ಕೆಇಎ: ತಾತ್ಕಾಲಿಕ ಕೀ ಉತ್ತರ ಪ್ರಕಟ

ಆಕ್ಷೇಪಣೆ ಸಲ್ಲಿಕೆ ಗಡುವು

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಲ್ಯಾಣ ಕರ್ನಾಟಕ ವೃಂದದ ಗ್ರಾಮ ಆಡಳಿತ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲಾ ಶಿಕ್ಷಕರು ಹಾಗೂ ಭೂಮಾಪಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ(ಅ.26) ಪ್ರಕಟಿಸಿದೆ.

ಪರೀಕ್ಷೆಯನ್ನು ಅ.24 ಮತ್ತು 25ರಂದು ರಾಜ್ಯ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗಿತ್ತು. ಕೆಇಎ ಪತ್ರಿಕೆ-1, ಪತ್ರಿಕೆ-2ರ ತಾತ್ಕಾಲಿಕ ಕೀ ಉತ್ತರಗಳನ್ನು ತನ್ನ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ ಬಿಡುಗಡೆ ಮಾಡಿದೆ.

ಹಾಜರಾಗಿರುವ ಅಭ್ಯರ್ಥಿಗಳು ಪರಿಶೀಲನೆ ಮಾಡಿ, ಆಕ್ಷೇಪಣೆಗಳು ಇದ್ದಲ್ಲಿ ಅಧಿಕೃತ ಲಿಂಕ್‌ ಬಳಸಿಕೊಂಡು ಕಡ್ಡಾಯವಾಗಿ ಪ್ರಶ್ನೆಯ ಸಂಖ್ಯೆ, ವರ್ಷನ್‌ ಕೋಡ್‌, ಪರೀಕ್ಷಾ ದಿನ ಜತೆಗೆ ಪೂರಕ ದಾಖಲೆಗಳ ಸಮೇತ ಪತ್ರಿ ಆಕ್ಷೇಪಣೆಗೆ ರೂ.25/-ರಂತೆ ಪಾವತಿಸಿ ಅ.29ರ ಬೆಳಗ್ಗೆ 10.30ರೊಳಗೆ ಆಕ್ಷೇಪಿಸಬಹುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ.

ಹಂತ-2 ಮುಖಪುಟದ “ಇತ್ತೀಚಿನ ಪ್ರಕಟಣೆಗಳು” ವಿಭಾಗಡಿ “ಭೂ ಮಾಪಕ (KK)-2026 ಪ್ರಕಟಣೆ ಮತ್ತು ಕೀ ಉತ್ತರಗಳು ಅಥವಾ ಸಮಾಜ ಕಲ್ಯಾಣ ವಸತಿ ಶಾಲೆ ಶಿಕ್ಷಕ (KK)-2026 ಪ್ರಕಟಣೆ ಮತ್ತು ಕೀ ಉತ್ತರಗಳು ಅಥವಾ ಗ್ರಾಮ ಆಡಳಿತ ಅಧಿಕಾರಿ (KK)-2026 ಪ್ರಕಟಣೆ ಮತ್ತು ಕೀ ಉತ್ತರಗಳು.” ತಮಗೆ ಬೇಕಾದ ಶೀರ್ಷಿಕೆಯ ಲಿಂಕ್‌ ಮೇಲೆ ಕ್ಲಿಕ್ಕಿಸುವ ಮೂಲಕ ಇಲ್ಲವೇ, ಮೆನು ವಿಭಾಗದಡಿ ಆಯಾ ನೇಮಕಾತಿಯಡಿ ಒದಗಿಸಲಾದ ಲಿಂಕ್‌ ಮೂಲಕವೂ ಕೀ ಉತ್ತರಗಳಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಮುಖ್ಯ ಲಿಂಕ್‌ಗಳು:

ವಿಎಒ, ವಸತಿ ಶಾಲಾ ಶಿಕ್ಷಕರು ತಾತ್ಕಾಲಿಕ ಕೀ ಉತ್ತರಗಳ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಭೂ ಮಾಪಕ(ಕೆಕೆ) ತಾತ್ಕಾಲಿಕ ಕೀ ಉತ್ತರ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆಕ್ಷೇಪಣೆ ಸಲ್ಲಿಸುವ ಲಿಂಕ್ಆಕ್ಷೇಪಣೆ ಸಲ್ಲಿಸಿ
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಕಟ ಹೆಲ್ಪ್‌.ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment