ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಮುಖ ಸಂಶೋಧನಾ ಕೇಂದ್ರವಾಗಿರುವ ಬೆಂಗಳೂರಿನ ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ಸ್(CABS)ನಲ್ಲಿ 10 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗಾಗಿ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂ.ಇ/ಎಂ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಫೆ.22 ರೊಳಗೆ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಸ್ಥೆಯ ಇ-ಮೇಲ್ ವಿಳಾಶಕ್ಕೆ ರವಾನಿಸಬೇಕು. ನಂತರ ಫೆ.25, 26ಕ್ಕೆ “ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ (CABS), DRDO, ರಕ್ಷಣಾ ಸಚಿವಾಲಯ, ಬೇಲೂರು, ಯೆಮ್ಲೂರು ಅಂಚೆ ಕಚೇರಿ, ಬೆಂಗಳೂರು-560037″ನಲ್ಲಿ ನಡೆಯಲಿರುವ ವಾಕ್ ಇನ್ ಸಂದರ್ಶನದಲ್ಲಿ ಭಾಗವಹಿಸಬೇಕು.
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜನವರಿ 13, 2026
- ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 22, 2026
- ವಾಕ್ ಇನ್ ಸಂದರ್ಶನದ ಪ್ರಮುಖ ದಿನಾಂಕಗಳು – ಫೆಬ್ರವರಿ 25 ಹಾಗೂ 26 2026
JRF ಹುದ್ದೆಗಳ ವಿವರ:
JRF 01 ಏರೋನಾಟಿಕಲ್ ಎಂಜಿನಿಯರಿಂಗ್ – 01 ಹುದ್ದೆ
JRF 02 ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ – 04 ಹುದ್ದೆಗಳು
JRF 03 ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಎಂಜಿನಿಯರಿಂಗ್ (ECE) – 03 ಹುದ್ದೆಗಳು
JRF 04 ಎಲೆಕ್ಟ್ರಿಕಲ್ ಎಂಜಿನಿಯರಿಂಗ್ – 01 ಹುದ್ದೆ
JRF 05 ಮೆಕ್ಯಾನಿಕಲ್ ಎಂಜಿನಿಯರಿಂಗ್ – 01 ಹುದ್ದೆ
ಒಟ್ಟು – 10 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂ.ಇ/ಎಂ.ಟೆಕ್ ಪದವಿ ಪೂರ್ಣಗೊಳಿಸಬೇಕು.
ವಯೋಮಿತಿ:
31-12-2025 ರಂತೆ;
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ವಯೋಮಿತಿ ಸಡಿಲಿಕೆ; ಓಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು.
ಆಯ್ಕೆ ವಿಧಾನ:
- ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ಸಂದರ್ಶನ
- ದಾಖಲೆ ಪರಿಶೀಲನೆ
ಸ್ಟೈಫೆಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ₹37,000ರವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು DRDO ಅಧಿಕೃತ ಜಾಲತಾಣ https://drdo.gov.in/drdo/en/offerings/vacancies/cabs-bengaluru-calls-walk-interview-post-junior-research-fellow-jrf ಕ್ಕೆ ಭೇಟಿ ನೀಡಿ.
• ನಂತರ ಉದ್ಯೋಗ ಜಾಹೀರಾತು ಹಾಗೂ ಅರ್ಜಿ ನಮೂನೆಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಇ-ಮೇಲ್ ವಿಷಯ ಶೀರ್ಷಿಕೆಯಲ್ಲಿ “ಜೂನಿಯರ್ ರಿಸರ್ಚ್ ಹುದ್ದೆಗೆ ಅರ್ಜಿ” ಎಂದು ನಮೂದಿಸಿ jrf.rectt.cabs@gov.in ಇ-ಮೇಲ್ ವಿಳಾಸಕ್ಕೆ ಫೆಬ್ರವರಿ 22ರೊಳಗೆ ತಲುಪುವಂತೆ ಕಳುಹಿಸಬೇಕು.
ವಾಕ್ ಇನ್ ಸಂದರ್ಶನ ನಡೆಯುವ ಸಮಯ ಹಾಗೂ ಸ್ಥಳ:
ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಬೆಳಿಗ್ಗೆ 8:45 ಗಂಟೆಗೆ ಈ ಕೆಳಗಿನ ವಿಳಾಸದಲ್ಲಿ 25 ಹಾಗೂ 26 ರಂದು ನಡೆಸಲಾಗುವ ವಾಕ್ ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.
ವಿಳಾಸ: ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ (CABS), DRDO, ರಕ್ಷಣಾ ಸಚಿವಾಲಯ, ಬೇಲೂರು, ಯೆಮ್ಲೂರು ಅಂಚೆ ಕಚೇರಿ, ಬೆಂಗಳೂರು-560037
ಹೆಚ್ಚಿನ ಮಾಹಿತಿಗಾಗಿ: 080-25049393/9138/9135 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
Important Direct Links:
| Official Notification and Application form PDF | Download |
| Online Apply E-Mail Address | jrf.rectt.cabs@gov.in |
| Official Website | drdo.gov.in |
| More Updates | KarnatakaHelp.in |