SSC ಜೂ.ಎಂಜಿನಿಯರ್ 2025: ಪತ್ರಿಕೆ-Iರ ಫಲಿತಾಂಶ ಪ್ರಕಟ

Published on:

ಸಿಬ್ಬಂದಿ ಆಯ್ಕೆ ಆಯೋಗವು ಜೂನಿಯರ್ ಎಂಜಿನಿಯರ್(ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ 2025ರ ಡಿ.03 ರಿಂದ 06 ರವರೆಗೆ ಹಾಗೂ 13ರಂದು ನಡೆಸಲಾದ ಪತ್ರಿಕೆ-I(ಕಂಪ್ಯೂಟರ್‌ ಆಧಾರಿತ ಪರೀಕ್ಷೆ)ರ ಫಲಿತಾಂಶವನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.

ಸದರಿ ಪತ್ರಿಕೆಯಲ್ಲಿ ಸಿವಿಲ್ ಎಂಜಿನಿಯರ್‌ ಹುದ್ದೆಗೆ 11593 ಅಭ್ಯರ್ಥಿಗಳು, ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆಗೆ 4014 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ ಆಗಿದ್ದು, ಮುಂದಿನ ಹಂತದ ಪತ್ರಿಕೆ-IIಕ್ಕೆ ಅರ್ಹತೆ ಹೊಂದಿದ್ದಾರೆ. ಎಸ್‌ಎಸ್‌ಸಿ ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ ಆಫ್‌ ವಿವರಗಳನ್ನು ಪರಿಶೀಲಿಸಬಹುದು.

ಕಟ್ ಆಫ್ ಅಂಕಗಳ ವಿವರ

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ – 109.24462
ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 106.85210
ಒಬಿಸಿ ಅಭ್ಯರ್ಥಿಗಳಿಗೆ – 124.45815
ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 117.90628
ಸಾಮಾನ್ಯ ಅಭ್ಯರ್ಥಿಗಳಿಗೆ – 127.22748
OH (Orthopedically Handicapped) ಅಭ್ಯರ್ಥಿಗಳಿಗೆ – 101.82395
HH (Hearing Handicapped) ಅಭ್ಯರ್ಥಿಗಳಿಗೆ – 57.64407
ಇತರೆ ಅಂಗವಿಕಲ ಅಭ್ಯರ್ಥಿಗಳಿಗೆ – 40.01300

ಪೇಪರ್-I ಫಲಿತಾಂಶ ಪರಿಶೀಲಿಸುವ ವಿಧಾನ

• ಮೊದಲಿಗೆ SSC ಅಧಿಕೃತ ಜಾಲತಾಣ https://ssc.gov.in/ ಕ್ಕೆ ಭೇಟಿ ನೀಡಿ.

• ಬಳಿಕ “ಫಲಿತಾಂಶ” ವಿಭಾಗವನ್ನು ಆಯ್ಕೆ ಮಾಡಿ.

• *Junior Engineer (Civil, Mechanical and Electrical) Examination, 2025 – List of candidates qualified in Paper-I for appearing in Paper-II (CIVIL ) (List-I) ಹಾಗೂ Junior Engineer (Civil, Mechanical and Electrical) Examination, 2025– List of candidates qualified in Paper-I for appearing in Paper-II ( MECHANICAL/ELECTRICAL ) (List-II)* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಅಭ್ಯರ್ಥಿಗಳು ತಮಗೆ ಬೇಕಾದ ಪಟ್ಟಿಯ ಪಿಡಿಎಫ್ ಅನ್ನು ಮೇಲೆ ಒತ್ತಿ ಪಿಡಿಎಫ್‌ ಡೌನ್ಲೋಡ್ ಮಾಡಿಕೊಳ್ಳಿ.

• ಪಿಡಿಎಫ್ ನಲ್ಲಿ ನಿಮ್ಮ ರೋಲ್ ನಂಬರ್ ಹಾಗೂ ಹೆಸರಿನ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.

Important Direct Links:

Notice PDFDownload
SSC JE 2025 Paper 1 Result 2026 Civil Engineering List-1 PDFDownload
SSC JE 2025 Paper 1 Result 2026 Mechanica̧̧l, Electrical Engineering List-2 PDFDownload
Official Websitehttps://ssc.gov.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “SSC ಜೂ.ಎಂಜಿನಿಯರ್ 2025: ಪತ್ರಿಕೆ-Iರ ಫಲಿತಾಂಶ ಪ್ರಕಟ”

Leave a Comment