ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ನಾನ್ ಟೆಕ್ನಿಷಿಯನ್ ಉದ್ಯೋಗಾವಕಾಶ

ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನ

Published on:

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಅಂಗಸಂಸ್ಥೆ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ವಿವಿಧ ತಂತ್ರಜ್ಞರಲ್ಲದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕಿರಿಯ ಹಿಂದಿ ಅನುವಾದಕ(01), ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ(01), ಬಹುಕಾರ್ಯಕ ಸಿಬ್ಬಂದಿ(10) ಸೇರಿ ಒಟ್ಟು 12 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು CRRI ಅಧಿಕೃತ ಜಾಲತಾಣ https://crridom.gov.in/en/recruitmentದಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಫೆ.23ರೊಳಗೆ ಆನ್‌ಲೈನ್‌ ಮುಖೇನ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 02, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 23, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 23, 2026

ಶೈಕ್ಷಣಿಕ ಅರ್ಹತೆ:

✓ ಕಿರಿಯ ಹಿಂದಿ ಅನುವಾದಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಅಥವಾ ಹಿಂದಿ/ಇಂಗ್ಲಿಷ್‌ನಲ್ಲಿ ತತ್ಸಮಾನ ಪದವಿ, ಇಂಗ್ಲಿಷ್/ಹಿಂದಿಯನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಪದವಿ ಮಟ್ಟದಲ್ಲಿ ಪರೀಕ್ಷಾ ಮಾಧ್ಯಮವಾಗಿ ಅಧ್ಯಯನ ಮಾಡಿರಬೇಕು.

✓ ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ ಹುದ್ದೆಗೆ; ಮಾಜಿ ಸೈನಿಕರು, ಸೇನೆಯಲ್ಲಿ ಜೆಸಿಒ ಅಥವಾ ಇತರ ಅರೆಸೈನಿಕ ಪಡೆಗಳಲ್ಲಿ ಸಮಾನ ಹುದ್ದೆ ಹಾಗೂ ಭದ್ರತಾ ಕೆಲಸದಲ್ಲಿ ಐದು ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.

✓ ಬಹುಕಾರ್ಯಕ ಸಿಬ್ಬಂದಿ(MTS) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

23-02-2026ರಂತೆ;

✓ ಕಿರಿಯ ಹಿಂದಿ ಅನುವಾದಕ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು

✓ ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು

✓ ಬಹುಕಾರ್ಯಕ ಸಿಬ್ಬಂದಿ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು

ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ಒಳಗೊಂಡಿದೆ.

  • ಲಿಖಿತ ಪರೀಕ್ಷೆ
  • ಸ್ಕಿಲ್/ಟ್ರೇಡ್ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಕಿರಿಯ ಹಿಂದಿ ಅನುವಾದಕ ಹುದ್ದೆಗಳಿಗೆ – ₹35,400-1,12,400
ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ ಹುದ್ದೆಗಳಿಗೆ – ₹35,400-1,12,400
ಬಹುಕಾರ್ಯಕ ಸಿಬ್ಬಂದಿ ಹುದ್ದೆಗಳಿಗೆ – ₹18,000-56,900

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹500
ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ.?

• CRRI ಅಧಿಕೃತ ಜಾಲತಾಣ https://crridom.gov.in/en/recruitmentಕ್ಕೆ ಭೇಟಿ ನೀಡಿ.

• ನಂತರ ನೇಮಕಾತಿ ವಿಭಾಗದಲ್ಲಿ ನೀಡಲಾಗಿರುವ “CSIR-CRRI ನಲ್ಲಿ JHT, SA & MTS ನೇಮಕಾತಿಗಾಗಿ ಜಾಹೀರಾತು – ಈಗಲೇ ಅರ್ಜಿ ಸಲ್ಲಿಸಿ(https://rectt.ngri.res.in/CRRI_2026/)” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

Csir Crri Non Tech 2026 Online Application Form
Csir Crri Non Tech 2026 Online Application Form

• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅರ್ಜಿ ಸಲ್ಲಿಸುವ ಹಂತಗಳನ್ನು ಪೂರ್ಣಗೊಳಿಸಿ.

• ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
Online Application Form LinkApply Now
Online Fee Payment LinkPay Now
Official Websitecrridom.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment