ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಮಿಕ್ಕುಳಿದ ವೃಂದದ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್(ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕೆಕೆ ವೃಂದದಲ್ಲಿ 595 ಸ್ಥಾನಗಳು ಹಾಗೂ ಮಿಕ್ಕುಳಿದ ವೃಂದ(ಮೂಲ ಉಳಿಕೆ ವೃಂದ)ದಲ್ಲಿ 3395 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಕೆಇಎ ಅಧಿಕೃತ ಜಾಲತಾಣ ಕ್ಕೆ ಭೇಟಿ ನೀಡಿ, ಜುಲೈ 03ರೊಳಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ವಯೋಮಿತಿ:
03-07-2026ರಂತೆ;
ಕನಿಷ್ಠ 18 ವರ್ಷಗಳು
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 40 ವರ್ಷಗಳು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು ಹರಿಶಿನ ಜಾತಿ / ಪರಿಶಿಷ್ಟ ಪಂಗಡ / ಪವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು
ಸೂಚನೆ: ಸರ್ಕಾರಿ ನಿಯಮಾನುಸಾರ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ(ಒಎಂಆರ್)
ದೇಹದಾರ್ಢ್ಯತೆ ಪರೀಕ್ಷೆ(ಪಿಎಸ್ಟಿ)
ಸಹಿಷ್ಣುತೆ ಪರೀಕ್ಷೆ(ಇಟಿ)
ವೈದ್ಯಕೀಯ ಪರೀಕ್ಷೆ(ಎಂಇ)
ದಾಖಲಾತಿ ಪರಿಶೀಲನೆ
ಸಂಬಳ:
ವೇತನ ಶ್ರೇಣಿ; ರೂ.37500-900-39300-1000-43300-1125-47800-1250-52800-1375-58300- 1500-64300-1650-74200-1900-76100/-
ಜೊತೆಗೆ ಪಿಂಚಣಿ ಸೌಲಭ್ಯವು ಇರಲಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ-2ಎ/2ಬಿ/3ಎ/3ಬಿ ವರ್ಗದವರಿಗೆ ₹750/- ಪ.ಜಾತಿ/ಪ.ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500/- ವಿಕಲಚೇತನ ಅಭ್ಯರ್ಥಿಗಳಿಗೆ ₹250/-
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ..?
ಮೊದಲು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/indexnew.aspxಗೆ ಭೇಟಿ ನೀಡಿ. ನಂತರ “ನೇಮಕಾತಿ” ವಿಭಾಗದಡಿ “ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ – 2026” ಉಪವಿಭಾಗದಡಿ ನೀಡಲಾದ “RPC ಅಥವಾ KK ವೃಂದ” ಆಯ್ಕೆ ಮಾಡಿಕೊಳ್ಳಿ, ನಂತರ ಆಯಾ ವಿಭಾಗದಲ್ಲಿ ಒದಗಿಸಲಾದ “ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆನ್ಲೈನ್ ಲಿಂಕ್” ಶಿರ್ಷೀಕೆ ಲಿಂಕ್ ಮೇಲೆ ಒತ್ತುವ ಮೂಲಕ ಅರ್ಜಿ ಸಲ್ಲಿಸಬಹುದು.