ನಿಮ್ಹಾನ್ಸ್‌ನಲ್ಲಿ ಗ್ರೂಪ್ “ಬಿ” ಮತ್ತು “ಸಿ” ಹುದ್ದೆಗಳು

ಬೆಂಗಳೂರಿನಲಿ ಉದ್ಯೋಗ | ಅರ್ಜಿ ಸಲ್ಲಿಕೆಗೆ ಮಾ.04ರವರೆಗೆ ಕಾಲಾವಕಾಶ

Published on:

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ ಗ್ರೂಪ್ “ಬಿ” ಹಾಗೂ ಗ್ರೂಪ್ “ಸಿ” ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್, ಇಸಿಜಿ ಟೆಕ್ನಿಷಿಯನ್, ಲೈಬ್ರರಿ ಅಸಿಸ್ಟೆಂಟ್, ಆರ್ಟಿಸ್ಟ್, ಫೋಟೋಗ್ರಾಫರ್ ಹಾಗೂ ಸ್ಟೆನೋಗ್ರಾಫರ್ ಸೇರಿದಂತೆ ಇತರೆ ಒಟ್ಟು 52 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಮಾ.04ರೊಳಗೆ ನಿಮ್ಹಾನ್ಸ್ ಅಧಿಕೃತ ಜಾಲತಾಣ https://nimhans.lntedutech.com/job-openings/recruitment-sectionಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 03, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 04, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 04, 2026

ಖಾಲಿ ಇರುವ ಹುದ್ದೆಗಳ ವಿವರ:

ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ – 01 ಹುದ್ದೆ
ಇಸಿಜಿ ಟೆಕ್ನಿಷಿಯನ್ – 03 ಹುದ್ದೆಗಳು
ಲೈಬ್ರರಿ ಅಸಿಸ್ಟೆಂಟ್ – 03 ಹುದ್ದೆಗಳು
ಆರ್ಟಿಸ್ಟ್ – 01 ಹುದ್ದೆ
ಫೋಟೋಗ್ರಾಫರ್ – 02 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್ II – 09 ಹುದ್ದೆಗಳು
ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ – 04 ಹುದ್ದೆಗಳು
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ – 03 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯಲ್ ಅಸಿಸ್ಟೆಂಟ್ – 22 ಹುದ್ದೆಗಳು
ಹಾಸ್ಪಿಟಲ್ ಅಸಿಸ್ಟೆಂಟ್ – 02 ಹುದ್ದೆಗಳು
ಬಾರ್ಬರ್ – 02 ಹುದ್ದೆಗಳು

ಒಟ್ಟು – 52 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 10ನೇ ತರಗತಿ, ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ/ಪದವಿ/ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ – ಸ್ನಾತಕೋತ್ತರ ಪದವಿ ಅಥವಾ ಜೀವ ವಿಜ್ಞಾನದಲ್ಲಿ ತತ್ಸಮಾನ ಅರ್ಹತೆ
ಇಸಿಜಿ ಟೆಕ್ನಿಷಿಯನ್ – ಬಿ.ಎಸ್ಸಿ ಅಥವಾ ಡಿಪ್ಲೊಮಾ ಇನ್‌ ಕ್ಲಿನಿಕಲ್‌ ನ್ಯೂರೋ ಸೈಕಾಲಜಿ ಟೆಕ್ನಾಲಜಿ
ಲೈಬ್ರರಿ ಅಸಿಸ್ಟೆಂಟ್ – ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಆರ್ಟಿಸ್ಟ್ – ಎಸ್ಸೆಸ್ಸೆಲ್ಸಿ, ಡಿಪ್ಲೊಮಾ ಇನ್‌ ಆರ್ಟ್ಸ್‌
ಫೋಟೋಗ್ರಾಫರ್ – ಎಸ್ಸೆಸ್ಸೆಲ್ಸಿ ಅಥವಾ ಡಿಪ್ಲೊಮಾ ಇನ್‌ ಪೋಟೋಗ್ರಾಪಿ/ಸಿನಿಮೋಗ್ರಾಪಿ
ಸ್ಟೆನೋಗ್ರಾಫರ್ ಗ್ರೇಡ್ II, ಜೂನಿಯರ್ ಸೆಕ್ರೆಟರಿಯಲ್ ಅಸಿಸ್ಟೆಂಟ್ – ಪದವಿ
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ – ವಿಜ್ಞಾನದಲ್ಲಿ ಪದವಿ
ಅಸಿಸ್ಟೆಂಟ್ ಇನ್ಸ್ಟ್ರಕ್ಟರ್, ಹಾಸ್ಪಿಟಲ್ ಅಸಿಸ್ಟೆಂಟ್, ಬಾರ್ಬರ್ – ಎಸ್ಸೆಸ್ಸೆಲ್ಸಿ

ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

✓ ಇಸಿಜಿ ಟೆಕ್ನಿಷಿಯನ್ ಹಾಗೂ ಲೈಬ್ರರಿ ಅಸಿಸ್ಟೆಂಟ್ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
✓ ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ಉಳಿದ ಎಲ್ಲಾ ಹುದ್ದೆಗಳಿಗೂ; ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು

ವಯೋಮಿತಿ ಸಡಿಲಿಕೆ: ಓಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು.

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:

  • MCQ ಆಧಾರಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ದಾಖಲೆ ಪರಿಶೀಲನೆ

ಅರ್ಜಿ ಶುಲ್ಕ:

√ ಗ್ರೂಪ್ ಬಿ ವರ್ಗದ ಹುದ್ದೆಗಳಿಗೆ;

ಸಾಮಾನ್ಯ ಹಾಗೂ ಎಬಿಸಿ ಅಭ್ಯರ್ಥಿಗಳಿಗೆ – ₹1,180
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – ₹885

√ ಗ್ರೂಪ್ ಸಿ ವರ್ಗದ ಹುದ್ದೆಗಳಿಗೆ;

ಸಾಮಾನ್ಯ ಹಾಗೂ ಎಬಿಸಿ ಅಭ್ಯರ್ಥಿಗಳಿಗೆ – ₹885
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – ₹590

ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೀಗೆ….

• ನಿಮ್ಹಾನ್ಸ್ ಅಧಿಕೃತ ಜಾಲತಾಣ https://nimhans.lntedutech.com/job-openings/recruitment-section ಕ್ಕೆ ಭೇಟಿ ನೀಡಿ.

• ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ.

Nimhans Various Group B &Amp; C Posts Notification 2026
Nimhans Various Group B &Amp; C Posts Online Application Form 2026

• ಬಳಿಕ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ ಲಾಗಿನ್ ಆಗಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://www.nimhans.ac.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ನಿಮ್ಹಾನ್ಸ್‌ನಲ್ಲಿ ಗ್ರೂಪ್ “ಬಿ” ಮತ್ತು “ಸಿ” ಹುದ್ದೆಗಳು”

Leave a Comment