ಯಾದಗಿರಿ | ಅಂಚೆ ಪ್ರತಿನಿಧಿಗಳ ಭರ್ತಿ: ಸಂದರ್ಶನಕ್ಕೆ ಕರೆ
ಯಾದಗಿರಿ: ಭಾರತೀಯ ಅಂಚೆ ಇಲಾಖೆಯ ಯಾದಗಿರಿ ವಿಭಾಗಕ್ಕೆ ಅಂಚೆ ಪ್ರತಿನಿಧಿಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಸಂದರ್ಶನವು ಜೂ.19ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಹತ್ತನೇ ತರಗತಿ ಪಾಸಾದ 18 ವರ್ಷ ಮೇಲ್ಪಟ್ಟವರು ಹಾಜರಾಗಬಹುದು. ಆಸಕ್ತರು ಜನ್ಮದಿನಾಂಕ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ನಕಲು ಪ್ರತಿ, ಇತ್ತೀಚಿನ ಮೂರು ಭಾವಚಿತ್ರ ಗಳೊಂದಿಗೆ, ಯಾದಗಿರಿ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಜರುಗಲಿರುವ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.9902058547,9900800546ಗೆ ಸಂಪರ್ಕಿಸಲು ಕೋರಿದೆ. ಅಂಚೆ ಪ್ರತಿನಿಧಿಗಳ ಕಾರ್ಯವೇನೇನು? … More