ಭಾರತೀಯ ವಾಯುಪಡೆ ಅಗ್ನಿವೀರ್ ವಾಯು ಇಂಟೆಕ್ 02/2027ಕ್ಕೆ ಅರ್ಜಿ ಆಹ್ವಾನ

Published on:

ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಇಂಟೆಕ್ 02/2027ರ ಆಯ್ಕೆ ಪರೀಕ್ಷೆಯ ನೋಂದಣಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜು.06ರಿಂದ ಪ್ರಾರಂಭವಾಗಲಿದೆ.

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್‌ ವಾಯು ಆಗಿ ಸೇರಲು ಇಚ್ಚಿಸುವ ಆಸಕ್ತ ದ್ವಿತೀಯ ಪಿಯುಸಿ/ಡಿಪ್ಲೋಮಾ ಪೂರ್ಣಗೊಳಿಸಿರುವ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು, ಜು.26ರೊಳಗೆ ಅರ್ಜಿ ಸಲ್ಲಿಸಲು ಐಎಎಫ್‌ ಅಧಿಕೃತ ವೆಬ್‌ಸೈಟ್ https://iafrecruitment.edcil.co.in/agniveervayu/index.htmlಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜುಲೈ 06, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 26, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 26, 2026
  • ಆನ್‌ಲೈನ್ ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 22-23, 2026

ಶೈಕ್ಷಣಿಕ ಅರ್ಹತೆ:

• ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನೊಂದಿಗೆ ದ್ವಿತೀಯ ಪಿಯುಸಿ (10+2)/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

• ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಆಟೋಮೊಬೈಲ್/ ಕಂಪ್ಯೂಟರ್ ಸೈನ್ಸ್/ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಮಾಹಿತಿ ತಂತ್ರಜ್ಞಾನ) ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ 03 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿರಬೇಕು.

ಅಥವಾ

• ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಸೇರಿದಂತೆ ವೃತ್ತಿಪರೇತರ ವಿಷಯಗಳೊಂದಿಗೆ ಕನಿಷ್ಠ 50% ಅಂಕಗಳೊಂದಿಗೆ 02 ವರ್ಷಗಳ ವೃತ್ತಿಪರ ಕೋರ್ಸ್‌ ಪೂರ್ಣಗೊಳಿಸಿರಬೇಕು.

ಅಥವಾ

• ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಯಾವುದೇ ಸ್ಟ್ರೀಮ್/ವಿಷಯಗಳಲ್ಲಿ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ (10+2) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಗಮನಿಸಿ: ವಿದ್ಯಾರ್ಹತೆಯ ಕುರಿತು ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿರಿ.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ – ಜುಲೈ 01, 2005 ರಿಂದ ಜನವರಿ 01, 2010 (ಎರಡು ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

• ಗರಿಷ್ಠ ವಯಸ್ಸಿನ ಮಿತಿ – 22 ವರ್ಷಗಳು

ಸೇವಾ ಅವಧಿ:

ಅಗ್ನಿವೀರ್ ಯೋಜನೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿ 04 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ:

• ಮೊದಲ ವರ್ಷ – ಮಾಸಿಕ ವೇತನ 30 ಸಾವಿರರೂ., ಅದರಲ್ಲಿ ಅಭ್ಯರ್ಥಿಗಳಿಗೆ 21 ಸಾವಿರರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ 9 ಸಾವಿರರೂ.

• ಎರಡನೇ ವರ್ಷ -ಮಾಸಿಕ ವೇತನ 33 ಸಾವಿರರೂ., ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ 9,900ರೂ.

• ಮೂರನೇ ವರ್ಷ -ಮಾಸಿಕ ವೇತನ 36,500ರೂ., ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ 10,950ರೂ.

• ನಾಲ್ಕನೇ ವರ್ಷ -ಮಾಸಿಕ ವೇತನ 40,000ರೂ., ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ 12ಸಾವಿರರೂ.

• 4 ವರ್ಷಗಳ ನಂತರ ಅಗ್ನಿವೀರ್ ಅಭ್ಯರ್ಥಿಗಳು 10.04 ಲಕ್ಷರೂ. ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.

ಆಯ್ಕೆ ವಿಧಾನ:

  • ಹಂತ-I; ಆನ್‌ಲೈನ್ ಪರೀಕ್ಷೆ
  • ಹಂತ-II; ದೈಹಿಕ ಸಾಮರ್ಥ್ಯ ಪರೀಕ್ಷೆ (PFT), ಹೊಂದಾಣಿಕೆ ಪರೀಕ್ಷೆ- I, ಹೊಂದಾಣಿಕೆ ಪರೀಕ್ಷೆ-II
  • ಹಂತ-III; ವೈದ್ಯಕೀಯ ಪರೀಕ್ಷೆ.

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೂ – 550ರೂ. + 18% ಜಿ.ಎಸ್.ಟಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://iafrecruitment.edcil.co.in/ ಗೆ ಭೇಟಿ ನೀಡಿ.

• ನಂತರ “ಅಗ್ನಿವೀರ್ ವಾಯು” ಆಯ್ಕೆಯನ್ನು ಆರಿಸಿ.

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form Link(ಜು.06 ರಿಂದ)Apply Now
Official Websiteiafrecruitment.edcil.co.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “ಭಾರತೀಯ ವಾಯುಪಡೆ ಅಗ್ನಿವೀರ್ ವಾಯು ಇಂಟೆಕ್ 02/2027ಕ್ಕೆ ಅರ್ಜಿ ಆಹ್ವಾನ”

Leave a Comment