ಭಾರತದ ಸರ್ವೋಚ್ಚ ನ್ಯಾಯಾಲಯವು(ಸುಪ್ರೀಂ ಕೋರ್ಟ್) ಕೋರ್ಟ್ ಮಾಸ್ಟರ್(ಶಾರ್ಟ್‌ಹ್ಯಾಂಡ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 20 ಹುದ್ದೆಗಳಿಗೆ ನಾನಾ ಹಂತದ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 25
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 15 (ರಾತ್ರಿ 11.55 ರವರೆಗೆ)
- ವಸ್ತುನಿಷ್ಠ ಮಾದರಿಯ ಪರೀಕ್ಷೆ(Objective Type Test) ನಡೆಯುವ ತಾತ್ಕಾಲಿಕ ದಿನಾಂಕ- ಡಿಸೆಂಬರ್ 7, 2026
- ಉತ್ತರ ಪತ್ರಿಕೆಯ ಕೀ ಉತ್ತರಗಳನ್ನು ಪ್ರಕಟಿಸುವ ತಾತ್ಕಾಲಿಕ ದಿನಾಂಕ- ಡಿಸೆಂಬರ್ 8, 2026
- ಆಕ್ಷೇಪಣೆ ಸಲ್ಲಿಸಲು ತಾತ್ಕಾಲಿಕ ದಿನಾಂಕಗಳು- ಡಿಸೆಂಬರ್ 8 ರಿಂದ 9 (ರಾತ್ರಿ 11.55 ರವರೆಗೆ)
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Bachelor’s degree) ಹೊಂದಿರಬೇಕು ಹಾಗೂ ಇಂಗ್ಲಿಷ್ ಶಾರ್ಟ್‌ಹ್ಯಾಂಡ್‌ನಲ್ಲಿ ನಿಮಿಷಕ್ಕೆ 120 ಪದಗಳ ವೇಗವನ್ನು ಹೊಂದಿರಬೇಕು. ಜತೆಗೆ ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನದೊಂದಿಗೆ ಕಂಪ್ಯೂಟರ್‌ನಲ್ಲಿ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು.
ಅನುಭವ: ಸರ್ಕಾರಿ/ಸಾರ್ವಜನಿಕ ವಲಯದ ಉದ್ಯಮಗಳು/ಶಾಸನಬದ್ಧ ಸಂಸ್ಥೆಗಳಲ್ಲಿ ಪ್ರೈವೇಟ್ ಸೆಕ್ರೆಟರಿ/ಸೀನಿಯರ್ ಪಿಎ/ಪಿಎ/ಸೀನಿಯರ್ ಸ್ಟೆನೋಗ್ರಾಫರ್ ಕೇಡರ್‌ನಲ್ಲಿ ಕನಿಷ್ಠ 5 ವರ್ಷಗಳ ನಿಯಮಿತ ಸೇವೆಯನ್ನು ಸಲ್ಲಿಸಿರಬೇಕು.
ವಯೋಮಿತಿ:
1-10-2026ರ ಅನ್ವಯ, ಅಭ್ಯರ್ಥಿಗಳಿಗೆ ಕನಿಷ್ಠ 30 ವರ್ಷ ಹೊಂದಿರಬೇಕು. ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.
ಎಸ್‌ಸಿ, ಎಸ್‌ಟಿ, ಒಬಿಸಿ(ನೋನ್-ಕ್ರೀಮಿ ಲೇಯರ್) ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ಗರಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಇಲಾಖಾ ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:
- ವಸ್ತುನಿಷ್ಠ ಮಾದರಿಯ ಲಿಖಿತ ಪರೀಕ್ಷೆ (Objective Type Test): 100 ಅಂಕಗಳ ಪರೀಕ್ಷೆ (ಸಮಯ: 1.5 ಗಂಟೆ). ಇದರಲ್ಲಿ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. (ಅರ್ಹತಾ ಅಂಕಗಳು: 50).
- ಶಾರ್ಟ್‌ಹ್ಯಾಂಡ್ (ಇಂಗ್ಲಿಷ್) ಪರೀಕ್ಷೆ: ನಿಮಿಷಕ್ಕೆ 120 ಪದಗಳ ವೇಗದ ಪರೀಕ್ಷೆ (ಅನುಮತಿಸಲಾದ ಗರಿಷ್ಠ ತಪ್ಪುಗಳು 5%). (ಅರ್ಹತಾ ಅಂಕಗಳು: 50).
- ಕಂಪ್ಯೂಟರ್ ಟೈಪಿಂಗ್ ವೇಗ ಪರೀಕ್ಷೆ: 10 ನಿಮಿಷಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕನಿಷ್ಠ 40 w.p.m ವೇಗ ಹೊಂದಿರಬೇಕು(ಅನುಮತಿಸಲಾದ ತಪ್ಪುಗಳು 2%). (ಅರ್ಹತಾ ಅಂಕಗಳು: 10).
- ಸಂದರ್ಶನ (Interview): 30 ಅಂಕಗಳು (ಅರ್ಹತಾ ಅಂಕಗಳು: 15).
ಸಂಬಳ:
ಈ ಹುದ್ದೆಯು ಪೇ ಮ್ಯಾಟ್ರಿಕ್ಸ್‌ನ ಹಂತ 11 ರ ಪ್ರಕಾರ ವೇತನ ಶ್ರೇಣಿಯು ರೂ.67,700 ರಿಂದ ರೂ.2,08,700/- ರವರೆಗೆ ಇರಲಿದೆ. ಜೊತೆಗೆ ನಿಯಮಾವಳಿಗಳ ಪ್ರಕಾರ ಅನ್ವಯವಾಗುವ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ/ಅನಾರಕ್ಷಿತ(Unreserved) ವರ್ಗದ ಅಭ್ಯರ್ಥಿಗಳಿಗೆ ರೂ.1,500/-.
- ಎಸ್‌ಸಿ/ಎಸ್‌ಟಿ/ಒಬಿಸಿ (ನೋನ್-ಕ್ರೀಮಿ ಲೇಯರ್)/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.750/-.
ಶುಲ್ಕವನ್ನು ಯುಸಿಒ (UCO) ಬ್ಯಾಂಕ್ ಒದಗಿಸುವ ಪೇಮೆಂಟ್ ಗೇಟ್‌ವೇ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ www.sci.gov.inನಲ್ಲಿ “Notice” ವಿಭಾಗದ “Recruitment” ಉಪವಿಭಾಗದಡಿ “Link to submit online applications for the post of Court Master (Shorthand)” ಎಂಬ ಶೀರ್ಷಿಕೆಯಡಿ ನೀಡಲಾದ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು, ಅದನ್ನು ತೆರೆದು ಅದರಲ್ಲಿ ಒದಗಿಸಲಾಗಿರುವ ಆನ್‌ಲೈನ್ ಅರ್ಜಿ ನಮೂನೆ ಲಿಂಕ್ ಮೇಲೆ ಕ್ಲಿಕ್ಕಿಸಿ. (https://cdn3.digialm.com/EForms/configuredHtml/32912/103070/3vdM5J33Gl951V40kH/Index.html)
ನಂತರ ಅಭ್ಯರ್ಥಿಗಳು ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಂಡು, ಅರ್ಜಿ ನಮೂನೆಯನ್ನು ತುಂಬಿ, ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ನೇರ ಲಿಂಕ್) | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.sci.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |