ಬೆಂಗಳೂರು ಅ.17: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಕರ್ನಾಟಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ(ಇಎಸ್ಐಎಸ್ಎಂಎಸ್)ಯ ಉಳಿಕೆ ಮೂಲ ವೃಂದದ ಫಾರ್ಮಸಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪತ್ರಿಕೆ-2ರ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಸದರಿ ಪರೀಕ್ಷೆಯನ್ನು ಅ.26ರ ಮಧ್ಯಾಹ್ನ 2:30ರಿಂದ 4:30ರವರೆಗೆ ನಡೆಸಲು ನಿರ್ಧರಿಸಲಾಗಿತ್ತು, ಕಾರಣಾಂತರಗಳಿಂದ ಕೆಇಎ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಅದರ ಬದಲಾಗಿ ಅ.31ರಂದು ಮಧ್ಯಾಹ್ನ 03ರಿಂದ ಸಂಜೆ 05ರವರೆಗೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಳಿದಂತೆ, ಅ.07ರಂದು ಪ್ರಕಟಿಸಲಾದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.