ಭಾರತೀಯ ವಾಯುಪಡೆ ಗ್ರೂಪ್ ‘ವೈ’ ಏರ್‌ಮೆನ್ ಇಂಟೆಕ್ 02/2027 ನೇಮಕಾತಿ

ಸೆ.22-23ರಂದು ಸಿಬಿಟಿ

Published on:

ಭಾರತೀಯ ವಾಯುಪಡೆಯು ಗ್ರೂಪ್ ‘ವೈ'(ತಾಂತ್ರಿಕೇತರ) ವೈದ್ಯಕೀಯ ಸಹಾಯಕ ಟ್ರೇಡ್‌ನಲ್ಲಿ ಏರ್‌ಮೆನ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಇಂಟೆಕ್ 02/2027ರ ಮೂಲಕ ಪುರುಷ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತೆಗಳನ್ನು ಪೂರೈಸುವ ಉದ್ಯೋಗಾಕಾಂಕ್ಷಿಗಳು ಜು.26ರೊಳಗೆ ಐಎಎಫ್‌ ಅಧಿಕೃತ ವೆಬ್ ಸೈಟ್ https://iafrecruitment.edcil.co.in/airmen/ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜುಲೈ 06, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 26, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 26, 2026
  • ಆನ್‌ಲೈನ್ ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 22-23, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್‌ನೊಂದಿಗೆ ದ್ವಿತೀಯ ಪಿಯುಸಿ(10+2) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್‌ನೊಂದಿಗೆ ದ್ವಿತೀಯ ಪಿಯುಸಿ(10+2) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್/ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನಿಂದ ಮಾನ್ಯ ನೋಂದಣಿಯೊಂದಿಗೆ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿ. ಫಾರ್ಮಾ/ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

✓ ದ್ವಿತೀಯ ಪಿಯುಸಿ ಉತ್ತೀರ್ಣ ಅಭ್ಯರ್ಥಿಗಳಿಗೆ; ಕನಿಷ್ಠ ವಯಸ್ಸಿನ ಮಿತಿ – ಜುಲೈ 01, 2006 ರಿಂದ ಜುಲೈ 01, 2010 (ಎರಡು ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

• ಗರಿಷ್ಠ ವಯಸ್ಸಿನ ಮಿತಿ – 21 ವರ್ಷಗಳು

✓ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿ. ಫಾರ್ಮಾ/ಬಿ.ಎಸ್ಸಿ ಪದವಿ ಉತ್ತೀರ್ಣ ಅಭ್ಯರ್ಥಿಗಳಿಗೆ; ಕನಿಷ್ಠ ವಯಸ್ಸಿನ ಮಿತಿ – ಜುಲೈ 01, 2003 ಮತ್ತು ಜುಲೈ 01, 2006 (ಎರಡು ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

• ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಆರಂಭಿಕ ರೂ.26,900 ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

  • ಹಂತ-I; ಆನ್‌ಲೈನ್ ಪರೀಕ್ಷೆ
  • ಹಂತ-II; ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ಹೊಂದಾಣಿಕೆ ಪರೀಕ್ಷೆ I & II
  • ಹಂತ-III; ವೈದ್ಯಕೀಯ ಪರೀಕ್ಷೆ.

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ರೂ.550+ 18% ಜಿ.ಎಸ್.ಟಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ…

• ಮೊದಲಿಗೆ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://iafrecruitment.edcil.co.in/airmen/ಗೆ ಭೇಟಿ ನೀಡಿ.

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಮುಂದುವರೆದಂತೆ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ

Important Direct Links:

Official Notification PDFDownload
Online Application Form LinkApply Now
Official Webisteiafrecruitment.edcil.co.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಭಾರತೀಯ ವಾಯುಪಡೆ ಗ್ರೂಪ್ ‘ವೈ’ ಏರ್‌ಮೆನ್ ಇಂಟೆಕ್ 02/2027 ನೇಮಕಾತಿ”

Leave a Comment