Karnataka GDS 4th Merit List 2025(OUT): ಜಿಡಿಎಸ್ 4ನೇ ಮೆರಿಟ್ ಪಟ್ಟಿ ಪ್ರಕಟ

Published on:

ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿ 1135 ಹುದ್ದೆಗಳ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಸಂಬಂಧಿಸಿದ 4ನೇ ಮೆರಿಟ್ ಪಟ್ಟಿ(Karnataka GDS 4th Merit List 2025)ಯನ್ನು ಇದೀಗ ಪ್ರಕಟಿಸಿದೆ.

ಅಂಚೆ ಇಲಾಖೆಯು 21,431 ಗ್ರಾಮೀಣ ಡಾಕ್ ಸೇವಕ್ – 2025 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಈಗಾಗಲೇ ಇಲಾಖೆಯೂ ಮೂರು ಮೆರಿಟ್ ಪಟ್ಟಿಯನ್ನು ರಾಜ್ಯವರು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, ಇದೀಗ 4ನೇ ಮೆರಿಟ್ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ನಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

4ನೇ ಮೆರಿಟ್ ಪಟ್ಟಿಯನ್ನು ನೋಡುವ ವಿಧಾನ?

  • ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ.
  • ಅಭ್ಯರ್ಥಿಗಳ ಮೂಲೆ ವಿಭಾಗದ ಕೊನೆಯಲ್ಲಿ – ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು* ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ರಾಜ್ಯವಾರು ಪ್ರಕಟಿಸಿರುವ ನಾಲ್ಕನೇ ಮೆರಿಟ್ ಪಟ್ಟಿಯಲ್ಲಿ ನೀವು ಅರ್ಜಿ ಸಲ್ಲಿಸಿದ ವಿಭಾಗ ಹಾಗೂ ನೋಂದಣಿ ಸಂಖ್ಯೆ ಮೂಲಕ ನಿಮ್ಮ ರಾಂಕ್ ಅನ್ನು ಪರಿಶೀಲಿಸಿಕೊಳ್ಳಿ
  • ಜಿಡಿಎಸ್ 4ನೇ ಮೆರಿಟ್ ಪಟ್ಟಿಯು ಪಿಡಿಎಫ್ ರೂಪದಲ್ಲಿ ಕಾಣಸಿಗುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್ಲೋಡ್ ಮಾಡಿ.

4ನೇ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ

ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳು 01/07/2025 ರಂದು ಅಥವಾ ಅದಕ್ಕೂ ಮೊದಲು ತಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗೀಯ ಮುಖ್ಯಸ್ಥರ ಮೂಲಕ ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕು.

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಎಲ್ಲಾ ಸಂಬಂಧಿತ ದಾಖಲೆಗಳ ಮೂಲ ಮತ್ತು ಎರಡು ಸೆಟ್ ಸ್ವಯಂ ದೃಢೀಕೃತ ನಕಲು ಪ್ರತಿಗಳೊಂದಿಗೆ ಪರಿಶೀಲನೆಗಾಗಿ ಹಾಜರಾಗಬೇಕು.

Important Direct Links:

Karnataka GDS 4th Merit List 2025 PDFDownload
Official Websiteindiapostgdsonline.gov.in
More UpdatesKarnataka Help.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment