SSC ಆಯ್ಕೆ ಹುದ್ದೆಗಳ(ಹಂತ-13)ಪರೀಕ್ಷೆ 2025ರ CBT ಫಲಿತಾಂಶ ಪ್ರಕಟ

Published on:

2025ರ ಆಯ್ಕೆ ಹುದ್ದೆಗಳ(ಹಂತ-13) ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜು.24 ರಿಂದ ಆ.02ವರೆಗೆ ಹಾಗೂ ಆ.29ರಂದು ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಫಲಿತಾಂಶವನ್ನು ಸಿಬ್ಬಂದಿ ಆಯ್ಕೆ ಆಯೋಗ ಗುರುವಾರ ಪ್ರಕಟಿಸಿದೆ.

ಸದರಿ ಪರೀಕ್ಷೆಯಲ್ಲಿ ಮೆಟ್ರಿಕ್ಯುಲೇಶನ್‌ ಮಟ್ಟದ ಹುದ್ದೆಗಳಿಗೆ 17,720 ಅಭ್ಯರ್ಥಿಗಳು, ಪಿಯುಸಿ(10+2) ಮಟ್ಟದ ಹುದ್ದೆಗಳಿಗೆ 14,768 ಅಭ್ಯರ್ಥಿಗಳು ಹಾಗೂ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದ ಹುದ್ದೆಗಳಿಗೆ 35,055 ಅಭ್ಯರ್ಥಿಗಳು ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗಾಗಿ ಶಾರ್ಟ್‌ಲಿಸ್ಟ್‌ ಮಾಡಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಪರೀಕ್ಷೆ ಹಾಜರಾಗಿದ್ದ ಅಭ್ಯರ್ಥಿಗಳು ಆಯೋಗ ಅಧಿಕೃತ ವೆಬ್‌ಸೈಟ್‌(https://ssc.gov.in/home/candidate-result)ನ ಫಲಿತಾಂಶ ವಿಭಾಗದ ಮೂಲಕ ಫಲಿತಾಂಶವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಬಹುದು.

ಸ್ವಯಂ ಪ್ರಮಾಣೀಕೃತ ದಾಖಲೆಗಳ ಅಪ್ಲೋಡ್‌ಗಾಗಿ ಕಾಲಾವಕಾಶ..

ಮುಂದಿನ ಹಂತಕ್ಕಾಗಿ ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಅನುಭವ, ವರ್ಗ, ವಯೋಮಿತಿ ಇತರೆ ಸಂಬಂಧಿತ ದಾಖಲೆಗಳನ್ನು ಸ್ವಯಂ ದೃಢೀಕರಿಸಿ, ಫೆ.11ರಿಂದ ಮಾ.03ರೊಳಗೆ ಆಯೋಗದ ವೆಬ್‌ಸೈಟ್‌ ಮೂಲಕ ಅಪ್ಲೋಡ್‌ ಮಾಡಲು ಎಸ್‌ಎಸ್‌ಸಿ ಸೂಚಿಸಿದೆ.

29 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು…!

ಹೌದೂ, ಕೆಲವು ಮೂಲಗಳ ಪ್ರಕಾರ ಸುಮಾರು 29 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದೂ, ಕೇವಲ 67543 ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್‌ ಆಗಿದ್ದಾರೆ.

Important Direct Links:

SSC Selection Post Phase 13 CBT Result 2026 Check LinkCheck Now
Official Websitessc.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

4 thoughts on “SSC ಆಯ್ಕೆ ಹುದ್ದೆಗಳ(ಹಂತ-13)ಪರೀಕ್ಷೆ 2025ರ CBT ಫಲಿತಾಂಶ ಪ್ರಕಟ”

Leave a Comment