ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಫೆ.07 ಮತ್ತು 08ರಂದು ನಡೆಸಲಿರುವ 2026ನೇ ಸಾಲಿನ 21ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಗುರುವಾರ ಬಿಡುಗಡೆಗೊಳಿಸಿದೆ.
ಅಂದಿನ ದಿನ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-II ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪತ್ರಿಕೆ-Iರ ಪರೀಕ್ಷೆ ದೇಶದ 140 ನಗರಗಳಲ್ಲಿ ಜರುಗಲಿದೆ. ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ctet.nic.in/ನಲ್ಲಿ ಲಭ್ಯವಿರುವ ಲಿಂಕ್‌ಗಳ ಮೂಲಕ, ತಮ್ಮ ಅರ್ಜಿ ನಮೂನೆ ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಪರೀಕ್ಷೆಯನ್ನು ಎರಡು ದಿನ ನಡೆಸಲಾಗುತ್ತಿದೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
CTET 2026 ಪ್ರವೇಶ ಪತ್ರ ಡೌನ್ಲೋಡ್ ಹೇಗೆ ಮಾಡುವುದು?
ಹಂತ-1 ಅಧಿಕೃತ ವೆಬ್‌ಸೈಟ್ https://ctet.nic.in/ಗೆ ಭೇಟಿ
ಹಂತ-2 ಮುಖಪುಟದ “Candidate Activity” ವಿಭಾಗದಲ್ಲಿ ನೀಡಲಾಗಿರುವ “(link2) Download Admit Card: CTET Feb-2026 ಅಥವಾ (link1) Download Admit Card: CTET Feb-2026” ಶಿರ್ಷೀಕೆ ಲಿಂಕ್ ಒತ್ತಿ.
ಹಂತ-3 ಮುಂದೆ ತಮ್ಮ ಅರ್ಜಿ ನಮೂನೆ ಸಂಖ್ಯೆ(Application Number), ಪಾಸ್‌ವರ್ಡ್ ಹಾಗೂ ಕ್ಯಾಪ್ಚಾ ಹಾಕಿ, ಸಲ್ಲಿಸು(Submit) ಬಟನ್ ಒತ್ತುವ ಮೂಲಕ ಪ್ರವೇಶ ಪತ್ರ ಪಡೆದುಕೊಳ್ಳಬಹುದು.
Important Direct Links:
| CTET Feb-2026 Admit Card Link-1 | Download |
| CTET Feb-2026 Admit Card Link-2 | Download |
| Official Website | https://ctet.nic.in/ |
| More Updates | KarnatakaHelp.in |
No