ಜೈಪುರ: ಉತ್ತರ-ಪಶ್ಚಿಮ ರೈಲ್ವೆ(ಎನ್‌ಡಬ್ಲ್ಯೂಆರ್)ಯು ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 2008 ಸೀಟುಗಳಿದ್ದು, ರೈಲ್ವೆ ವಲಯದ ವಿವಿಧ ವರ್ಕ್‌ಶಾಪ್‌ಗಳು ಮತ್ತು ಯುನಿಟ್‌ಗಳಿಗೆ ಐಟಿಐ ಅಂಕಗಳ ಆಧಾರದ ಮೇಲೆ ಮೆರಿಟ್ ಅನುಗುಣವಾಗಿ ಭರ್ತಿ ಮಾಡಿಕೊಳ್ಳಲಿದೆ.
ಪ್ರಮುಖ ದಿನಾಂಕಗಳು:
- ಪರಿಷ್ಕೃತ ಅಧಿಸೂಚನೆ ಪ್ರಕಟವಾದ ದಿನಾಂಕ- ಅಕ್ಟೋಬರ್ 21
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 23
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ- ನವೆಂಬರ್ 22(ರಾತ್ರಿ 23:59 ಗಂಟೆಯವರೆಗೆ)
ಹುದ್ದೆಗಳ ಸಂಖ್ಯೆ:
ಒಟ್ಟು ಲಭ್ಯವಿರುವ ಅಪ್ರೆಂಟಿಸ್ ತರಬೇತಿ ಸ್ಲಾಟ್‌ಗಳ ಸಂಖ್ಯೆ: 2008.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿ (ಅಥವಾ ತತ್ಸಮಾನ 10+2 ಪದ್ಧತಿಯಡಿ) ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT ಅಥವಾ SCVT ಇಂದ ಮಾನ್ಯತೆ ಪಡೆದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ(ಐಟಿಐ) ಹೊಂದಿರಬೇಕು.
ಅಂತಿಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ:
22-11-2026 ರಂತೆ;
ಕನಿಷ್ಠ ವಯಸ್ಸು 15 ವರ್ಷಗಳು ಹಾಗೂ ಗರಿಷ್ಠ ವಯಸ್ಸು 24 ವರ್ಷಗಳು.
ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ವಿಕಲಚೇತನ(ಪಿಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ 10 ವರ್ಷಗಳು ಮತ್ತು ಮಾಜಿ ಸೈನಿಕರಿಗೆ ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವಾ ಅವಧಿ + 3 ವರ್ಷಗಳು (ಗರಿಷ್ಠ 10 ವರ್ಷಗಳವರೆಗೆ ಸಡಿಲಿಕೆ).
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ(ಐಟಿಐ ಮತ್ತು 10ನೇ ತರಗತಿ ಅಂಕಗಳ ಆಧಾರದ ಮೇಲೆ)
- ಮೂಲ ದಾಖಲಾತಿಗಳ ಪರಿಶೀಲನೆ (ಡಿವಿ)
- ವೈದ್ಯಕೀಯ ತಪಾಸಣೆ (ಎಂಇ).
ಸಂಬಳ/ಸ್ಟೈಪೆಂಡ್:
ತರಬೇತಿ ಅವಧಿ ಮತ್ತು ಸ್ಟೈಪೆಂಡ್ ಅನ್ನು ರೈಲ್ವೆ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳು ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳಿಗೆ ರೂ.100/-
- ಎಸ್‌ಸಿ/ಎಸ್‌ಟಿ, ವಿಕಲಚೇತನ(ಪಿಡಬ್ಲೂಬಿಡಿ) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಉಚಿತ).
ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಕೋಶ(RRC) ಜೈಪುರದ ಅಧಿಕೃತ ವೆಬ್‌ಸೈಟ್ www.rrcjaipur.in ನಲ್ಲಿ ಲಭ್ಯಿರುವ ಲಿಂಕ್ ಮೂಲಕ ವೈಯಕ್ತಿಕ ವಿವರಗಳು ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ, ತಮಗೆ ಅನ್ವಯವಾಗುವ ಅರ್ಜಿ ಶುಲ್ಕ ತುಂಬಿ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ಅ.23 ರಿಂದ) | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | http://www.rrcjaipur.in/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |