್ರಚುರಪಡಿಸಲಾಗಿರುತ್ತದೆ.

ಇದೀಗ ಪರಿಷ್ಕೃತ ಕೀ ಉತ್ತರಗಳನ್ವಯ, ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರದ ಆಧಿಕೃತ ಜಾಲತಾಣ https://cetonline.karnataka.gov.in/kea/vaorpc2026ನಲ್ಲಿ ಬಿಡುಗಡೆಗೊಳಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.

ಪ್ರಕಟಿತ ತಾತ್ಕಾಲಿಕ ಫಲಿತಾಂಶಕ್ಕೆ ನಿಗದಿತ ಲಿಂಕ್ನಿಂದ ಪೂರಕ ದಾಖಲೆಗಳನ್ನು ಸಲ್ಲಿಸುವ ಮುಖೇನ ಅ.22ರ ಬೆಳಗ್ಗೆ 10 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ಗ್ರಾಮ ಆಡಳಿತಾಧಿಕಾರಿ(ಆರ್‌ಪಿಸಿ) ಪರೀಕ್ಷೆಯ ಫಲಿತಾಂಶ ಪರಿಶೀಲನೆ ಹೀಗೆ….

ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ “ನೇಮಕಾತಿ” ವಿಭಾಗದಡಿ “ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ – 2026 (RPC)” ಉಪವಿಭಾಗಕ್ಕೆ ಭೇಟಿ ನೀಡಿ.

ಹಂತ-2 ನಂತರ, ಅಲ್ಲಿ “VAO-RPC – ತಾತ್ಕಾಲಿಕ ಫಲಿತಾಂಶದ ಲಿಂಕ್ – 19-10-2026(https://kearecruitment.karnataka.gov.in/resrecruitment/RPCVillageAO.aspx)” ಶೀರ್ಷಿಕೆ ಲಿಂಕ್‌ ಮೇಲೆ ಕ್ಲಿಕ್ಕಿಸಿ.

Kea Vao Rpc Posts Exam 2026 Provisional Result Window
ಗ್ರಾಮ ಆಡಳಿತಾಧಿಕಾರಿ(ಆರ್‌ಪಿಸಿ) ತಾತ್ಕಾಲಿಕ ಫಲಿತಾಂಶ ಪರಿಶೀಲನೆ ವಿಂಡೋ..

ಹಂತ-3 ತದನಂತರ, ಹೊಸಪುಟ ತೆರೆಯುತ್ತದೆ ಆಗ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ(Application Number) ಹಾಗೂ ಹುಟ್ಟಿದ ದಿನಾಂಕ(Date of Birth) ತುಂಬಿ ಸಲ್ಲಿಸು(Submit) ಬಟನ್‌ ಮೇಲೆ ಒತ್ತಿ. ಈಗ ನಿಮ್ಮ ಫಲಿತಾಂಶ ಪರದೆಯಾಗುತ್ತದೆ.

ಪ್ರಮುಖ ಲಿಂಕ್‌ಗಳು:

ಗ್ರಾಮ ಆಡಳಿತಾಧಿಕಾರಿ(ಆರ್‌ಪಿಸಿ) ತಾತ್ಕಾಲಿಕ ಫಲಿತಾಂಶ ಪರಿಶೀಲನೆ ಲಿಂಕ್ಚೆಕ್‌ ಮಾಡಿ
ಫಲಿತಾಂಶಕ್ಕೆ ಆಕ್ಷೇಪಣೆ ಸಲ್ಲಿಸುವ ಲಿಂಕ್ಆಕ್ಷೇಪಣೆ ಮಾಡಿ
ಅಧಿಕೃತ ಜಾಲತಾಣhttps://cetonline.karnataka.gov.in/kea
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment