ಸಂಪುಟ ಸಚಿವಾಲಯದಲ್ಲಿ ಉಪ ಕ್ಷೇತ್ರ ಅಧಿಕಾರಿ(DFO) ಉದ್ಯೋಗಾವಕಾಶ!

ಶಾರ್ಟ್‌ಲಿಸ್ಟ್‌ ಮೂಲಕ ಆಯ್ಕೆ

Published on:

ಭಾರತ ಸರ್ಕಾರದ ಸಂಪುಟ ಸಚಿವಾಲಯದ(ಕ್ಯಾಬಿನೆಟ್ ಸೆಕ್ರೆಟರಿಯೇಟ್) ವತಿಯಿಂದ ಉಪ ಕ್ಷೇತ್ರ ಅಧಿಕಾರಿ(ತಾಂತ್ರಿಕ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ.

ನಾನಾ ವಿಷಯಗಳನ್ನೊಳಗೊಂಡಂತೆ ಒಟ್ಟು 250 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಗೇಟ್‌ ಸ್ಕೋರ್‌ ಆಧಾರದ ಮೇಲೆ ನಡೆಯಲಿದೆ. ಅರ್ಹ ಆಸಕ್ತರು ಆಫ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್‌ 15

ವಿಷಯವಾರು ಹುದ್ದೆಗಳ ವಿವರಗಳು:

ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ 112 ಹುದ್ದೆಗಳು
ಎಲೆಕ್ಟ್ರಾನಿಕ್ಸ್/ಕಮ್ಯುನಿಕೇಷನ್/ಟೆಲಿಕಮ್ಯುನಿಕೇಷನ್ 112 ಹುದ್ದೆಗಳು
ಡೇಟಾ ಸೈನ್ಸ್/ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಡೇಟಾ ಸೈನ್ಸ್/ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪೆಷಲೈಸೇಶನ್ ಹೊಂದಿರುವ ಕಂಪ್ಯೂಟರ್ ಸೈನ್ಸ್ 10 ಹುದ್ದೆಗಳು
ಭೌತಶಾಸ್ತ್ರ 05 ಹುದ್ದೆಗಳು
ಮೆಕ್ಯಾನಿಕಲ್ ಎಂಜಿನಿಯರಿಂಗ್ 04 ಹುದ್ದೆಗಳು
ಸಿವಿಲ್ ಎಂಜಿನಿಯರಿಂಗ್ 03 ಹುದ್ದೆಗಳು
ರಸಾಯನಶಾಸ್ತ್ರ 02 ಹುದ್ದೆಗಳು
ಗಣಿತಶಾಸ್ತ್ರ 01 ಹುದ್ದೆ
ಸಂಖ್ಯಾಶಾಸ್ತ್ರ 01 ಹುದ್ದೆ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಬ್ಯಾಚುಲರ್ ಪದವಿ (B.E/B.Tech) ಅಥವಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ(M.Sc) ಹೊಂದಿರಬೇಕು.

ಇದರೊಂದಿಗೆ, ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ 2024, 2025 ಅಥವಾ 2026ನೇ ಸಾಲಿನ ಗೇಟ್(GATE) ಪರೀಕ್ಷೆಯಲ್ಲಿ ಅರ್ಹತಾ ಕಟ್‌-ಆಫ್ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಮತ್ತು ಮಾನ್ಯವಾದ ಗೇಟ್ ಸ್ಕೋರ್ ಕಾರ್ಡ್ ಹೊಂದಿರಬೇಕು.

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.

ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗಗಳು (OBC), ಕೇಂದ್ರ ಸರ್ಕಾರದ ನೌಕರರು ಮತ್ತು ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟ್ ಮಾಡುವುದು: ಸ್ವೀಕರಿಸಿದ ಅರ್ಜಿಗಳನ್ನು ಗೇಟ್ (GATE) ಸ್ಕೋರ್ ಆಧಾರದ ಮೇಲೆ ಮೆರಿಟ್ ಕ್ರಮದಲ್ಲಿ ಜೋಡಿಸಲಾಗುತ್ತದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಗಿಂತ ಐದು ಪಟ್ಟು (5 times) ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಅಂತಿಮ ಆಯ್ಕೆ: ಅಭ್ಯರ್ಥಿಗಳ ಅಂತಿಮ ಆಯ್ಕೆಯು ಗೇಟ್ ಸ್ಕೋರ್ (GATE Score) ಮತ್ತು ಸಂದರ್ಶನದಲ್ಲಿ (Interview) ಗಳಿಸಿದ ಅಂಕಗಳ ಆಧಾರದ ಮೇಲೆ ಇರುತ್ತದೆ. ಜೊತೆಗೆ ಚಾರಿತ್ರ್ಯ ಮತ್ತು ಹಿನ್ನೆಲೆ ಪರಿಶೀಲನೆ (Character & Antecedent verification) ಹಾಗೂ ವೈದ್ಯಕೀಯ ಪರೀಕ್ಷೆಗಳು ಇರುತ್ತವೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಸಂಬಳ:

ನವದೆಹಲಿಯಲ್ಲಿ ಪೋಸ್ಟಿಂಗ್ ಪಡೆದರೆ, ಪೇ ಮ್ಯಾಟ್ರಿಕ್ಸ್‌ನ ಲೆವೆಲ್-7 ರಂತೆ ಎಲ್ಲಾ ಭತ್ಯೆಗಳನ್ನು ಒಳಗೊಂಡು, ಆರಂಭಿಕ ಒಟ್ಟು ಮಾಸಿಕ ವೇತನವು ಅಂದಾಜು ರೂ.1,00,000/- ಇರಲಿದೆ.

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್‌ಲೈನ್‌ ಮೂಲಕ ಇರುವುದರಿಂದ ಅರ್ಜಿ ಶುಲ್ಕವಿರುವುದಿಲ್ಲ. ಆದರೆ ಅಂಚೆ ಶುಲ್ಕ ಅನ್ವಯವಾಗಬಹುದು.

ಅಗತ್ಯ ದಾಖಲೆಗಳೇನು ಬೇಕು?

  • ಮೆಟ್ರಿಕ್ಯುಲೇಷನ್ (10ನೇ ತರಗತಿ), 10+2, B.E./B.Tech/M.Sc ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳು.
  • ವಯಸ್ಸಿನ ಪುರಾವೆಗಾಗಿ ಜನ್ಮ ಪ್ರಮಾಣಪತ್ರ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್/ಪ್ಯಾನ್ ಕಾರ್ಡ್.
  • ಮಾನ್ಯವಾದ ಗೇಟ್ (GATE) ಸ್ಕೋರ್ ಕಾರ್ಡ್.
  • ವಯೋಮಿತಿ ಸಡಿಲಿಕೆ ಕೋರುವವರು ಜಾತಿ ಪ್ರಮಾಣಪತ್ರ (SC/ST/OBC).
  • ಪ್ರಸ್ತುತ ಉದ್ಯೋಗದಲ್ಲಿದ್ದರೆ ಉದ್ಯೋಗದಾತರಿಂದ ನಿರಾಕ್ಷೇಪಣಾ ಪತ್ರ (NOC).
  • ಮಾಜಿ ಸೈನಿಕರಾಗಿದ್ದರೆ ನಿಗದಿತ ಮುಚ್ಚಳಿಕೆ ಪತ್ರ ಮತ್ತು ಡಿಸ್ಚಾರ್ಜ್ ಪ್ರಮಾಣಪತ್ರ.
  • ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರಗಳು (ಹಿಂಭಾಗದಲ್ಲಿ ಹೆಸರು ಮತ್ತು ಜನ್ಮ ದಿನಾಂಕ ಬರೆದಿರಬೇಕು ಎಂದು ಸೂಚಿಸಲಾಗಿದೆ).

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಕೇವಲ ಒಂದು ವಿಷಯಕ್ಕೆ(ಅಂದರೆ ಒಂದು ಹುದ್ದೆಗೆ) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಭರ್ತಿ ಮಾಡಿದ ಅರ್ಜಿ ಮತ್ತು ಸ್ವಯಂ-ದೃಢೀಕರಿಸಿದ(Self-attested) ಅಗತ್ಯ ದಾಖಲೆಗಳ ಲಕೋಟೆಯನ್ನು ಸಾಮಾನ್ಯ ಅಂಚೆ (ORDINARY POST) ಮೂಲಕ ನ.15ರೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ಪೋಸ್ಟ್‌ ಬ್ಯಾಗ್‌. 001, ಲೋಧಿ ರೋಡ್‌ ಹೆಡ್‌ ಪೋಸ್ಟ್‌ ಆಫೀಸ್‌, ನವದೆಹಲಿ-110003

ಅರ್ಜಿಯನ್ನು ಎ-4 (A-4) ಗಾತ್ರದ ಕಾಗದದಲ್ಲಿ ಇಂಗ್ಲಿಷ್‌ನ ಕ್ಯಾಪಿಟಲ್ (Block) ಅಕ್ಷರಗಳಲ್ಲಿ ಕಪ್ಪು ಅಥವಾ ನೀಲಿ ಶಾಯಿಯನ್ನು ಬಳಸಿ ಟೈಪ್ ಮಾಡಿರಬೇಕು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಅಧಿಕೃತ ಜಾಲತಾಣhttps://cabsec.gov.in/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment