ಎಸ್‌ಎಸ್‌ಪಿ ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿವೇತನ ಪ್ರಾರಂಭ| SSP Post Matric Scholarship 2026-27 Last Date?

Published on:

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ(ಎಸ್‌ಎಸ್‌ಪಿ)ದಡಿ ನಾನಾ ಇಲಾಖೆಯಿಂದ ನೀಡಲಾಗುವ 2026-27ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

ಸದರಿ ವಿದ್ಯಾರ್ಥಿವೇತನವು 10ನೇ ತರಗತಿಯ ನಂತರ ಬರುವ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವಾಗಿದೆ. ಅರ್ಹ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ(https://ssp.postmatric.karnataka.gov.in/)ದ ಮೂಲಕ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

SSP Post Matric scholarship 2026-27

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಡಿಯಲ್ಲಿ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದಲ್ಲಿ ಬರುವ ವಿವಿಧ ಇಲಾಖೆಗಳು ಈ ಕೆಳಗಿನಂತಿವೆ

• ಸಮಾಜ ಕಲ್ಯಾಣ ಇಲಾಖೆ
• ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
• ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
• ತಾಂತ್ರಿಕ ಶಿಕ್ಷಣ ಇಲಾಖೆ
• ವೈದ್ಯಕೀಯ ಶಿಕ್ಷಣ ಇಲಾಖೆ
• ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
• ಆಯುಷ್‌ ಇಲಾಖೆ
• ವಿಕಲಚೇತನರ ಕಲ್ಯಾಣ ಇಲಾಖೆ
• ಕಾಲೇಜು ಶಿಕ್ಷಣ ಇಲಾಖೆ
• ಕಾರ್ಮಿಕ ಇಲಾಖೆ
• ಕೃಷಿ ಇಲಾಖೆ
• ಜವಳಿ ಮತ್ತು ಕೈಮಗ್ಗ ಇಲಾಖೆ
• ಸಾರಿಗೆ ಇಲಾಖೆ
• ಮೀನುಗಾರಿಕೆ ಇಲಾಖೆ

Required Documents for SSP Scholarship 2026

  • ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು
  • ಕುಟುಂಬ ಗುರುತಿನ ಸಂಖ್ಯೆ (kutumba-services.karnataka.gov.in)
  • ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ
  • ವಿದ್ಯಾರ್ಥಿಗಳ ಇ-ಮೇಲ್ ಐ.ಡಿ.
  • ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ
  • ವಿದ್ಯಾರ್ಥಿಯ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ
  • ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ
  • ವಿದ್ಯಾರ್ಥಿಯು ವಾಸವಿರುವ ಜಿಲ್ಲೆ , ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
  • ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
  • ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ ಮಾತ್ರ)
  • ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ ಮಾತ್ರ)

Last Date of SSP Post Matric Scholarship 2026-27

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date : Given Below

ಇಲಾಖೆಕೊನೆಯ ದಿನಾಂಕ
ಹಿಂದುಳಿದ ಕಲ್ಯಾಣ ಇಲಾಖೆ
(Backward Class Department)
31/08/2026
ಸಮಾಜ ಕಲ್ಯಾಣ ಇಲಾಖೆ
(Social Welfare Department)
31/01/2027
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ31/08/2026
ತಾಂತ್ರಿಕ ಶಿಕ್ಷಣ ಇಲಾಖೆ——
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
(Department of Minority)
30/09/2026
ಬ್ರಾಹ್ಮಣ ಅಭಿವೃದ್ಧಿ ಇಲಾಖೆ——
ಕಾರ್ಮಿಕ ಇಲಾಖೆ——
ಕೃಷಿ ಇಲಾಖೆ———–
ಆರ್ಯ ವೈಶ್ಯ ಇಲಾಖೆ——
ಕಾಲೇಜು ಶಿಕ್ಷಣ ಇಲಾಖೆ——
ಆಯುಷ್‌ ಇಲಾಖೆ——
ವೈದ್ಯಕೀಯ ಶಿಕ್ಷಣ ಇಲಾಖೆ——
ವಿಕಲಚೇತನರ ಕಲ್ಯಾಣ ಇಲಾಖೆ——

How to Apply for SSP Scholarship 2026

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
  • ನೀವು ಎಸ್‌ಎಸ್‌ಪಿ ಖಾತೆ ಹೊಂದಿಲ್ಲ ಅಂದರೆ ಹೊಸದಾಗಿ ಕ್ರಿಯೇಟ್ ಮಾಡಿ.
  • ನಂತರ Log In ಆಗಿ.
  • ಅಲ್ಲಿ Apply for Post-Matric Scholarship ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ವಿವಿಧ ಹಂತಗಳಿರುತ್ತವೆ.
  • ಹಂತ 1- ವ್ಯಾಸಂಗ / ಜಾತಿ / ವೈಯಕ್ತಿಕ ವಿವರಗಳು
  • ಹಂತ 2 – ವಿದ್ಯಾರ್ಥಿಯ ಕಾಲೇಜಿನ ವಿವರಗಳು
  • ಹಂತ 3 – ಇ-ಧೃಡೀಕರಣ ವಿವರಗಳು
  • ಹಂತ 4 – ವಸತಿ ನಿಲಯ ವಿವರಗಳು
  • ಹಂತ 5 – ಪೂರ್ವವೀಕ್ಷಣೆ & ಅಂತಿಮ ಸಲ್ಲಿಕೆ

ಈ ಮೇಲಿನ ಹಂತಗಳನ್ನು ಸರಿಯಾಗಿ ಭರ್ತಿ ಮಾಡಿ ಕೊನೆಯ ಹಂತವಾದ ಪೂರ್ವವೀಕ್ಷಣೆ ಪರಿಶೀಲಿಸಿ ಅಂತಿಮವಾಗಿ ಸಲ್ಲಿಸಿ.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

Links NameIMP Links
SSP Post Matric scholarship 2026-27 Direct LinkApply Now
SSP New Create Account LinkCreate AC
Official WebsiteSSP
More UpdatesKarnatakaHelp.in

FAQs – SSP Scholarship 2026

How to Apply for SSP Scholarship 2026?

Visit Official Website to Apply Online for ssp.postmatric.karnataka.gov.in Scholarship 2026

What is the last date for SSP Post Matric Scholarship 2026-27?

January 31, 2027

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

7 thoughts on “ಎಸ್‌ಎಸ್‌ಪಿ ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿವೇತನ ಪ್ರಾರಂಭ| SSP Post Matric Scholarship 2026-27 Last Date?”

  1. ನನ್ನ ಹೆಸರು ಚಿದಾನಂದ ಮಲ್ಲಿಕಾರ್ಜುನ್ ಬಿರಾದಾರ ನನ್ನ ಪ್ರಥಮ ಪಿಯುಸಿ ಓದಿದ್ದೇನೆ ನಾನು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ

    Reply
  2. ನನ್ನ ಹೆಸರು ಲತಾ ತಂದೆ ಸಂಗಪ್ಪ ಮಸ್ಕಿ ನಾನು ಡಿಗ್ರಿ ಕೊನೆಯ ಸೇಮ್ ಓದುತ್ತಿದ್ದೇನೆ ನಾನು ಪೋಸ್ಟ್ ಮೆಟ್ರಿಕ್ ನಂತರದ ಅರ್ಜಿಯನ್ನು ಸಲ್ಲಿಸಿದ್ದೇನೆ

    Reply
  3. ನಾನು ಲಕ್ಷ್ಮೀ ಮಡಿವಾಳ ನಾನು ಸೆಕೆಂಡ್ ಪಿಯುಸಿ ಓದುತ್ತಿದ್ದೇನೆ ನಾನು ಪೋಸ್ಟ್ ಮೆಟ್ರಿಕ್ ನಂತರದ ssp ಗೆ ಅರ್ಜಿ ಹಾಕುತ್ತಿದ್ದೇನೆ

    Reply

Leave a Comment