UPSC ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ-II 2026ರ ನೋಂದಣಿ ಆರಂಭ

ಸೆ.13ರಂದು ಪರೀಕ್ಷೆ

Published on:

ಕೇಂದ್ರ ಲೋಕಸೇವಾ ಆಯೋಗವು 2026ನೇ ಸಾಲಿನ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ-IIರ ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭಿಸಿದೆ.

ಭಾರತೀಯ ಮಿಲಿಟರಿ ಅಕಾಡೆಮಿ, ಭಾರತೀಯ ನೌಕಾ ಅಕಾಡೆಮಿ, ವಾಯುಪಡೆ ಅಕಾಡೆಮಿ, ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಗಳಗೆ 451 ಸ್ಥಾನಗಳಿಗೆ ಪ್ರವೇಶ ನಡೆಯಲಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 20ರಿಂದ ಪ್ರಾರಂಭಗೊಂಡು ಜೂನ್ 09ರಂದು ಕೊನೆಗೊಳ್ಳುತ್ತದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಪುರುಷ ಹಾಗೂ ಮಹಿಳಾ ಉದ್ಯೋಗಾಕಾಂಕ್ಷಿಗಳು ನೋಂದಣಿಗಾಗಿ ಯುಪಿಎಸ್‌ಸಿ ಅಧಿಕೃತo ವೆಬ್ಸೈಟ್ https://upsc.gov.in/ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಮೇ 20, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಜೂನ್ 09, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 09, 2026

ಖಾಲಿ ಇರುವ ಹುದ್ದೆಗಳ ವಿವರ:

ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್ -163ನೇ (DE) ಕೋರ್ಸ್ – 100 ಹುದ್ದೆಗಳು
ಭಾರತೀಯ ನೌಕಾ ಅಕಾಡೆಮಿ, ಎಳಿಮಲ ಕೋರ್ಸ್ – 26 ಹುದ್ದೆಗಳು
ವಾಯುಪಡೆ ಅಕಾಡೆಮಿ, ಹೈದರಾಬಾದ್‌ (ಪ್ರಿ-ಫ್ಲೈಯಿಂಗ್) ತರಬೇತಿ ಕೋರ್ಸ್ – 32 ಹುದ್ದೆಗಳು
ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ 126ನೇ ಕೋರ್ಸ್ (ಪುರುಷರು) – 275 ಹುದ್ದೆಗಳು
ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ 126ನೇ ಕೋರ್ಸ್ (ಮಹಿಳಾ) – 18 ಹುದ್ದೆಗಳು

ಒಟ್ಟು – 451 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

✓ ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

✓ ಭಾರತೀಯ ನೌಕಾ ಅಕಾಡೆಮಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿ ಅಥವಾ ಭೌತಶಾಸ್ತ್ರವನ್ನು ಕೋರ್ ಅಥವಾ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.

✓ ವಾಯುಪಡೆ ಅಕಾಡೆಮಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ (10+2 ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ) ಪದವಿ ಪೂರ್ಣಗೊಳಿಸಿರಬೇಕು ಅಥವಾ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಇಂಡಿಯನ್ ಮಿಲಿಟರಿ ಅಕಾಡೆಮಿಗೆ – 19 ರಿಂದ 24 ವರ್ಷಗಳು
ಭಾರತೀಯ ನೌಕಾ ಅಕಾಡೆಮಿಗೆ – 19 ರಿಂದ 24 ವರ್ಷಗಳು
ವಾಯುಪಡೆ ಅಕಾಡೆಮಿಗೆ – 20 ರಿಂದ 24 ವರ್ಷಗಳು
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ (ಪುರುಷ & ಮಹಿಳೆ SSC ಕೋರ್ಸ್) – 19 ರಿಂದ 25 ವರ್ಷಗಳು

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಬುದ್ಧಿ ಮತ್ತೆ ಮತ್ತು ವ್ಯಕ್ತಿತ್ವ ಪರೀಕ್ಷೆ (SSB)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ವೇತನ:

ಲೆಫ್ಟಿನೆಂಟ್ ಹುದ್ದೆಗಳಿಗೆ ₹56,100-1,77,500/-
ಕ್ಯಾಪ್ಟನ್ ಹುದ್ದೆಗಳಿಗೆ ₹61,300-1,93,900/-
ಮೇಜರ್ ಹುದ್ದೆಗಳಿಗೆ ₹69,400-2,07,200/-
ಲೆಫ್ಟಿನೆಂಟ್ ಕರ್ನಲ್ ಹುದ್ದೆಗಳಿಗೆ ₹1,21,200-2,12,400/-
ಕರ್ನಲ್ ಹುದ್ದೆಗಳಿಗೆ ₹1,30,600-2,15,900/-
ಬ್ರಿಗೇಡಿಯರ್ ಹುದ್ದೆಗಳಿಗೆ ₹1,39,600-2,17,600/-
ಮೇಜರ್ ಜನರಲ್ ಹುದ್ದೆಗಳಿಗೆ ₹1,44,200-2,18,200/-
ಲೆಫ್ಟಿನೆಂಟ್ ಜನರಲ್ ಹುದ್ದೆಗಳಿಗೆ ₹1,82,200-2,24,100/-
HAG+ಸ್ಕೇಲ್ ಹುದ್ದೆಗಳಿಗೆ ₹2,05,400-2,24,400/-
VCOAS/ಸೇನಾ ಕಮಾಂಡರ್/ಲೆಫ್ಟಿನೆಂಟ್ ಜನರಲ್ ಹುದ್ದೆಗಳಿಗೆ ₹2,25,000/-
COAS ಹುದ್ದೆಗಳಿಗೆ ₹2,50,000/-

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಇತರೆ ಎಲ್ಲಾ ಅಭ್ಯರ್ಥಿಗಳಿಗೂ – ₹200

ಆನ್‌ಲೈನ್ ಮೂಲಕ ಅರ್ಜಿ‌ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsc.gov.in/ ಗೆ ಭೇಟಿ ನೀಡಿ.

• ಬಳಿಕ ಹೊಸದೇನಿದೆ ವಿಭಾಗದ ಕೆಳಗೆ ನೀಡಲಾಗಿರುವ “ಪರೀಕ್ಷಾ ಅಧಿಸೂಚನೆ: ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (II), 2026” ಆಯ್ಕೆ ಮಾಡಿ.

• ಮುಂದುವರೆದಂತೆ *ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (II), 2026* ಅರ್ಜಿ ಸಲ್ಲಿಸಲು “ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯನ್ನು ಆರಿಸಿ.(https://upsconline.nic.in/ಗೆ ಭೇಟಿ ನೀಡುವಿರಿ)

Upsc Online Portal
UPSC Online Portal

• ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ

Important Direct Links:

Official Notification PDFDownload
Online Application Form LinkApply Now
Official Websitehttps://upsc.gov.in/
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment