ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್‌ನಲ್ಲಿ ಟ್ರೇಡ್ಸ್‌ಮ್ಯಾನ್ ಟ್ರೈನಿ ಹುದ್ದೆಗಳು

ಐಟಿಐ ಅರ್ಹತೆ

Published on:

ಮುಂಬೈ: ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿರುವ, ಪರಮಾಣು ಶಕ್ತಿ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಐಆರ್‌ಇಎಲ್(ಇಂಡಿಯಾ) ಲಿಮಿಟೆಡ್‌ ಸಂಸ್ಥೆಯು ಟ್ರೇಡ್ಸ್‌ಮ್ಯಾನ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.‌

ಫಿಟ್ಟರ್ ಟ್ರೇಡ್‌ನಲ್ಲಿ 93 ಸ್ಥಾನಗಳು, ಎಲೆಕ್ಟ್ರಿಷಿಯನ್ ಟ್ರೇಡ್‌ನಲ್ಲಿ 12 ಸ್ಥಾನಗಳು, ಇನ್ಸ್ಟ್ರುಮೆಂಟೇಶನ್ ಟ್ರೇಡ್‌ನಲ್ಲಿ 6 ಸ್ಥಾನಗಳು ಮತ್ತು ಅಟೆಂಡೆಂಟ್ ಆಪರೇಟರ್ ಕೆಮಿಕಲ್ ಪ್ಲಾಂಟ್ ಟ್ರೇಡ್‌ನಲ್ಲಿ 20 ಸ್ಥಾನಗಳು ಸೇರಿದಂತೆ 131 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ನೋಂದಣಿ ಆರಂಭ- ಅಕ್ಟೋಬರ್‌ 19
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 09(ಸಂಜೆ 6:00 ಗಂಟೆಯವರೆಗೆ)

ಶೈಕ್ಷಣಿಕ ಅರ್ಹತೆ:

ಟ್ರೇಡ್ಸ್‌ಮ್ಯಾನ್ ಟ್ರೈನಿ (ಫಿಟ್ಟರ್/ಎಲೆಕ್ಟ್ರಿಷಿಯನ್/ಇನ್ಸ್ಟ್ರುಮೆಂಟೇಶನ್) ಹುದ್ದೆಗೆ; ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ(ITI) ಅಥವಾ ಎನ್‌ಎಸಿ(NAC) ಪ್ರಮಾಣಪತ್ರ ಹೊಂದಿರಬೇಕು.

ಟ್ರೇಡ್ಸ್‌ಮ್ಯಾನ್ ಟ್ರೈನಿ (ಅಟೆಂಡೆಂಟ್ ಆಪರೇಟರ್ ಕೆಮಿಕಲ್ ಪ್ಲಾಂಟ್) ಹುದ್ದೆಗೆ; ಐಟಿಐ/ಎನ್‌ಎಸಿ (ಕೆಮಿಕಲ್ ಪ್ಲಾಂಟ್) ಅಥವಾ ರಸಾಯನಶಾಸ್ತ್ರ ವಿಷಯದೊಂದಿಗೆ +2 (ವಿಜ್ಞಾನ) ಪೂರ್ಣಗೊಳಿಸಿ, ಒಟ್ಟು 50% ಅಂಕಗಳನ್ನು ಪಡೆದಿರಬೇಕು.

ಹೆಚ್ಚುವರಿಯಾಗಿ, ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ(09/11/2026)ದಂದು ಗರಿಷ್ಠ ವಯೋಮಿತಿ 35 ವರ್ಷಗಳು. ಜತೆಗೆ ಸರ್ಕಾರಿ ನೇಮಕಾತಿ ನಿಯಮಾನುಸಾರ ಆಯಾ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ- ವೃತ್ತಿಪರ ಜ್ಞಾನ ಮತ್ತು ಸಾಮಾನ್ಯ ಜ್ಞಾನ/ತಾರ್ಕಿಕ ಸಾಮರ್ಥ್ಯ ವಿಭಾಗಗಳನ್ನು ಒಳಗೊಂಡಿದೆ)
  • ಕೌಶಲ್ಯ ಪರೀಕ್ಷೆ(Skill Test)

ಸಿಬಿಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಅಂತಿಮ ಆಯ್ಕೆಯು ಸಿಬಿಟಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಇರುತ್ತದೆ.

ಸಂಬಳ:

ತರಬೇತಿಯ ಅವಧಿಯಲ್ಲಿ ಮಾಸಿಕ ರೂ.34,200/- ಸ್ಟೈಫಂಡ್(ಶಿಷ್ಯವೇತನ) ನೀಡಲಾಗುತ್ತದೆ.

ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅಭ್ಯರ್ಥಿಗಳನ್ನು ಡಬ್ಲ್ಯೂ-3 ಗ್ರೇಡ್‌ನಲ್ಲಿ ರೂ.22,000 – 88,000/- ವೇತನ ಶ್ರೇಣಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ವಾರ್ಷಿಕ ಸಿಟಿಸಿ(CTC) ಸುಮಾರು ರೂ. 6.5 ಲಕ್ಷಗಳಾಗಿರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ(ಎನ್‌ಸಿಎಲ್)‌ ವರ್ಗದ ಅಭ್ಯರ್ಥಿಗಳಿಗೆ- ರೂ.826/- (ರೂ.472 ಅರ್ಜಿ ಶುಲ್ಕ + ರೂ. 354 ಸಂಸ್ಕರಣಾ ಶುಲ್ಕ).
  • ಪ.ಜಾತಿ/ಪ.ಪಂಗಡ/ಪಿಡಬ್ಲ್ಯೂಬಿಡಿ/ಇಎಸ್‌ಎಂ/ಮಹಿಳೆಯರು ಮತ್ತು ಆಂತರಿಕ ಅಭ್ಯರ್ಥಿಗಳಿಗೆ- ರೂ.354/- (ಸಂಸ್ಕರಣಾ ಶುಲ್ಕ ಮಾತ್ರ).

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಐಆರ್‌ಇಎಲ್‌ನ ಅಧಿಕೃತ ವೆಬ್‌ಸೈಟ್ https://www.irel.co.in/careersಗೆ ಭೇಟಿ ನೀಡಿ. ಅಲ್ಲಿ “Advt. No. CO/HRM/36/2026 – Detailed Advertisement for Recruitment of Tradesman Trainees” ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ, ಆಗ “Application Form” ಶೀರ್ಷಿಕೆಯ ಲಿಂಕ್‌ ಮೇಲೆ ಕ್ಲಿಕ್ಕಿಸಿ. ಮುಂದೆ ಆನ್‌ಲೈನ್ ಅರ್ಜಿ ನಮೂನೆ ಲಿಂಕ್‌ ತೆರೆದುಕೊಳ್ಳುತ್ತದೆ. ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಂಡು ಅಗತ್ಯವಿರುವ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು.

Irel Various Trade Tradesman Trainee Online Application Form 2026
ಆನ್‌ಲೈನ್ ಅರ್ಜಿ ನಮೂನೆಯ ಚಿತ್ರಪಟ

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್‌ ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣwww.irel.co.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment