ಒಟ್ಟು 21,431(ಕರ್ನಾಟಕದಲ್ಲಿ 1135 ಹುದ್ದೆಗಳು)ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಆಯ್ಕೆ ಸಂಬಂಧಿಸಿದ ಅಭ್ಯರ್ಥಿಗಳ 4ನೇ ಸುತ್ತಿನ ಮೆರಿಟ್ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆ ಜೂನ್ 16ರಂದು ಬಿಡುಗಡೆ ಮಾಡಿದೆ.
ಅಂಚೆ ಇಲಾಖೆಯೂ ಈಗಾಗಲೇ ಹಂತ-ಹಂತವಾಗಿ ಮೂರು ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿತ್ತು, 4ನೇ ಮೆರಿಟ್ ಪಟ್ಟಿ 2025ಗಾಗಿ ಇದುವರೆಗೂ ಆಯ್ಕೆಯಾದ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದರು, ಇಲಾಖೆಯು ಸದರಿ ನೇಮಕಾತಿಯ 4ನೇ ಮೆರಿಟ್ ಪಟ್ಟಿ ಪ್ರಕಟಿಸುವ ಮೂಲಕ ಕಾಯುವಿಕೆಗೆ ತೆರೆ ಎಳೆದಿದೆ. ಈ ಕುರಿತು ಮಾಹಿತಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗಕ್ಕೆ ಜುಲೈ 01ರೊಳಗೆ ಭೇಟಿ ನೀಡುವ ಮೂಲಕ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.