ಸಿಬ್ಬಂದಿ ಆಯ್ಕೆ ಆಯೋಗ(SSC)ವು 2025ರ ಕಾನ್ಸ್ಟೇಬಲ್(ಜಿಡಿ) 53,690 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಂತಿಮ ಫಲಿತಾಂಶವನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
2025ರ ಆಗಸ್ಟ್ 20 ರಿಂದ ಸೆ.15ರವರೆಗೆ ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ) ನಡೆಸಿ, ಅ.15ರಂದು 95,575 ಅಭ್ಯರ್ಥಿಗಳನ್ನು ಒಳಗೊಂಡ ಫಲಿತಾಂಶ ಪ್ರಕಟಿಸಲಾಗಿತ್ತು. ನಂತರ ವಿವರವಾದ ವೈದ್ಯಕೀಯ ಪರೀಕ್ಷೆ (DME), ದಾಖಲೆ ಪರಿಶೀಲನೆ (DV) ಮತ್ತು ಪರಿಶೀಲನಾ ವೈದ್ಯಕೀಯ ಪರೀಕ್ಷೆ (RME)ಯಲ್ಲಿ ಅರ್ಹತೆ ಪಡೆದ 53,690 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ನಲ್ಲಿ ಪ್ರಕಟಿಸಲಾಗಿದೆ, ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಫಲಿತಾಂಶ ಪರಿಶೀಲಿಸಬಹುದು ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ.
SSC GD ಅಂತಿಮ ಫಲಿತಾಂಶ ನೋಡುವ ವಿಧಾನ:
• ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ಗೆ ಭೇಟಿ ನೀಡಿ.
• ನಂತರ ಸೂಚನಾ ಫಲಕ ವಿಭಾಗದ ಕೆಳಗೆ ನೀಡಲಾಗಿರುವ “ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಮತ್ತು SSF ನಲ್ಲಿ ಕಾನ್ಸ್‌ಟೇಬಲ್ (GD), ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮ್ಯಾನ್ (GD), ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಪರೀಕ್ಷೆಯಲ್ಲಿ ಸಿಪಾಯಿ, 2025 – ಅಂತಿಮ ಫಲಿತಾಂಶದ ಘೋಷಣೆ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• SSC GD 2025ರ ಅಂತಿಮ ಫಲಿತಾಂಶದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.
• ಈಗ ನೀವು ನಿಮ್ಮ SSC GD 2025ರ ಅಂತಿಮ ಫಲಿತಾಂಶವನ್ನು ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಪರಿಶೀಲಿಸಬಹುದು.
• ಭವಿಷ್ಯದ ಉಲ್ಲೇಖಕ್ಕಾಗಿ SSC GD ಕಾನ್ಸ್‌ಟೇಬಲ್ 2025 ಅಂತಿಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| SSC Constable (GD) 2025 Final Result PDF | Download |
| Official Website | https://ssc.gov.in/ |
| More Updates | KarnatakaHelp.in |
Shivanna
Miyapur
Devadurga
Racihur
Vaishnavi bagoji
Gokak