ತಿರುಪತಿ(ಆಂದ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ISRO) ಅಧೀನದಲ್ಲಿರುವ ಭಾರತದ ಬಾಹ್ಯಾಕಾಶ ಉಡಾವಣಾ ಕೇಂದ್ರವಾಗಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು (ಎಸ್‌ಡಿಎಸ್‌ಸಿ ಎಸ್‌ಹೆಚ್‌ಎಆರ್) ವಿವಿಧ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ತಾಂತ್ರಿಕ ಸಹಾಯಕ 14, ವೈಜ್ಞಾನಿಕ ಸಹಾಯಕ 03, ಲೈಬ್ರರಿ ಅಸಿಸ್ಟೆಂಟ್ ‘ಎ’ 03, ನರ್ಸ್ ‘ಬಿ’ 03, ಟೆಕ್ನಿಷಿಯನ್ ‘ಬಿ’ 33, ಡ್ರಾಫ್ಟ್ಸ್‌ಮನ್ ‘ಬಿ’ 01, ಫೈರ್‌ಮ್ಯಾನ್ ‘ಎ’ 02, ಲಘು ವಾಹನ ಚಾಲಕ ‘ಎ’ 05, ಭಾರೀ ವಾಹನ ಚಾಲಕ ‘ಎ’ 07, ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) 16 ಸೇರಿದಂತೆ ಒಟ್ಟು 88 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 19
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 09(ರಾತ್ರಿ 23:59 ಗಂಟೆಯವರೆಗೆ)
ಶೈಕ್ಷಣಿಕ ಅರ್ಹತೆ:
ತಾಂತ್ರಿಕ ಸಹಾಯಕ (ಪೋಸ್ಟ್ ಕೋಡ್ 07 to 11) ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಸಿವಿಲ್) ಪ್ರಥಮ ದರ್ಜೆಯ ಡಿಪ್ಲೊಮಾ (ಕನಿಷ್ಠ 3 ವರ್ಷಗಳ ಅವಧಿ) ಹೊಂದಿರಬೇಕು.
ವೈಜ್ಞಾನಿಕ ಸಹಾಯಕ (ಪೋಸ್ಟ್ ಕೋಡ್ 12 & 13) ಹುದ್ದೆಗೆ; ಭೌತಶಾಸ್ತ್ರ- ಪ್ರಥಮ ದರ್ಜೆ ಬಿ.ಎಸ್ಸಿ. (ಭೌತಶಾಸ್ತ್ರ ಮುಖ್ಯ ವಿಷಯ ಹಾಗೂ ಗಣಿತ ಮತ್ತು ರಸಾಯನಶಾಸ್ತ್ರ ಪೂರಕ ವಿಷಯಗಳಾಗಿರಬೇಕು). ಲಲಿತಕಲೆ/ದೃಶ್ಯಕಲೆ- ಪ್ರಥಮ ದರ್ಜೆಯ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (ಫೋಟೋಗ್ರಫಿ) / ವಿಶುವಲ್ ಆರ್ಟ್ಸ್ (ಸಿನೆಮಟೋಗ್ರಫಿ) ಪದವಿ.
ಲೈಬ್ರರಿ ಅಸಿಸ್ಟೆಂಟ್ ‘ಎ’ (ಪೋಸ್ಟ್ ಕೋಡ್ 14) ಹುದ್ದೆಗೆ; ಪ್ರಥಮ ದರ್ಜೆ ಪದವಿ ಮತ್ತು ಪ್ರಥಮ ದರ್ಜೆಯ ಲೈಬ್ರರಿ ಸೈನ್ಸ್ / ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ.
ನರ್ಸ್ ‘ಬಿ’ (ಪೋಸ್ಟ್ ಕೋಡ್ 15) ಹುದ್ದೆಗೆ; ಕನಿಷ್ಠ 3 ವರ್ಷಗಳ ಅವಧಿಯ ಪ್ರಥಮ ದರ್ಜೆ ನರ್ಸಿಂಗ್ ಡಿಪ್ಲೊಮಾ ಮತ್ತು ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.
ಟೆಕ್ನಿಷಿಯನ್ ‘ಬಿ’ / ಡ್ರಾಫ್ಟ್ಸ್‌ಮನ್ ‘ಬಿ’ (Technician ‘B’ / Draughtsman ‘B’ – Post Code 16 to 25) ಹುದ್ದೆಗೆ; ಎಸ್‌ಎಸ್‌ಎಲ್‌ಸಿ/ಎಸ್‌ಎಸ್‌ಸಿ (SSLC/SSC) ತೇರ್ಗಡೆ ಮತ್ತು ಎನ್‌ಸಿವಿಟಿ (NCVT) ಇಂದ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ/ಎನ್‌ಟಿಸಿ/ಎನ್‌ಎಸಿ (ITI/NTC/NAC) ಹೊಂದಿರಬೇಕು.
ಫೈರ್‌ಮ್ಯಾನ್ ‘ಎ’ (ಪೋಸ್ಟ್ ಕೋಡ್ 26) ಹುದ್ದೆಗೆ; ಎಸ್‌ಎಸ್‌ಎಲ್‌ಸಿ/ಎಸ್‌ಎಸ್‌ಸಿ/ಮೆಟ್ರಿಕ್ಯುಲೇಷನ್ ತೇರ್ಗಡೆ ಮತ್ತು ನಿಗದಿತ ದೈಹಿಕ ಫಿಟ್‌ನೆಸ್ ಹಾಗೂ ದೈಹಿಕ ದಕ್ಷತೆ ಪರೀಕ್ಷೆಯ ಮಾನದಂಡಗಳನ್ನು ಪೂರೈಸಬೇಕು.
ಲಘು ವಾಹನ ಚಾಲಕ ‘ಎ’ (ಪೋಸ್ಟ್ ಕೋಡ್ 27 & 30) ಹುದ್ದೆಗೆ; ಎಸ್‌ಎಸ್‌ಎಲ್‌ಸಿ/ಎಸ್‌ಎಸ್‌ಸಿ/ಮೆಟ್ರಿಕ್ಯುಲೇಷನ್ ತೇರ್ಗಡೆ, ಸಿಂಧುತ್ವ ಹೊಂದಿರುವ ಎಲ್‌ವಿಡಿ ಲೈಸೆನ್ಸ್ ಮತ್ತು ಲಘು ವಾಹನ ಚಾಲಕರಾಗಿ 3 ವರ್ಷಗಳ ಅನುಭವ ಹೊಂದಿರಬೇಕು.
ಭಾರೀ ವಾಹನ ಚಾಲಕ ‘ಎ’ (ಪೋಸ್ಟ್ ಕೋಡ್ 28) ಹುದ್ದೆಗೆ; ಎಸ್‌ಎಸ್‌ಎಲ್‌ಸಿ/ಎಸ್‌ಎಸ್‌ಸಿ/ಮೆಟ್ರಿಕ್ಯುಲೇಷನ್ ತೇರ್ಗಡೆ, ಎಚ್‌ವಿಡಿ ಲೈಸೆನ್ಸ್ ಮತ್ತು ಒಟ್ಟು 5 ವರ್ಷಗಳ ಚಾಲನಾ ಅನುಭವ (ಇದರಲ್ಲಿ ಕನಿಷ್ಠ 3 ವರ್ಷ ಭಾರೀ ವಾಹನ ಚಾಲಕರಾಗಿ ಮತ್ತು ಉಳಿದ ಅವಧಿ ಲಘು ವಾಹನ ಚಾಲನಾ ಅನುಭವ) ಹೊಂದಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್ – ಪೋಸ್ಟ್ ಕೋಡ್ 29) ಹುದ್ದೆಗೆ; ಮೆಟ್ರಿಕ್ಯುಲೇಷನ್/ಎಸ್‌ಎಸ್‌ಎಲ್‌ಸಿ/ಎಸ್‌ಎಸ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ವಯೋಮಿತಿ:
09-11-2026ರಂತೆ;
ಹುದ್ದೆ ಕೋಡ್ 07 ರಿಂದ 25, 27, 28 ಮತ್ತು 30 ಹುದ್ದೆಗೆ ವಯಸ್ಸಿನ ಮಿತಿಯು 18 ರಿಂದ 35 ವರ್ಷಗಳು.
ಹುದ್ದೆ ಕೋಡ್ 26 ಮತ್ತು 29 ಹುದ್ದೆಗೆ ವಯಸ್ಸಿನ ಮಿತಿಯು 18 ರಿಂದ 25 ವರ್ಷಗಳು.
ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ (ಮೀಸಲಾತಿ ಇರುವ ಹುದ್ದೆಗಳಿಗೆ ಮಾತ್ರ). ಮಾಜಿ ಸೈನಿಕರು, ವಿಕಲಚೇತನರು (PwBD) ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ:
ತಾಂತ್ರಿಕ ಸಹಾಯಕ/ವೈಜ್ಞಾನಿಕ ಸಹಾಯಕ/ಲೈಬ್ರರಿ ಅಸಿಸ್ಟೆಂಟ್ ‘ಎ’/ಟೆಕ್ನಿಷಿಯನ್ ‘ಬಿ’/ಡ್ರಾಫ್ಟ್ಸ್‌ಮನ್ ‘ಬಿ’ ಹುದ್ದೆಗೆ; ಲಿಖಿತ ಪರೀಕ್ಷೆ (Written Test – 80 ಅಂಕಗಳ MCQ) ಮತ್ತು ಕೌಶಲ್ಯ ಪರೀಕ್ಷೆ (Skill Test – 100 ಅಂಕಗಳು, ಅರ್ಹತಾ ಸ್ವರೂಪದ್ದು ಮಾತ್ರ).
ನರ್ಸ್ ‘ಬಿ’ ಹುದ್ದೆಗೆ; ಲಿಖಿತ ಪರೀಕ್ಷೆ (80 ಅಂಕಗಳು, 120 ನಿಮಿಷಗಳು) ಮತ್ತು ಕೌಶಲ್ಯ ಪರೀಕ್ಷೆ (ಅರ್ಹತಾ ಸ್ವರೂಪದ್ದು).
ಫೈರ್‌ಮ್ಯಾನ್ ‘ಎ’ ಹುದ್ದೆಗೆ; ಲಿಖಿತ ಪರೀಕ್ಷೆ (80 ಅಂಕಗಳು, 120 ನಿಮಿಷಗಳು), ದೈಹಿಕ ದಕ್ಷತೆ ಪರೀಕ್ಷೆ (PET – ಹಂತ 1 ಮತ್ತು ಹಂತ 2) ಮತ್ತು ವಿವರವಾದ ವೈದ್ಯಕೀಯ ತಪಾಸಣೆ (DME).
ಲಘು ಮತ್ತು ಭಾರೀ ವಾಹನ ಚಾಲಕರು ಹುದ್ದೆಗೆ; ಲಿಖಿತ ಪರೀಕ್ಷೆ (100 ಪ್ರಶ್ನೆಗಳು, 120 ನಿಮಿಷಗಳು) ಮತ್ತು ಪ್ರಾಯೋಗಿಕ ಕೌಶಲ್ಯ ಪರೀಕ್ಷೆ (ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಬೇಕು).
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ; ಕೇವಲ ಲಿಖಿತ ಪರೀಕ್ಷೆಯ (100 ಪ್ರಶ್ನೆಗಳು, 90 ನಿಮಿಷಗಳು) ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
(ಲಿಖಿತ ಪರೀಕ್ಷೆಗಳನ್ನು ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ನಡೆಸಲಾಗುತ್ತದೆ).
ಸಂಬಳ ಮತ್ತು ಭತ್ಯೆಗಳು:
ತಾಂತ್ರಿಕ ಸಹಾಯಕ/ವೈಜ್ಞಾನಿಕ ಸಹಾಯಕ/ಲೈಬ್ರರಿ ಅಸಿಸ್ಟೆಂಟ್ ‘ಎ’/ನರ್ಸ್ ‘ಬಿ’ (ಲೆವೆಲ್ 7) ಹುದ್ದೆಗಳಿಗೆ: ಅಂದಾಜು ಆರಂಭಿಕ ಒಟ್ಟು ವೇತನ ತಿಂಗಳಿಗೆ ರೂ.71,840/- (ಮೂಲ ವೇತನ + ತುಟ್ಟಿಭತ್ಯೆ) ಮತ್ತು ನಿಯಮಾನುಸಾರ ಮನೆ ಬಾಡಿಗೆ ಭತ್ಯೆ (HRA) ಹಾಗೂ ಸಾರಿಗೆ ಭತ್ಯೆ ದೊರೆಯುತ್ತದೆ.
ಟೆಕ್ನಿಷಿಯನ್ ‘ಬಿ’/ಡ್ರಾಫ್ಟ್ಸ್‌ಮನ್ ‘ಬಿ'(ಲೆವೆಲ್ 3) ಹುದ್ದೆಗೆ; ಅಂದಾಜು ಆರಂಭಿಕ ಒಟ್ಟು ವೇತನ ತಿಂಗಳಿಗೆ ರೂ.34,720/- (ಮೂಲ ವೇತನ + ತುಟ್ಟಿಭತ್ಯೆ) ಮತ್ತು ಇತರ ಭತ್ಯೆಗಳು.
ಫೈರ್‌ಮ್ಯಾನ್ ‘ಎ’/ಲಘು ಮತ್ತು ಭಾರೀ ವಾಹನ ಚಾಲಕರು(ಲೆವೆಲ್ 2) ಹುದ್ದೆಗೆ; ಅಂದಾಜು ಆರಂಭಿಕ ಒಟ್ಟು ವೇತನ ತಿಂಗಳಿಗೆ ರೂ.31,840/- (ಮೂಲ ವೇತನ + ತುಟ್ಟಿಭತ್ಯೆ) ಮತ್ತು ಇತರ ಭತ್ಯೆಗಳು.
ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) (ಲೆವೆಲ್ 1) ಹುದ್ದೆಗೆ; ಅಂದಾಜು ಆರಂಭಿಕ ಒಟ್ಟು ವೇತನ ತಿಂಗಳಿಗೆ ರೂ.28,800/- (ಮೂಲ ವೇತನ + ತುಟ್ಟಿಭತ್ಯೆ) ಮತ್ತು ಇತರ ಭತ್ಯೆಗಳು.
ಅರ್ಜಿ ಶುಲ್ಕ:
ಹುದ್ದೆ ಕೋಡ್ 07 ರಿಂದ 15 ಕ್ಕೆ: ಎಲ್ಲಾ ಅಭ್ಯರ್ಥಿಗಳಿಗೆ ಆರಂಭದಲ್ಲಿ ರೂ.750/- ಪ್ರಕ್ರಿಯೆ ಶುಲ್ಕವಿರುತ್ತದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಮಹಿಳಾ, ಎಸ್‌ಸಿ/ಎಸ್‌ಟಿ, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ರೂ.750/- ಮರುಪಾವತಿ ಮಾಡಲಾಗುತ್ತದೆ. ಇತರ ಅಭ್ಯರ್ಥಿಗಳಿಗೆ ರೂ. 250/- ಅರ್ಜಿ ಶುಲ್ಕ ಕಡಿತಗೊಳಿಸಿ ರೂ.500/- ಮರುಪಾವತಿ ಮಾಡಲಾಗುತ್ತದೆ.
ಹುದ್ದೆ ಕೋಡ್ 16 ರಿಂದ 30 ಕ್ಕೆ: ಎಲ್ಲಾ ಅಭ್ಯರ್ಥಿಗಳಿಗೆ ಆರಂಭದಲ್ಲಿ ರೂ.500/- ಪ್ರಕ್ರಿಯೆ ಶುಲ್ಕವಿರುತ್ತದೆ. {ಲಿಖಿತ ಪರೀಕ್ಷೆಗೆ ಹಾಜರಾಗುವ ಮಹಿಳಾ, ಎಸ್‌ಸಿ/ಎಸ್‌ಟಿ, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ರೂ.500/- ಮರುಪಾವತಿ ಮಾಡಲಾಗುತ್ತದೆ.} ಇತರ ಅಭ್ಯರ್ಥಿಗಳಿಗೆ ರೂ.100/- ಅರ್ಜಿ ಶುಲ್ಕ ಕಡಿತಗೊಳಿಸಿ ರೂ.400/- ಮರುಪಾವತಿಮಾಡಲಾಗುತ್ತದೆ.
(ಗಮನಿಸಿ: ಪರೀಕ್ಷೆಗೆ ಗೈರುಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಮರುಪಾವತಿ ಇರುವುದಿಲ್ಲ).
ಅರ್ಜಿ ಸಲ್ಲಿಕೆ ಹೇಗೆ?
ಇಸ್ರೋ ಎಸ್‌ಡಿಎಸ್‌ಸಿ ಶಾರ್ ಅಧಿಕೃತ ವೆಬ್‌ಸೈಟ್ http://www.shar.gov.in ಅಥವಾ https://apps.shar.gov.in ಗೆ ಭೇಟಿ ನೀಡಿ.. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.shar.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |