ಸಿಬ್ಬಂದಿ ಆಯ್ಕೆ ಆಯೋಗ: 12,256 ಹುದ್ದೆಗಳ ಬೃಹತ್ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನ

Published on:

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನ ಸಂಯೋಜಿತ ಪದವಿ ಹಂತದ ಪರೀಕ್ಷೆಯ ಮುಖೇನ ಸುಮಾರು 12,256 ಗ್ರೂಪ್ “ಬಿ” ಹಾಗೂ ಗ್ರೂಪ್ “ಸಿ” ನಾನಾ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆನ್ನು ಪ್ರಾರಂಭಿಸಿದೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿ, ಸಹಾಯಕ ವಿಭಾಗಾಧಿಕಾರಿ, ಇನ್ಸ್ಪೆಕ್ಟರ್, ಆಡಿಟರ್, ಅಕೌಂಟೆಂಟ್ ಹಾಗೂ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಇತರೆ ಹುದ್ದೆಗಳ ನೇಮಕಾತಿಗಾಗಿ ಸದರಿ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಜೂ.22ರೊಳಗೆ SSC ಅಧಿಕೃತ ವೆಬ್ ಸೈಟ್ https://ssc.gov.in/ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – ಮೇ 21, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 22, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 23, 2026
  • ಟೈಯರ್-I ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ – ಆಗಸ್ಟ್-ಸೆಪ್ಟೆಂಬರ್, 2026
  • ಶ್ರೇಣಿ-II ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ – ಡಿಸೆಂಬರ್, 2026

ಗ್ರೂಪ್ ಬಿ ಹುದ್ದೆಗಳ ವಿವರ:

• ಸಹಾಯಕ ಲೆಕ್ಕಪತ್ರ ಅಧಿಕಾರಿ – ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
• ಸಹಾಯಕ ವಿಭಾಗಾಧಿಕಾರಿ – ಕೇಂದ್ರ ಸಚಿವಾಲಯ ಸೇವೆ
• ಸಹಾಯಕ ವಿಭಾಗಾಧಿಕಾರಿ – ಗುಪ್ತಚರ ಬ್ಯೂರೋ
• ಸಹಾಯಕ ವಿಭಾಗಾಧಿಕಾರಿ – ರೈಲ್ವೆ ಸಚಿವಾಲಯ
• ಸಹಾಯಕ ವಿಭಾಗಾಧಿಕಾರಿ – ವಿದೇಶಾಂಗ ವ್ಯವಹಾರಗಳ ಸಚಿವಾಲಯ
• ಸಹಾಯಕ ವಿಭಾಗಾಧಿಕಾರಿ – AFHQ
• ಸಹಾಯಕ ವಿಭಾಗಾಧಿಕಾರಿ – ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
• ಸಹಾಯಕ ವಿಭಾಗಾಧಿಕಾರಿ – ಇತರ ಸಚಿವಾಲಯಗಳು/ಇಲಾಖೆಗಳು/ಸಂಸ್ಥೆಗಳು
• ಇನ್ಸ್‌ಪೆಕ್ಟರ್ ಆದಾಯ ತೆರಿಗೆ – ಕೇಂದ್ರ ನೇರ ತೆರಿಗೆ ಮಂಡಳಿ (CBDT)
• ಇನ್ಸ್‌ಪೆಕ್ಟರ್, (ಕೇಂದ್ರ ಅಬಕಾರಿ) – ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC)
• ಇನ್ಸ್‌ಪೆಕ್ಟರ್ (ಪ್ರಿವೆಂಟಿವ್ ಆಫೀಸರ್) – ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC)
• ಇನ್ಸ್ಪೆಕ್ಟರ್ (ಪರೀಕ್ಷಕ) – ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC)
• ಸಹಾಯಕ ಜಾರಿ ಅಧಿಕಾರಿ – ಜಾರಿ ನಿರ್ದೇಶನಾಲಯ (ED), ಕಂದಾಯ ಇಲಾಖೆ
• ಸಬ್ ಇನ್ಸ್‌ಪೆಕ್ಟರ್ – ಕೇಂದ್ರೀಯ ತನಿಖಾ ದಳ
• ಇನ್ಸ್ಪೆಕ್ಟರ್ ಪೋಸ್ಟ್ ಗಳು – ಅಂಚೆ ಇಲಾಖೆ, ಸಂವಹನ ಸಚಿವಾಲಯ
• ಇನ್ಸ್ಪೆಕ್ಟರ್ – ಕೇಂದ್ರ ಮಾದಕ ದ್ರವ್ಯ ಬ್ಯೂರೋ, ಹಣಕಾಸು ಸಚಿವಾಲಯ
• ಕಾರ್ಯನಿರ್ವಾಹಕ ಸಹಾಯಕ – ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC)
• ಸಂಶೋಧನಾ ಸಹಾಯಕ – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)
• ವಿಭಾಗೀಯ ಲೆಕ್ಕಾಧಿಕಾರಿ – C&AG ಅಡಿಯಲ್ಲಿ ಕಚೇರಿಗಳು
• ಸಬ್ ಇನ್ಸ್‌ಪೆಕ್ಟರ್ – ರಾಷ್ಟ್ರೀಯ ತನಿಖಾ ಸಂಸ್ಥೆ (NIA)
• ಸಬ್-ಇನ್ಸ್‌ಪೆಕ್ಟರ್/ಜೂನಿಯರ್ ಇಂಟೆಲಿಜೆನ್ಸ್ ಅಧಿಕಾರಿ – ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (MHA)
• ಜೂನಿಯರ್ ಅಂಕಿಅಂಶ ಅಧಿಕಾರಿ -ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
• ಸಂಖ್ಯಾಶಾಸ್ತ್ರೀಯ ತನಿಖಾಧಿಕಾರಿ ಗ್ರೇಡ್-II – ಗೃಹ ವ್ಯವಹಾರಗಳ ಸಚಿವಾಲಯ
• ಕಛೇರಿ ಸೂಪರಿಂಟೆಂಡೆಂಟ್ – ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)
• ವಿಭಾಗದ ಮುಖ್ಯಸ್ಥ – ಜನರಲ್ ಡೈರೆಕ್ಟರ್ ಆಫ್ ಫಾರಿನ್ ಟ್ರೇಡ್

ಗ್ರೂಪ್ ಸಿ ಹುದ್ದೆಗಳ ವಿವರ:

• ಆಡಿಟರ್ – C&AG ಅಡಿಯಲ್ಲಿ ಕಚೇರಿಗಳು
• ಆಡಿಟರ್ – CGDA ಅಡಿಯಲ್ಲಿ ಕಚೇರಿಗಳು
• ಆಡಿಟರ್ – ಇತರೆ ಸಚಿವಾಲಯ/ ಇಲಾಖೆಗಳು
• ಅಕೌಂಟೆಂಟ್ – C&AG ಅಡಿಯಲ್ಲಿ ಕಚೇರಿಗಳು
• ಅಕೌಂಟೆಂಟ್ – ನಿಯಂತ್ರಕ ಜನರಲ್ ಆಫ್ ಅಕೌಂಟ್ಸ್
• ಅಕೌಂಟೆಂಟ್/ ಜೂನಿಯರ್ ಅಕೌಂಟೆಂಟ್ – ಇತರೆ ಸಚಿವಾಲಯ/ ಇಲಾಖೆಗಳು
• ಅಂಚೆ ಸಹಾಯಕ/ವಿಂಗಡಣಾ ಸಹಾಯಕ – ಅಂಚೆ ಇಲಾಖೆ, ಸಂವಹನ ಸಚಿವಾಲಯ
• ಹಿರಿಯ ಸಚಿವಾಲಯ ಸಹಾಯಕ/ಉನ್ನತ ವಿಭಾಗದ ಗುಮಾಸ್ತರು – CSCS ಕೇಡರ್‌ಗಳನ್ನು ಹೊರತುಪಡಿಸಿ ಕೇಂದ್ರ ಸರ್ಕಾರಿ ಕಚೇರಿಗಳು/ಸಚಿವಾಲಯಗಳು
• ಹಿರಿಯ ಆಡಳಿತ ಸಹಾಯಕ – ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು, ರಕ್ಷಣಾ ಸಚಿವಾಲಯ
• ತೆರಿಗೆ ಸಹಾಯಕ – ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)
• ತೆರಿಗೆ ಸಹಾಯಕ – ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC)
• ಸಬ್-ಇನ್ಸ್‌ಪೆಕ್ಟರ್ – ಕೇಂದ್ರ ಮಾದಕ ದ್ರವ್ಯ ಬ್ಯೂರೋ, ಹಣಕಾಸು ಸಚಿವಾಲಯ

ವಿದ್ಯಾರ್ಹತೆ:

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.

ಶೈಕ್ಷಣಿಕ ಅರ್ಹತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ವಯೋಮಿತಿ:

ಗ್ರೂಪ್ ‘ಬಿ’ ಹುದ್ದೆಗಳಿಗೆ – 18-32 ವರ್ಷಗಳು(ಹುದ್ದೆಗಳಿಗೆ ಅನುಗುಣವಾಗಿ ಬದಲಾಗುತ್ತದೆ)
ಗ್ರೂಪ್ ‘ಸಿ’ ಹುದ್ದೆಗಳಿಗೆ – 18-27 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಡಿ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳು.

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಮಾಹೆಯಾನ ₹25,500-₹1,51,100ರವರೆಗೆ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಶ್ರೇಣಿ-I ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಶ್ರೇಣಿ-II ಕಂಪ್ಯೂಟರ್ ಆಧಾರಿತ ಪರೀಕ್ಷೆ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ, ಮಹಿಳೆಯರು ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇತರೆ ಎಲ್ಲಾ ಅಭ್ಯರ್ಥಿಗಳಿಗೂ – 100ರೂ.

ಅರ್ಜಿ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟ್ https://ssc.gov.in/home/apply ಗೆ ಭೇಟಿ ನೀಡಿ.

• *ಸಂಯೋಜಿತ ಪದವಿ ಹಂತದ ಪರೀಕ್ಷೆ, 2026,2026* ವಿಭಾಗದಲ್ಲಿ ನೀಡಲಾಗಿರುವ *ಅನ್ವಯಿಸು* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಅರ್ಜಿದಾರರಾಗಿದ್ದಲ್ಲಿ ನೋಂದಾಯಿಸಿ.

• ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://ssc.gov.in/
More UpdatesKarnatakaHelp.in

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಸಿಬ್ಬಂದಿ ಆಯ್ಕೆ ಆಯೋಗ: 12,256 ಹುದ್ದೆಗಳ ಬೃಹತ್ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನ”

  1. 𝙄𝙖𝙢 𝙨𝙤𝙪𝙗𝙝𝙖𝙜𝙮𝙖 𝙈𝙖𝙣𝙣𝙖𝙣𝙜𝙞 𝙖𝙢 𝙛𝙧𝙤𝙢 𝙠𝙪𝙡𝙚𝙣𝙪𝙧𝙚 𝙫𝙞𝙡𝙖𝙜𝙚 𝙞𝙣 𝙝𝙖𝙫𝙚𝙧𝙞 𝙙𝙞𝙨𝙩𝙞𝙘 𝙤𝙛 𝙠𝙖𝙧𝙣𝙖𝙩𝙖𝙠𝙖 𝙞𝙖𝙢 𝙨𝙩𝙪𝙙𝙮𝙞𝙣𝙜 𝙞𝙣 𝘽𝙨𝙘

    Reply

Leave a Comment