ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಹೆಚ್‌ಇಎಲ್) ತನ್ನ ವಿವಿಧ ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ ‘ಆರ್ಟಿಸನ್ ಗ್ರೇಡ್-IV’ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಫಿಟ್ಟರ್ (278), ವೆಲ್ಡರ್ (104), ಟರ್ನರ್ (52), ಮೆಕ್ಯಾನಿಸ್ಟ್ (101), ಎಲೆಕ್ಟ್ರಿಷಿಯನ್ (90), ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕ್(20) ಹಾಗೂ ಫೌಂಡ್ರಿ ಮ್ಯಾನ್ (12) ಟ್ರೇಡ್ ಸೇರಿದಂತೆ ಒಟ್ಟು 660 ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅ.21ರಿಂದ ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://careers.bhel.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- ಅಕ್ಟೋಬರ್ 21ರ ಬೆಳಿಗ್ಗೆ 10:00 ಗಂಟೆಗೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 18ರ ರಾತ್ರಿ 11:45ಕ್ಕೆ.
- ಪರೀಕ್ಷೆಯ ದಿನಾಂಕ(ಅಂದಾಜು)- ಡಿಸೆಂಬರ್ 11, 2026.
ಶೈಕ್ಷಣಿಕ ಅರ್ಹತೆ:
01-10-2026ರಂತೆ;
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ 10ನೇ ತರಗತಿಯೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ(ಎನ್‌ಟಿಸಿ/ಐಟಿಐ) ಮತ್ತು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರವನ್ನು(NAC) ಹೊಂದಿರಬೇಕು.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳನ್ನು, ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ವಯೋಮಿತಿ:
01-10-2026ರಂತೆ;
ಸಾಮಾನ್ಯ ಮತ್ತು ಇಡಬ್ಲ್ಯೂಎಸ್(EWS) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷಗಳು.
ಮೀಸಲಾತಿ ವರ್ಗದವರಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ (ಎಸ್‌ಸಿ/ಎಸ್‌ಟಿ: 5 ವರ್ಷ, ಒಬಿಸಿ: 3 ವರ್ಷ, ಪಿಡಬ್ಲ್ಯೂಡಿ: 10-15 ವರ್ಷ). ಗರಿಷ್ಠ ವಯೋಮಿತಿ ಎಲ್ಲಾ ಸಡಿಲಿಕೆಗಳೊಂದಿಗೆ 56 ವರ್ಷ ಮೀರುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ನೇಮಕಾತಿಯು ಎರಡು ಹಂತಗಳಲ್ಲಿ ನಡೆಯುತ್ತದೆ:
- ಹಂತ I: ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಇ).
- ಹಂತ II: ಕೌಶಲ್ಯ ಪರೀಕ್ಷೆ(Skill Test) ಮತ್ತು ದಾಖಲೆಗಳ ಪರಿಶೀಲನೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳು, ಮೊದಲ ಒಂದು ವರ್ಷ ‘ತಾತ್ಕಾಲಿಕ ಆರ್ಟಿಸನ್’ ಆಗಿ ಕೆಲಸ ಮಾಡಬೇಕು, ಈ ಅವಧಿಯಲ್ಲಿ ಮಾಸಿಕ ರೂ.24,000 ಸಂಚಿತ ವೇತನ ನೀಡಲಾಗುತ್ತದೆ.
ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರನ್ನು ‘ಆರ್ಟಿಸನ್ ಗ್ರೇಡ್-IV’ ಆಗಿ ನಿಯಮಿತಗೊಳಿಸಲಾಗುತ್ತದೆ ಮತ್ತು ರೂ.29,500 – ರೂ.65,000 ವೇತನ ಶ್ರೇಣಿಯಲ್ಲಿ ನೇಮಿಸಲಾಗುತ್ತದೆ.
ಅರ್ಜಿ ಶುಲ್ಕ:
- ಯುಆರ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ- ರೂ.1072 (ಪರೀಕ್ಷಾ ಶುಲ್ಕ ರೂ.600 + ಪ್ರಕ್ರಿಯೆ ಶುಲ್ಕ ರೂ.400 + ಜಿಎಸ್‌ಟಿ).
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಮಾಜಿ ಸೈನಿಕರಿಗೆ- ರೂ.472 (ಪ್ರಕ್ರಿಯೆ ಶುಲ್ಕ ರೂ.400 + ಜಿಎಸ್‌ಟಿ).
ಅರ್ಜಿ ಸಲ್ಲಿಕೆ ಹೇಗೆ?
ಹಂತ-01 ಅಧಿಕೃತ ಜಾಲತಾಣ https://careers.bhel.in/index.jspಕ್ಕೆ ಭೇಟಿ ನೀಡಿ.
ಹಂತ-02 ಮುಂದೆ, “Current Openings” ವಿಭಾಗದಡಿ “Artisan Recruitment – 2027” ಶೀರ್ಷಿಕೆಯಡಿ ನೀಡಲಾದ “Apply Online” ಲಿಂಕ್ ಕ್ಲಿಕ್ಕಿಸಿ, ಈಗ ಹೊಸಪುಟ ತೆರೆಯುತ್ತದೆ. ಇವಾಗ ಅಭ್ಯರ್ಥಿಗಳು ಹೊಸ ಬಳಕೆದಾರರಾಗಿ(Register) ನೋಂದಣಿ ಮಾಡಿಕೊಂಡು ಅರ್ಜಿ ನಮೂನೆಯನ್ನು ತುಂಬಿ, ವರ್ಗಕ್ಕೆ ನಿಗದಿತ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಸಲ್ಲಿಸಿ |
| ಅಧಿಕೃತ ಜಾಲತಾಣ | www.bhel.com |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್ .ಇನ್ |