ಅಂಚೆ ಇಲಾಖೆಯಲ್ಲಿ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿ

ಎಸ್ಸೆಸ್ಸೆಲ್ಸಿ ಅರ್ಹತೆ

Published on:

ಚೆನ್ನೈ: ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯು ತಮಿಳುನಾಡು ವೃತ್ತದಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 24 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆ ದಿನಾಂಕ- ಅಕ್ಟೋಬರ್‌ 29
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 30ರ ಸಂಜೆ 5:00 ಗಂಟೆಯೊಳಗೆ.

ವರ್ಗಾವಾರು ಹುದ್ದೆಗಳ ಮಾಹಿತಿ:

ಸಾಮಾನ್ಯ ವರ್ಗ (UR) 13, ಪರಿಶಿಷ್ಟ ಜಾತಿ (SC) 03, ಪರಿಶಿಷ್ಟ ಪಂಗಡ (ST) ಇಲ್ಲ(0), ಇತರ ಹಿಂದುಳಿದ ವರ್ಗಗಳು (OBC) 07 (ಇದರಲ್ಲಿ ಕೊಯಮತ್ತೂರು ಎಂಎಂಎಸ್‌ನ 1 ಬ್ಯಾಕ್‌ಲಾಗ್ ಹುದ್ದೆ ಸೇರಿದೆ), ಆರ್ಥಿಕವಾಗಿ ಹಿಂದುಳಿದ ವರ್ಗ (EWS) 01, ಮಾಜಿ ಸೈನಿಕರು (Ex-SM) 02 (ಇವುಗಳನ್ನು ಮೀಸಲಾತಿ ನಿಯಮಗಳ ಪ್ರಕಾರ ಸಮಾನಾಂತರವಾಗಿ ಹೊಂದಾಣಿಕೆ ಮಾಡಲಾಗುತ್ತದೆ).

ಶೈಕ್ಷಣಿಕ ಮತ್ತು ಇತರ ಅರ್ಹತೆಗಳು:

ಮಾನ್ಯತೆ ಪಡೆದ ಮಂಡಲಿ ಅಥವಾ ಸಂಸ್ಥೆಯಿಂದ 10ನೇ ತರಗತಿ(ಎಸ್ಸೆಸ್ಸೆಲ್ಸಿ) ತೇರ್ಗಡೆಯಾಗಿರಬೇಕು. ಜೊತೆಗೆ ಲಘು ಮತ್ತು ಭಾರೀ ಮೋಟಾರು ವಾಹನಗಳ (LMV & HMV) ಚಾಲನಾ ಪರವಾನಗಿ (Driving License) ಹೊಂದಿರಬೇಕು.

ಮೋಟಾರ್ ಮೆಕ್ಯಾನಿಸಂ ಜ್ಞಾನವಿರಬೇಕು (ವಾಹನದ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಶಕ್ತರಾಗಿರಬೇಕು).

ಲಘು ಮತ್ತು ಭಾರೀ ಮೋಟಾರು ವಾಹನಗಳನ್ನು ಚಾಲನೆ ಮಾಡಿದ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.

ಬಯಸುವ ಅರ್ಹತೆ (Desirable): ಹೋಮ್ ಗಾರ್ಡ್(ಗೃಹ ರಕ್ಷಕ ದಳ) ಅಥವಾ ಸಿವಿಲ್ ವಾಲಂಟಿಯರ್ ಆಗಿ 3 ವರ್ಷಗಳ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ:

30-11-2026ರಂತೆ;

ಸಾಮಾನ್ಯ(UG) ಮತ್ತು ಇಡಬ್ಲ್ಯೂಎಸ್(EWS) ಅಭ್ಯರ್ಥಿಗಳಿಗೆ 18 ರಿಂದ 27 ವರ್ಷಗಳು.

ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ(OBC) ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ.

ಸರ್ಕಾರಿ ನೌಕರರಿಗೆ: ಕೇಂದ್ರ ಸರ್ಕಾರದ ಆದೇಶಗಳ ಪ್ರಕಾರ 40 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.

ಮಾಜಿ ಸೈನಿಕರಿಗೆ: ಮಿಲಿಟರಿ ಸೇವೆಯನ್ನು ಕಳೆದ ನಂತರ ಗರಿಷ್ಠ 3 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ (SC/ST ಗೆ 8 ವರ್ಷಗಳು ಮತ್ತು OBC ಗೆ 6 ವರ್ಷಗಳು).

ಆಯ್ಕೆ ಪ್ರಕ್ರಿಯೆ:

ಆಯ್ಕೆಯನ್ನು ಎರಡು ಹಂತಗಳ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ:

ಹಂತ 1:- ಲಿಖಿತ ಪರೀಕ್ಷೆ (Theory Test): ಸಾಮಾನ್ಯ ಜ್ಞಾನ, ಸರಳ ಗಣಿತ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕ ಸಾಮರ್ಥ್ಯ, ಮೋಟಾರ್ ಮೆಕ್ಯಾನಿಸಂ, ಸಂಚಾರ ನಿಯಮಗಳು ಮತ್ತು ಸಿಗ್ನಲ್‌ಗಳ ಕುರಿತು 80 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳ ಪರೀಕ್ಷೆ (ಸಮಯ: 90 ನಿಮಿಷಗಳು).

ಹಂತ 2- ಪ್ರಾಯೋಗಿಕ ಪರೀಕ್ಷೆ(Practical Test): ಮೋಟಾರ್ ಮೆಕ್ಯಾನಿಸಂ ಮತ್ತು ಚಾಲನಾ ಕೌಶಲ್ಯದ ಪರೀಕ್ಷೆ (ಒಟ್ಟು 20 ಅಂಕಗಳು).

ಹಂತ 1ರಲ್ಲಿ ಅರ್ಹತೆ ಪಡೆದವರು ಹಂತ2 ಕ್ಕೆ ಅರ್ಹರಾಗುತ್ತಾರೆ. ಅಂತಿಮ ಮೆರಿಟ್ ಪಟ್ಟಿಯನ್ನು ಎರಡೂ ಹಂತಗಳಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ.

ಸಂಬಳ:

ವೇತನ ಶ್ರೇಣಿ ರೂ.19,900 ರಿಂದ ರೂ.63,200/- (7ನೇ ವೇತನ ಆಯೋಗದ ಪ್ರಕಾರ ಪೇ ಮ್ಯಾಟ್ರಿಕ್ಸ್‌ನ ಹಂತ 2) ಮತ್ತು ನಿಯಮಾನುಸಾರ ಇತರ ಭತ್ಯೆಗಳು ದೊರೆಯಲಿವೆ.

ಪರಿವೀಕ್ಷಣಾ ಅವಧಿ (Probation Period): 2 ವರ್ಷಗಳು.

ಅರ್ಜಿ ಶುಲ್ಕ:

ಅರ್ಜಿ ಶುಲ್ಕ: ರೂ.100/- (ನೂರು ರೂಪಾಯಿಗಳು ಮಾತ್ರ).

ಶುಲ್ಕ ವಿನಾಯಿತಿ: ಎಲ್ಲಾ ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಪಾವತಿಸುವ ವಿಧಾನ: ಭಾರತದ ಯಾವುದೇ ಗಣಕೀಕೃತ ಅಂಚೆ ಕಚೇರಿಯಲ್ಲಿ ಇ-ಪಾವತಿ (e-payment) ಮೂಲಕ ಚಲನ್ ಬಳಸಿ ಶುಲ್ಕ ಪಾವತಿಸಬೇಕು (E-Biller Name: Senior Manager, MMS Chennai, CPMG Tamilnadu Circle, E-Biller ID: 1000099022). ಮೂಲ ಚಲನ್ ರಸೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಹಿಂದಿ, ಇಂಗ್ಲಿಷ್ ಅಥವಾ ತಮಿಳು ಭಾಷೆಯಲ್ಲಿ ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕು.

ಇತ್ತೀಚಿನ ಎರಡು ಭಾವಚಿತ್ರಗಳಲ್ಲಿ ಒಂದನ್ನು ಅರ್ಜಿಯ ನಿಗದಿತ ಜಾಗದಲ್ಲಿ ಅಂಟಿಸಿ ಸ್ವಯಂ-ದೃಢೀಕರಿಸಬೇಕು (Self-attested).

ಅಗತ್ಯವಿರುವ ಎಲ್ಲಾ ದಾಖಲೆಗಳ (ವಯಸ್ಸಿನ ಪುರಾವೆ, ಶೈಕ್ಷಣಿಕ ಅರ್ಹತೆ, ಚಾಲನಾ ಪರವಾನಗಿ, ಅನುಭವ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಇತ್ಯಾದಿ) ಸ್ವಯಂ-ದೃಢೀಕೃತ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಕೇವಲ ಸ್ಪೀಡ್ ಪೋಸ್ಟ್ (Speed Post) ಮೂಲಕ ಮಾತ್ರ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

The Senior Manager,
Mail Motor Service,
No.37, Greams Road,
Chennai – 600 006.

ಅರ್ಜಿ ತಲುಪಲು ಕೊನೆಯ ದಿನಾಂಕ ನ.30ರಂದು ಸಂಜೆ 5:00 ಗಂಟೆಯೊಳಗೆ. ಇತರ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್ ಲಿಂಕ್‌ ಡೌನ್ಲೋಡ್‌ ಮಾಡಿ
ಅಧಿಕೃತ ಜಾಲತಾಣindiapost.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್‌.ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment