ದೇವದಾಸಿಯರ ಮಕ್ಕಳ ಮದುವೆಗೆ ಸರ್ಕಾರದಿಂದ ಸಿಗಲಿದೆ ₹8ಲಕ್ಷವರೆಗೆ ಪ್ರೋತ್ಸಾಹಧನ

Published on:

ಅನಿಸಿಕೆ
Incentive For The Devadasi Children's Marriage Application
ದೇವದಾಸಿಯರ ಮಕ್ಕಳ ಮದುವೆಗೆ ಸರ್ಕಾರದಿಂದ ಪ್ರೋತ್ಸಾಹಧನ

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನವನ್ನು ಒದಗಿಸುತ್ತಿದೆ.

ಪ.ಜಾತಿ/ಪ.ಪಂಗಡದ ದೇವದಾಸಿಯರ ಮಕ್ಕಳನ್ನು ವಿವಾಹವಾಗುವವರಿಗೆ ರೂ.8ಲಕ್ಷಗಳವರೆಗೆ(ಪುರುಷನಿಗೆ ರೂ.3ಲಕ್ಷ ಹಾಗೂ ಮಹಿಳೆಗೆ ರೂ.5ಲಕ್ಷದವರೆಗೆ) ಪ್ರೋತ್ಸಾಹಧನ ಒದಗಿಸಲಿದೆ. ಈ ಮೂಲಕ ದೇವದಾಸಿಯರ ಮಕ್ಕಳಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನೆರವು ನೀಡುವ ಧ್ಯೇಯ ಈ ಯೋಜನೆ ಹೊಂದಿದೆ. ಮದುವೆಯಾದ ಒಂದುವರೆ ವರ್ಷ(18 ತಿಂಗಳು)ದೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಯಾ ಇಲಾಖೆ ಅಧಿಕೃತ ಜಾಲತಾಣಗಳಾದ https://swdservices.karnataka.gov.in/ ಅಥವಾ https://twd.karnataka.gov.in/ಗೆ ಭೇಟಿ ನೀಡಿ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment