ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ರಾಜ್ಯದ ವಿವಿಧ ಇಲಾಖೆಗಳು, ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಪದವಿ(ಪ್ರಥಮ ದರ್ಜೆ ಸಹಾಯಕ) ಮತ್ತು ದ್ವಿತೀಯ ಪಿಯುಸಿ(ದ್ವಿತೀಯ ದರ್ಜೆ ಸಹಾಯಕ) ಮಟ್ಟದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ.
ಉಳಿಕ ಮೂಲ ವೃಂದದಲ್ಲಿ 2,163 ಪ್ರಥಮ ದರ್ಜೆ ಸಹಾಯಕ ಹುದ್ದೆ ಮತ್ತು 2,070 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 563 ಪ್ರಥಮ ದರ್ಜೆ ಸಹಾಯಕ ಹುದ್ದೆಗಳು ಮತ್ತು 635 ಪ್ರಥಮ ದರ್ಜೆ ಸಹಾಯಕ ಹುದ್ದೆ ಸೇರಿದಂತೆ ಒಟ್ಟು 5,431 ಹುದ್ದೆಗಳಿಗೆ 2027ರ ಜನವರಿ 08, 09, 10, 16 ಮತ್ತು 17ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ- ಅಕ್ಟೋಬರ್ 30
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 25
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ನವೆಂಬರ್ 26
ಹುದ್ದೆಗಳ ಸಂಖ್ಯೆ:
ಪದವಿ ಮಟ್ಟದ ಪ್ರಮುಖ ಹುದ್ದೆಗಳು (FDA ಮತ್ತು ಇತರೆ ಸಮಾನ ಹುದ್ದೆಗಳು) ವಿವರ:
| ಇಲಾಖೆಯ ಹೆಸರು | ಹುದ್ದೆಯ ವಿವರ | ಉಳಿಕೆ ಮೂಲ ವೃಂದ (RPC) ಹುದ್ದೆಗಳು | ಕಲ್ಯಾಣ ಕರ್ನಾಟಕ ವೃಂದ (KK) ಹುದ್ದೆಗಳು |
|---|---|---|---|
| ನ್ಯಾಯಾಂಗ ಇಲಾಖೆ | ಪ್ರಥಮ ದರ್ಜೆ ಸಹಾಯಕರು | 249 | 33 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 | 135 | 48 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ಪ್ರಥಮ ದರ್ಜೆ ಸಹಾಯಕರು (ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ) | 100 | 48 |
| ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ | ನಿಲಯ ಮೇಲ್ವಿಚಾರಕರು (ಪುರುಷ) | 95 + 05 (ಸೇವಾನಿರತ) | 89 + 05 (ಸೇವಾನಿರತ) |
| ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ | ನಿಲಯಪಾಲಕರು | 75 + 03 (ಸೇವಾನಿರತ) | 27 + 01 (ಸೇವಾನಿರತ) |
| ವಾಣಿಜ್ಯ ತೆರಿಗೆಗಳ ಇಲಾಖೆ | ಪ್ರಥಮ ದರ್ಜೆ ಸಹಾಯಕರು | 56 | — |
| ಕೃಷಿ ಇಲಾಖೆ | ಪ್ರಥಮ ದರ್ಜೆ ಸಹಾಯಕರು | 50 | — |
| ವಾಣಿಜ್ಯ ತೆರಿಗೆಗಳ ಇಲಾಖೆ | ವಾಣಿಜ್ಯ ತೆರಿಗೆ ಪರಿವೀಕ್ಷಕರು | 48 | — |
| ಅರಣ್ಯ ಇಲಾಖೆ | ಪ್ರಥಮ ದರ್ಜೆ ಸಹಾಯಕರು | 36 | — |
| ಕರ್ನಾಟಕ ಸರ್ಕಾರ ಸಚಿವಾಲಯ | ಸಹಾಯಕರು | 32 | — |
| ಸಮಾಜ ಕಲ್ಯಾಣ ಇಲಾಖೆ | ವಾರ್ಡನ್ (ಮಹಿಳೆ) | 31 | — |
| ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ | ಸಹಾಯಕರು | 20 | — |
| ಕರ್ನಾಟಕ ಲೋಕಸೇವಾ ಆಯೋಗ | ಸಹಾಯಕರು | 15 | 03 |
| ಕರ್ನಾಟಕ ಲೋಕಾಯುಕ್ತ | ಪ್ರಥಮ ದರ್ಜೆ ಸಹಾಯಕರು | 13 | — |
| ಪ್ರವಾಸೋದ್ಯಮ ಇಲಾಖೆ | ಪ್ರವಾಸೋದ್ಯಮ ಪ್ರಚಾರ ಅಧಿಕಾರಿ | 06 | — |
| ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ | ವಾರ್ತಾ ಸಹಾಯಕ | — | 04 |
| ಕೃಷಿ ಮಾರಾಟ ಇಲಾಖೆ | ಪ್ರಥಮ ದರ್ಜೆ ಸಹಾಯಕರು | — | 05 |
| ಒಟ್ಟು ಪದವಿ ಮಟ್ಟದ ಹುದ್ದೆಗಳು | ಎಲ್ಲಾ ಇಲಾಖೆಗಳು ಸೇರಿ | 2163 | 563 |
ದ್ವಿತೀಯ ಪಿಯುಸಿ / ತತ್ಸಮಾನ ಮಟ್ಟದ ಪ್ರಮುಖ (SDA ಮತ್ತು ಇತರೆ ಸಮಾನ ಹುದ್ದೆಗಳು) ಹುದ್ದೆಗಳ ವಿವರ:
| ಇಲಾಖೆಯ ಹೆಸರು | ಹುದ್ದೆಯ ವಿವರ | ಉಳಿಕೆ ಮೂಲ ವೃಂದ (RPC) ಹುದ್ದೆಗಳು | ಕಲ್ಯಾಣ ಕರ್ನಾಟಕ ವೃಂದ (KK) ಹುದ್ದೆಗಳು |
|---|---|---|---|
| ನ್ಯಾಯಾಂಗ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | 522 | 104 |
| ವಾಣಿಜ್ಯ ತೆರಿಗೆಗಳ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | 284 | 38 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು (ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ) | 200 | 109 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (ಗ್ರಾಮ ಪಂಚಾಯಿತಿ) | 68 | 38 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 | — | 25 |
| ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | 45 | 05 |
| ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 16 |
| ಕರ್ನಾಟಕ ಸರ್ಕಾರ ಸಚಿವಾಲಯ | ಕಿರಿಯ ಸಹಾಯಕರು | — | 14 |
| ಸಹಕಾರ ಸಂಘಗಳ ನಿಬಂಧಕರ ಕಛೇರಿ | ದ್ವಿತೀಯ ದರ್ಜೆ ಸಹಾಯಕರು | — | 13 |
| ಕೃಷಿ ಮಾರಾಟ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 09 |
| ಸಾರಿಗೆ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 08 |
| ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 08 |
| ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಭೀಮರಾಯನಗುಡಿ | ದ್ವಿತೀಯ ದರ್ಜೆ ಸಹಾಯಕರು | — | 08 |
| ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 07 |
| ಗಣಿ ಮತ್ತು ಭೂ ವಿಜ್ಞಾನ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 06 |
| ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 06 |
| ರೇಷ್ಮೆ ಇಲಾಖೆ | ದ್ವಿತೀಯ ದರ್ಜೆ ಸಹಾಯಕರು | — | 06 |
| ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ | ಕಿರಿಯ ಸಹಾಯಕರು | — | 06 |
| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ | ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ | — | 05 |
| ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ | ದ್ವಿತೀಯ ದರ್ಜೆ ಸಹಾಯಕರು | — | 05 |
| ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ | ದ್ವಿತೀಯ ದರ್ಜೆ ಸಹಾಯಕರು | — | 05 |
| ಒಟ್ಟು ದ್ವಿತೀಯ ಪಿಯುಸಿ ಮಟ್ಟದ ಹುದ್ದೆಗಳು | ಎಲ್ಲಾ ಇಲಾಖೆಗಳು ಸೇರಿ | 2070 | 635 |
ಶೈಕ್ಷಣಿಕ ಅರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ:
ಪದವಿ ಮಟ್ಟದ (FDA ಇತ್ಯಾದಿ) ಹುದ್ದೆಗಳಿಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ದ್ವಿತೀಯ ಪಿಯುಸಿ ಮಟ್ಟದ(SDA ಇತ್ಯಾದಿ) ಹುದ್ದೆಗಳಿಗೆ; ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ ಅಥವಾ GTTC ಯ 3+1 ವರ್ಷದ ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ.
ಕಿರಿಯ ಲೆಕ್ಕ ಸಹಾಯಕ ಹುದ್ದೆಗೆ; ಕಾಮರ್ಸ್‌ನಲ್ಲಿ ಪಿಯುಸಿ (ಅಕೌಂಟೆನ್ಸಿ ಐಚ್ಛಿಕ ವಿಷಯದೊಂದಿಗೆ) ಉತ್ತೀರ್ಣರಾಗಿರಬೇಕು.
ಗಮನಿಸಿ: ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನದ ಪ್ರಮಾಣಪತ್ರ ಕಡ್ಡಾಯವಾಗಿದೆ.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
ಸರ್ಕಾರದ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಪರಿಷ್ಕೃತ ಗಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ಅರ್ಹತೆ(ಜಿಎಂ) ಗರಿಷ್ಠ 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿ ಗರಿಷ್ಠ 45 ವರ್ಷಗಳು
- ಮಾಜಿ ಸೈನಿಕರು, ಜೀತ ಕಾರ್ಮಿಕರು ಹಾಗೂ ಇತರೆ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ: ಅಭ್ಯರ್ಥಿಗಳು ಕೆಇಎ ನಡೆಸುವ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ (MCQ) ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಋಣಾತ್ಮಕ ಅಂಕಗಳು (Negative Marking): ಪ್ರತಿ ತಪ್ಪು ಉತ್ತರಕ್ಕೆ 0.25(1/4) ರಷ್ಟು ಅಂಕಗಳನ್ನು ಕಳೆಯಲಾಗುವುದು. ಉತ್ತರಿಸದ ಪ್ರಶ್ನೆಗಳಿಗೆ 5ನೇ ವೃತ್ತವನ್ನು ಶೇಡ್ ಮಾಡದಿದ್ದರೂ ಸಹ 0.25 ಅಂಕ ಕಡಿತಗೊಳಿಸಲಾಗುತ್ತದೆ.
ಕನಿಷ್ಠ ಅರ್ಹತಾ ಅಂಕಗಳು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಆನ್‌ಲೈನ್ ಕೌನ್ಸೆಲಿಂಗ್: ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್ ಮತ್ತು ಅಭ್ಯರ್ಥಿಗಳು ಸಲ್ಲಿಸುವ ಆದ್ಯತೆಗಳ (Priority) ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಹುದ್ದೆ ಹಂಚಿಕೆ ಮಾಡಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಖಾಯಂಪೂರ್ವ (Probationary) ಅವಧಿಯಲ್ಲಿರುತ್ತಾರೆ. ಹುದ್ದೆಗಳಿಗೆ ನಿಗದಿಪಡಿಸಿರುವ ವೇತನ ಶ್ರೇಣಿ ಈ ಕೆಳಗಿನಂತಿದೆ:
ಪ್ರವಾಸೋದ್ಯಮ ಪ್ರಚಾರ ಅಧಿಕಾರಿ ಹುದ್ದೆಗೆ ರೂ.61,300 ರಿಂದ 1,12,900ರವರೆಗೆ
ತೆರಿಗೆ ಪರಿವೀಕ್ಷಕರು/ಉಪ ನೋಂದಣಾಧಿಕಾರಿ/ಕೆಎಂಎಎಸ್(KMAS) ಮುಖ್ಯಾಧಿಕಾರಿ ಶ್ರೇಣಿ-2 ಹುದ್ದೆಗೆ ರೂ.54,175 ರಿಂದ 99,400/-
ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)/ಲೆಕ್ಕ ಸಹಾಯಕರು/ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್-1 ಹುದ್ದೆಗೆ ರೂ.44,425 ರಿಂದ 83,700/-
ದ್ವಿತೀಯ ದರ್ಜೆ ಸಹಾಯಕರು(ಎಸ್‌ಡಿಎ)/ಕಿರಿಯ ಸಹಾಯಕರು/ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ರೂ.34,100 ರಿಂದ 67,600/-
ಅರ್ಜಿ ಶುಲ್ಕ:
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಾಗಿದ್ದು, ವಿವರಗಳು ಹೀಗಿವೆ:
- ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ- ರೂ.750/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.500/-
- ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.250/-
(ಗಮನಿಸಿ: ಕೆಇಎಯ ಹಿಂದಿನ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/07/ನೇ.ವಿ/2026(ಆರ್ ಪಿಸಿ) ಅಡಿಯಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ ಎಂದು ಕೆಇಎ ಅಧಿಸೂಚನೆಯಲ್ಲಿ ತಿಳಿಸಿದೆ).
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/keaಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ಎಫ್‌ಡಿಎ(ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಎಫ್‌ಡಿಎ(ಕೆಕೆ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಎಸ್‌ಡಿಎ(ಆರ್‌ಪಿಸಿ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಎಸ್‌ಡಿಎ(ಕೆಕೆ) ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ಅ.30 ರಿಂದ ಆರಂಭ) | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |