ನಂದಿನಿ ‘ಶಿಮುಲ್’ನಲ್ಲಿ 194 ಹುದ್ದೆಗಳ ಭರ್ತಿ; ಮರು ಅರ್ಜಿ ಆಹ್ವಾನ

ಲಿಖಿತ ಪರೀಕ್ಷೆಯ ಮೂಲಕ ನೇಮಕ

Published on:

Updated On:

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(SHIMUL)ದಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ 194 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಾಯಕ ವ್ಯವಸ್ಥಾಪಕ, ಎಂಐಎಸ್/ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮುಖೇನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಮಾನದಂಡ ಪೂರೈಸುವ ಆಸಕ್ತರು ಫೆ.06 ರಿಂದ ಫೆ.21ರೊಳಗೆ https://virtualofficeerp.com/shimul2025/instructionನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೋರಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ 2025ರ ಡಿ.14 ಕೊನೆಯ ದಿನವಾಗಿತ್ತು.

ಮುಖ್ಯ ದಿನಾಂಕಗಳು ಎಂತ?

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಫೆಬ್ರವರಿ 06
  • ಅರ್ಜಿ ಸಲ್ಲಿಸಲು ಕೊನೆ ದಿನ – ಫೆಬ್ರವರಿ 21

ಖಾಲಿ ಹುದ್ದೆಗಳ ವಿವರಗಳು:

ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ) – 17 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು(ಆಡಳಿತ) – 01 ಹುದ್ದೆ
ಸಹಾಯಕ ವ್ಯವಸ್ಥಾಪಕರು (ಎಫ್‌ಅಂಡ್ ಎಫ್) – 03 ಹುದ್ದೆಗಳು
ಎಂಐಎಸ್ / ಸಿಸ್ಟಂ ಆಫೀಸರ್ – 01 ಹುದ್ದೆ
ಮಾರುಕಟ್ಟೆ ಅಧಿಕಾರಿ – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಅಭಿಯಂತರ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ(ಡಿಜಿ) – 14 ಹುದ್ದೆಗಳು
ಕೆಮಿಸ್ಟ್ ದರ್ಜೆ-1 – 04 ಹುದ್ದೆಗಳು
ವಿಸ್ತರಣಾಧಿಕಾರಿ ದರ್ಜೆ 3 – 17 ಹುದ್ದೆಗಳು
ಆಡಳಿತ ಸಹಾಯಕ ದರ್ಜೆ 2 – 17 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ 2 – 12 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ 2 – 10 ಹುದ್ದೆಗಳು
ಕೆಮಿಸ್ಟ್ ದರ್ಜೆ 2 – 28 ಹುದ್ದೆಗಳು
ಕಿರಿಯ ಸಿಸ್ಟಂ ಆಪರೇಟರ್ – 13 ಹುದ್ದೆಗಳು
ಶೀಘ್ರಲಿಪಿಗಾರ ದರ್ಜೆ 2 – 1 ಹುದ್ದೆ
ಕಿರಿಯ ತಾಂತ್ರಿಕರು – 50 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಸಹಾಯಕ ವ್ಯವಸ್ಥಾಪಕ(ಎಹೆಚ್/ಎಐ) ಹುದ್ದೆಗೆ – ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯ

ಸಹಾಯಕ ವ್ಯವಸ್ಥಾಪಕರು(ಆಡಳಿತ) ಹುದ್ದೆಗೆ – ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ(MBL) ಜೊತೆಗೆ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಅನುಭವ + ಕಂಪ್ಯೂಟರ್ ನಿರ್ವಹಣೆ ಜ್ಞಾನ.

ಸಹಾಯಕ ವ್ಯವಸ್ಥಾಪಕ(ಎಫ್ ಅಂಡ್ ಎಫ್) ಹುದ್ದೆಗೆ – ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ

ಎಂಐಎಸ್ / ಸಿಸ್ಟಂ ಆಫೀಸರ್ ಹುದ್ದೆಗೆ– ಬಿಇ ಕಂಪ್ಯೂಟರ್ ಸೈನ್ಸ್ / ಇನ್‌ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ಪದವಿ

ಮಾರುಕಟ್ಟೆ ಅಧಿಕಾರಿ ಹುದ್ದೆಗೆ – ಬಿ.ಕಾಂ ಅಥವಾ ಬಿ.ಎಸ್ಸಿ ಅಥವಾ ಬಿಬಿಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 03 ವರ್ಷಗಳ ಅನುಭವ + ಕಂಪ್ಯೂಟರ್ ನಿರ್ವಹಣೆ ಜ್ಞಾನ.

ತಾಂತ್ರಿಕ ಅಧಿಕಾರಿ (ಅಭಿಯಂತರ) ಹುದ್ದೆಗೆ– ಬಿಇ (ಮೆಕಾನಿಕಲ್) ಪದವಿ ಅಥವಾ ಬಿಇ (ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್) ಪದವಿ.

ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಹುದ್ದೆಗೆ – ಎಂ.ಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಅಥವಾ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ.

ತಾಂತ್ರಿಕ ಅಧಿಕಾರಿ (ಡಿಟಿ) ಹುದ್ದೆಗೆ – ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿ

ಕೆಮಿಸ್ಟ್ ದರ್ಜೆ-1 ಹುದ್ದೆಗೆ – ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ವಿಷಯ ಅಥವಾ ಬಿ.ಎಸ್ಸಿ ಪದವಿಯಲ್ಲಿ ಮೈಕ್ರೋಬಯಾಲಜಿ ವಿಷಯ ಅಧ್ಯಯನ ಮಾಡಿರಬೇಕು. ಡೇರಿ/ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ.

ವಿಸ್ತರಣಾಧಿಕಾರಿ, ಆಡಳಿತ ಸಹಾಯಕ ದರ್ಜೆ ಹುದ್ದೆಗೆ – ಯಾವುದೇ ಪದವಿ

ಲೆಕ್ಕ ಸಹಾಯಕ ದರ್ಜೆ-2 ಹುದ್ದೆಗೆ – ಬಿ.ಕಾಂ ಪದವಿ ಜೊತೆಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಮಾರುಕಟ್ಟೆ ಸಹಾಯಕ ದರ್ಜೆ 2 ಹುದ್ದೆಗೆ – ಬಿಬಿಎಂ ಬಿ.ಎಸ್ಸಿ/ಬಿ.ಕಾಂ ಪದವಿ

ಕೆಮಿಸ್ಟ್‌ ದರ್ಜೆ 2 ಹುದ್ದೆಗಳಿಗೆ – ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕ

ಕಿರಿಯ ಸಿಸ್ಟಂ ಆಪರೇಟರ್‌ ಹುದ್ದೆಗೆ – ಯಾವುದೇ ಪದವಿ ಜೊತೆಗೆ ಕನಿಷ್ಟ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 03 ವರ್ಷಗಳ ಅನುಭವ.

ಶೀಘ್ರಲಿಪಿಗಾರ ದರ್ಜೆ 2 ಹುದ್ದೆಗೆ – ಯಾವುದೇ ಪದವಿ + ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್‌ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆಗಳ ಜ್ಞಾನ ಹೊಂದಿರಬೇಕು.

ಕಿರಿಯ ತಾಂತ್ರಿಕ ಹುದ್ದೆಗೆ – ಎಸ್ಸೆಸ್ಸೆಲ್ಸಿ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ.

ವಯೋಮಿತಿ:

14-12-2025ರಂತೆ;

ಪ.ಜಾತಿ ಪ್ರವರ್ಗ-ಎ/ಪ.ಜಾತಿ ಪ್ರವರ್ಗ-ಬಿ/ಪ.ಜಾತಿ ಪ್ರವರ್ಗ-ಸಿ/ಪ.ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ – 40 ವರ್ಷಗಳು (+3=43)
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ – 38 ವರ್ಷಗಳು (+3=41)
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷಗಳು (+3=38)

ಸರ್ಕಾರದ ಆದೇಶದಂತೆ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 03 ವರ್ಷಗಳ ಸಡಿಲಿಕೆ ನಿದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ

ಸಂಬಳ:

ಹುದ್ದೆಗಳ ಹೆಸರುವೇತನ ಶ್ರೇಣಿ (ಪ್ರ.ತಿಂ)
ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ83700 ರಿಂದ 155200
ಎಂಐಎಸ್ / ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ (ಅಭಿಯಂತರ), ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ/ಡಿಜಿ) ಹುದ್ದೆಗಳಿಗೆ69250 ರಿಂದ 134200
ಕೆಮಿಸ್ಟ್ ದರ್ಜೆ-1, ವಿಸ್ತರಣಾಧಿಕಾರಿ ದರ್ಜೆ 3 ಹುದ್ದೆಗಳಿಗೆ54175 ರಿಂದ 99400
ಆಡಳಿತ ಸಹಾಯಕ ದರ್ಜೆ 2, ಲೆಕ್ಕ ಸಹಾಯಕ ದರ್ಜೆ 2, ಮಾರುಕಟ್ಟೆ ಸಹಾಯಕ ದರ್ಜೆ 2, ಕೆಮಿಸ್ಟ್ ದರ್ಜೆ 2, ಕಿರಿಯ ಸಿಸ್ಟಂ ಆಪರೇಟರ್ ಮತ್ತು ಶೀಘ್ರಲಿಪಿಗಾರ ದರ್ಜೆ 2 ಹುದ್ದೆಗಳಿಗೆ44425 ರಿಂದ 83700
ಕಿರಿಯ ತಾಂತ್ರಿಕರು ಹುದ್ದೆಗಳಿಗೆ34100 ರಿಂದ 67600

ಅರ್ಜಿ ಶುಲ್ಕ:

ಪ.ಜಾತಿ ಪ್ರವರ್ಗ-ಎ/ಪ.ಜಾತಿ ಪ್ರವರ್ಗ-ಬಿ/ಪ.ಜಾತಿ ಪ್ರವರ್ಗ-ಸಿ/ಪ.ಪಂಗಡ ಮತ್ತು ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ರೂ.500/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.1000/-

*ಬ್ಯಾಂಕ್‌ ಶುಲ್ಕ ಪ್ರತ್ಯೇಕ

ಅರ್ಜಿ ಹೀಗೆ ಸಲ್ಲಿಸಿ…

ಹಂತ-1 ಮೊದಲು ಅಧಿಕೃತ ಜಾಲತಾಣ https://www.shimul.coop/ಕ್ಕೆ ಭೇಟಿ ನೀಡಿ ಅಥವಾ ನೇರವಾಗಿ “https://virtualofficeerp.com/shimul2025/instruction” ಭೇಟಿ ನೀಡಿ ಹಂತ-3ರನ್ನು ಅನುಸರಿಸಿ.

ಹಂತ-2 ನಂತರ ಮುಖಪುಟದಲ್ಲಿ ನೀಡಲಾದ “SHIMUL Recruitment 2025” ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಹಂತ-3 ಮುಂದೆ ಮತ್ತೊಂದು ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಅಲ್ಲಿ “New Registration” ಮೇಲೆ ಒತ್ತಿ ನೋಂದಣಿ ಮಾಡಿಕೊಂಡು, “Login” ಮಾಡಿಕೊಳ್ಳಿ. ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಜೊತೆಗೆ ನಿಗದಿತ ದಾಖಲೆಗಳನ್ನು ಅಪ್ಲೋಡ್‌ ಮಾಡಿ

ಹಂತ-4 “Pay Online” ಗುಂಡಿಯನ್ನು ಒತ್ತುವ ಮೂಲಕ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆಯಾಗುತ್ತದೆ. ಭವಿಷ್ಯದ ಅವಶ್ಯಕತೆಗಾಗಿ ಅರ್ಜಿ ಸಲ್ಲಿಕೆ ನಮೂನೆ ಪ್ರಿಂಟ್‌ ತೆಗೆದುಕೊಳ್ಳಿರಿ.

Important Direct Links:

Online Application Re-Open Notice PDF (Dated on 06/2/2026)Download
Official Notification PDFDownload
Online Application Form LinkApply Now
Official Websitewww.shimul.coop
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

6 thoughts on “ನಂದಿನಿ ‘ಶಿಮುಲ್’ನಲ್ಲಿ 194 ಹುದ್ದೆಗಳ ಭರ್ತಿ; ಮರು ಅರ್ಜಿ ಆಹ್ವಾನ”

Leave a Comment