ಯುಜಿಸಿ ನೆಟ್‌(ಜೂನ್) 2026ರ ಸಿಬಿಟಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

Published on:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂ.22ರಿಂದ ನಡೆಸಲಿರುವ 2026ನೇ ಸಾಲಿನ ಯುಜಿಸಿ ನೆಟ್‌ ಜೂನ್‌ ಮಾಹೆಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ.

ಪರೀಕ್ಷೆಯನ್ನು ಜೂ.22, 23, 24, 25 ,29 ಮತ್ತು 30ರಂದು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಸಂಸ್ಥೆಯು ಈಗಾಗಲೇ ಪರೀಕ್ಷಾ ನಗರ ಮಾಹಿತಿ ಚೀಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎನ್‌ಟಿಎ ಅಧಿಕೃತ ಜಾಲತಾಣ https://ugcnet.nta.nic.in/ ದಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು NTA ಅಧಿಕೃತ ಜಾಲತಾಣ https://ugcnet.nta.nic.in/ ಕ್ಕೆ ಭೇಟಿ ನೀಡಿ.

• ಬಳಿಕ ಸಾರ್ವಜನಿಕ ಸೂಚನೆಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ *UGC-NET ಜೂನ್ 2026 ರ ಪ್ರವೇಶ ಪತ್ರ* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಪ್ರವೇಶ ಪತ್ರವನ್ನು ಪರಿಶೀಲಿಸಿ, ಭವಿಷ್ಯದ ಬಳಕೆಗಾಗಿ ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Notice PDFDownload
UGC NET June 2026 Admit Card LinkLogin Now
Official Websitehttps://ugcnet.nta.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment