ದೆಹಲಿಯ ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ.
ಸಲಹೆಗಾರ(04), ಕಾನೂನು ಸಲಹೆಗಾರ(02) ಮತ್ತು ಹಿರಿಯ ಯೋಜನಾ ಸಲಹೆಗಾರ(01) ಸೇರಿದಂತೆ ಒಟ್ಟು 07 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಸಚಿವಾಲಯದ ಅಧಿಕೃತ ಜಾಲತಾಣ(https://ayush.gov.in/)ದ ಮೂಲಕ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ, ಫೆ.20ರೊಳಗೆ ತಲುಪುವಂತೆ “ಶ್ರೀಮತಿ ಶೀಲಾ ಟಿರ್ಕಿ, ಅಂಡರ್ ಸೆಕ್ರೆಟರಿ (ಆಡಳಿತ), ಆಯುಷ್ ಸಚಿವಾಲಯ, ಕೊಠಡಿ ಸಂಖ್ಯೆ 111, ಆಯುಷ್ ಭವನ, ಜಿಪಿಒ ಕಾಂಪ್ಲೆಕ್ಸ್, ಐಎನ್‌ಎ, ನವದೆಹಲಿ-110023″ಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಯ ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 28, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 20, 2026
ಶೈಕ್ಷಣಿಕ ಅರ್ಹತೆ:
✓ ಸಲಹೆಗಾರ ಹುದ್ದೆಗೆ; ಭಾರತ ಸರ್ಕಾರದಲ್ಲಿ ಸೆಕ್ಷನ್ ಆಫೀಸರ್/ಅಂಡರ್ ಸೆಕ್ರೆಟರಿ/ಡೆಪ್ಯುಟಿ ಸೆಕ್ರೆಟರಿ ಅಥವಾ ಸಮಾನ/ನಿರ್ದೇಶಕ ಅಥವಾ ಸಮಾನ ಹುದ್ದೆಯಿಂದ ನಿವೃತ್ತರಾದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.
✓ ಕಾನೂನು ಸಲಹೆಗಾರ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪೂರ್ಣಗೊಳಿಸಿರಬೇಕು ಮತ್ತು 5-10 ವರ್ಷಗಳ ಅರ್ಹತಾ ನಂತರದ ಅನುಭವವನ್ನು ಹೊಂದಿರಬೇಕು.
✓ ಹಿರಿಯ ಯೋಜನಾ ಸಲಹೆಗಾರ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ/ಸ್ನಾತಕೋತ್ತರ ಪದವಿ ಮತ್ತು ಸರ್ಕಾರಿ/ಸಾರ್ವಜನಿಕ ವಲಯ/ ಸ್ವಾಯತ್ತ ಸಂಸ್ಥೆಗಳಲ್ಲಿ ಸಿವಿಲ್ ಎಂಜಿನಿಯರ್‌ಗಳಾಗಿ ಕನಿಷ್ಠ 10 ವರ್ಷಗಳ ಅನುಭವ ಅಥವಾ ಪ್ರೋಗ್ರಾಮಿಂಗ್‌ನಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ;
ಗರಿಷ್ಠ ವಯಸ್ಸಿನ ಮಿತಿ – 64 ವರ್ಷಗಳು
ಆಯ್ಕೆ ವಿಧಾನ;
ಆಯುಷ್ ಸಚಿವಾಲಯದ ನಿಯಮಗಳ ಅನುಸಾರ
ವೇತನ:
ಸಲಹೆಗಾರ ಹುದ್ದೆಗೆ – ₹50,000-75,000
ಕಾನೂನು ಸಲಹೆಗಾರ ಹುದ್ದೆಗೆ – ₹50,000
ಹಿರಿಯ ಯೋಜನಾ ಸಲಹೆಗಾರ ಹುದ್ದೆಗೆ – ₹75,000
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧ ಹೇಗೆ..?
• ಮೊದಲಿಗೆ ಅಭ್ಯರ್ಥಿಗಳು ಆಯುಷ್ ಸಚಿವಾಲಯದ ಅಧಿಕೃತ ಜಾಲತಾಣ https://ayush.gov.in/#!/careers ಕ್ಕೆ ಭೇಟಿ ನೀಡಿ.
• ನಂತರ ವೃತ್ತಿಗಳು – ವಿಭಾಗದಲ್ಲಿ ನೀಡಲಾಗಿರುವ “ಆಯುಷ್ ಮಂತ್ರಾಲಯದಲ್ಲಿ ಕನ್ಸಲ್ವೆಂಟ್ಸ್, ಲೀಗಲ್ ಕನ್ಸಲ್ವೆಂಟ್ ಮತ್ತು ಸೀನಿಯರ್ ಪ್ರಾಜೆಕ್ಟ್ ಕನ್ಸಲ್ಟಂಟ್ ಗುತ್ತಿಗೆ ಆಧಾರದ ಮೇಲೆ ತೊಡಗಿಸಿಕೊಳ್ಳುವುದು” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಉದ್ಯೋಗ ಜಾಹೀರಾತು ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಲಗತ್ತಿಸಿ.
ಈ ಕೆಳಗಿನ ವಿಳಾಸಕ್ಕೆ ಫೆಬ್ರವರಿ 20ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಶ್ರೀಮತಿ ಶೀಲಾ ಟಿರ್ಕಿ, ಅಂಡರ್ ಸೆಕ್ರೆಟರಿ (ಆಡಳಿತ), ಆಯುಷ್ ಸಚಿವಾಲಯ, ಕೊಠಡಿ ಸಂಖ್ಯೆ 111, ಆಯುಷ್ ಭವನ, ಜಿಪಿಒ ಕಾಂಪ್ಲೆಕ್ಸ್, ಐಎನ್‌ಎ, ನವದೆಹಲಿ-110023
Important Direct Links:
| Official Notification and Application Form PDF | Download |
| Official Website | ayush.gov.in |
| More Updates | KarnatakaHelp.in |
Yes , I have completed my degree and I am interested in this, and I was currently studying my master of science