ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ.
ಬಹು-ಕಾರ್ಯ ಸಿಬ್ಬಂದಿ(MTS) ಮತ್ತು ಹವಾಲ್ದಾರ್ ಹುದ್ದೆಗಳಿಗೆ ಸಂಬಂಧಿಸಿದ ಪರೀಕ್ಷೆಯು ಫೆ.04 ರಂದು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPFs), ಎಸ್‌ಎಸ್‌ಎಫ್‌ನಲ್ಲಿನ ಕಾನ್ಸ್‌ಟೇಬಲ್(GD) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿನ ರೈಫಲ್‌ಮನ್(GD) ಹುದ್ದೆಗಳ ಭರ್ತಿಗಾಗಿ ಫೆ.23ರಂದು ಪರೀಕ್ಷೆ ನಡೆಯಲಿವೆ ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಸದರಿ ಪರೀಕ್ಷೆಗಳ ವೇಳಾಪಟ್ಟಿಯನ್ನು SSC ಅಧಿಕೃತ ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
2026ರಲ್ಲಿ ನಡೆಯಲಿರುವ ಪರೀಕ್ಷೆಗಳ ವೇಳಾಪಟ್ಟಿ
• 2026ರ ಫೆಬ್ರವರಿ 4 ರಿಂದ – ಬಹು-ಕಾರ್ಯ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ (CBIC & CBN) ಪರೀಕ್ಷೆಗಳನ್ನು ನಡೆಸಲಾಗುತ್ತದೆ.
• 2026ರ ಫೆಬ್ರವರಿ 23 ರಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಕಾನ್ಸ್‌ಟೇಬಲ್ (GD) ಹಾಗೂ SSF, ಮತ್ತು ಅಸ್ಸಾಂ ರೈಫಲ್ಸ್ ಪರೀಕ್ಷೆಯಲ್ಲಿ ರೈಫಲ್‌ಮನ್ (GD) ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು ಎಸ್.ಎಸ್.ಸಿ ಅಧಿಕೃತ ಜಾಲತಾಣ https://ssc.gov.in/ ಕ್ಕೆ ಭೇಟಿ ನೀಡಿ.
• ನಂತರ ಸೂಚನಾ ಫಲಕ ವಿಭಾಗದ ಕೆಳಗೆ ನೀಡಲಾಗಿರುವ “ಪ್ರಮುಖ ಸೂಚನೆ- ಪರೀಕ್ಷೆಯ ವೇಳಾಪಟ್ಟಿ (536.45 ಕೆಬಿ)” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ 2026ನೇ ಸಾಲಿನಲ್ಲಿ ನಡೆಯಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯ ಪಿಡಿಎಫ್ ತೆರೆಯುತ್ತದೆ.
• ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿ.
Important Direct Links:
| SSC MTS and GD Exam Schedule 2026 PDF | Download |
| Official Website | ssc.gov.in |
| More Updates | KarnatakaHelp.in |
SSC gd time table
SSC GD
Constable
Bsf
𝘊𝘐𝘚𝘍