ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಯಲ್ಲಿ ಉಳಿಕೆ ಮೂಲ ವೃಂದ ಹಾಗೂ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ಭರ್ತಿಗಾಗಿ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
ಕೃಷಿ ಮಾರಾಟ ಇಲಾಖೆ(ಆರ್‌ಪಿಸಿ 10 ಹುದ್ದೆ), ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ(ಆರ್‌ಪಿಸಿ 16+ ಕೆಕೆ 06 ಹುದ್ದೆ) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ(ಆರ್‌ಪಿಸಿ 04+ ಕೆಕೆ 01 ಹುದ್ದೆ)ದಲ್ಲಿನ ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 21ರಿಂದ ಆರಂಭವಾಗಿ, ಜೂ.04ಕ್ಕೆ ಅಂತ್ಯಗೊಳ್ಳಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಪ್ರಾಧಕಾರ ಅಧಿಕೃತ ಜಾಲ https://cetonline.karnataka.gov.in/kearecruitment2026app/loginಕ್ಕೆ ಭೇಟಿ ನೀಡಿ.
ಸರ್ಕಾರದ ಆದೇಶದಂತೆ, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಅಳವಡಿಸಿಕೊಂಡು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುವ ಅಧಿಸೂಚನೆಗಳನ್ನು ಹೊರತುಪಡಿಸಿ, ಇನ್ನುಳಿದ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು ಹೊಸ ರೋಸ್ಟರ್ ಬಿಂದುಗಳನ್ವಯ ಪರಿಷ್ಕೃತ ಅಧಿಸೂಚನೆ ಹೊರಡಿಸಲು ನಿರ್ದೇಶಿಸಲಾಗಿರುತ್ತದೆ. ಅದರಂತೆ ಸದರಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಮರು ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಮೇ 21
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 04
- ಅರ್ಜಿ ಶುಲ್ಕ ಪಾವತಿಸಲು ಕೊನೆದಿನ – ಜೂನ್ 05
ಇಲಾಖೆವಾರು ಹುದ್ದೆಗಳ ವಿವರ:
| ಇಲಾಖೆ ಹೆಸರು | ಉಳಿಕೆ ಮೂಲ ವೃಂದ | ಸ್ಥಳೀಯ ವೃಂದ |
| ಕೃಷಿ ಮಾರಾಟ ಇಲಾಖೆ | ಸಹಾಯಕ ಅಭಿಯಂತರರು(ಸಿವಿಲ್) (ತಾತ್ಕಾಲಿಕ ಹುದ್ದೆಗಳು) 10 ಸ್ಥಾನ | —- |
| ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ) | ಸಹಾಯಕ ಅಭಿಯಂತರರು;(ಸಿವಿಲ್) – 13 ಸ್ಥಾನ (ಮೆಕ್ಯಾನಿಕಲ್) – 02 ಸ್ಥಾನ (ಕಂಪ್ಯೂಟರ್ ಸೈನ್ಸ್)- 01 ಸ್ಥಾನ | ಸಹಾಯಕ ಅಭಿಯಂತರರು;(ಸಿವಿಲ್) – 05 ಸ್ಥಾನ (ಮೆಕ್ಯಾನಿಕಲ್) – 01 ಸ್ಥಾನ |
| ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಸ್.ಎಸ್.ಐ.ಡಿ.ಸಿ) | ಸಹಾಯಕ ಕಾರ್ಯಪಾಲಕ ಅಭಿಯಂತರರು(ಸಿವಿಲ್)- 01 ಸ್ಥಾನ ಸಹಾಯಕ ಅಭಿಯಂತರರು (ಸಿವಿಲ್)- 03 ಸ್ಥಾನ | ಸಹಾಯಕ ಕಾರ್ಯಪಾಲಕ ಅಭಿಯಂತರರು(ಸಿವಿಲ್)- 01 ಸ್ಥಾನ |
ಶೈಕ್ಷಣಿಕ ಅರ್ಹತೆ:
ಸಹಾಯಕ ಅಭಿಯಂತರರು(ಸಿವಿಲ್) ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು(ಸಿವಿಲ್) ಹುದ್ದೆಗೆ:- ಸಿವಿಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ.
ಸಹಾಯಕ ಅಭಿಯಂತರರು(ಮೆಕ್ಯಾನಿಕಲ್) ಹುದ್ದೆಗೆ:- ಮೆಕ್ಯಾನಿಕ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ
ಸಹಾಯಕ ಅಭಿಯಂತರರು(ಕಂಪ್ಯೂಟರ್ ಸೈನ್ಸ್) ಹುದ್ದೆಗೆ:- ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ.
ಗಮನಿಸಿ ಓದುಗ ಮಿತ್ರರೇ… ಇಲ್ಲಿ ಚುಟುಕಾಗಿ ವಿದ್ಯಾರ್ಹತೆ ಕುರಿತು ಮಾಹಿತಿ ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ವಯೋಮಿತಿ:
04-06-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ;
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
ಪ.ಜಾತಿ/ಪ.ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು
ಜೊತೆಗೆ ಸರ್ಕಾರಿ ನೇಮಕಾತಿ ನಿಯಮಗಳಿಗೆ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆ ಪ್ರಕ್ರಿಯೆ:
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಸಂಬಳ:
| ಇಲಾಖೆ ಹೆಸರು | ವೇತನ ಶ್ರೇಣಿ |
| ಕೃಷಿ ಮಾರಾಟ ಇಲಾಖೆ | ಸಹಾಯಕ ಅಭಿಯಂತರರು(ಸಿವಿಲ್) ₹69250-₹134200/- |
| ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ) | ಸಹಾಯಕ ಅಭಿಯಂತರರು (ಸಿವಿಲ್), (ಮೆಕ್ಯಾನಿಕಲ್),(ಕಂಪ್ಯೂಟರ್ ಸೈನ್ಸ್) ₹53250-₹115460/- |
| ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಸ್.ಎಸ್.ಐ.ಡಿ.ಸಿ) | ಸಹಾಯಕ ಕಾರ್ಯಪಾಲಕ ಅಭಿಯಂತರರು(ಸಿವಿಲ್) ₹83700 -₹155200/- ಸಹಾಯಕ ಅಭಿಯಂತರರು (ಸಿವಿಲ್) ₹69250 -₹134200/- |
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ-2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ ₹750/-
ಪ.ಜಾತಿ/ಪ.ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500/-
ವಿಕಲಚೇತನ ಅಭ್ಯರ್ಥಿಗಳಿಗೆ ₹250/-
ಅರ್ಜಿ ಸಲ್ಲಿಸುವುದು ಹೇಗೆ.?
ಹಂತ-1 ಕೆಇಎ ಅಧಿಕೃತ ಜಾಲತಾಣhttps://cetonline.karnataka.gov.in/kea/ಕ್ಕೆ ಭೇಟಿ
ಹಂತ-2 ನಂತರ ಮೆನುದಲ್ಲಿ “ನೇಮಕಾತಿ” ವಿಭಾಗದಡಿ “ವಿವಿಧ ಇಲಾಖೆಗಳ ನೇಮಕಾತಿ 2025” ಉಪವಿಭಾಗಡಿ ನೀಡಲಾದ “ವಿವಿಧ ಇಲಾಖೆಗಳ ನೇಮಕಾತಿ (HK) – 2025” ಅಥವಾ “ವಿವಿಧ ಇಲಾಖೆಗಳ ನೇಮಕಾತಿ(NON-HK) – 2025” ಆಯ್ಕೆ ಮಾಡಿಕೊಳ್ಳಿ. ನಂತರ ಅಲ್ಲಿ ಲಭ್ಯವಿರುವ ಆನ್ಲೈನ್ ಅರ್ಜಿ ಸಲ್ಲಿಕೆ ನಮೂನೆ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF(RPC) | Download |
| Official Notification PDF(KK) | Download |
| Online Application Form Link | Apply |
| Official Website | kea.kar.nic.in |
| More Updates | Karnatakahelp.in |