ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಬಂಧಿತ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಪದವಿ ಓದಿರಬೇಕು. ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ https://agniveernavy.cdac.in/sailorscycle4/ಗೆ ಭೇಟಿ ನೀಡಿ, ಜೂ.29 ರೊಳಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಕನಿಷ್ಠ ಒಟ್ಟು 50% ಅಂಕಗಳೊಂದಿಗೆ 10ನೇ ತರಗತಿ ಪೂರ್ಣಗೊಳಿಸಿರಬೇಕು ಹಾಗೂ AICTE ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಸಂಬಂಧಿತ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು.
ವಯೋಮಿತಿ:
• ಅಗ್ನಿವೀರ್ (ಅಪ್ರೆಂಟಿಸ್) 01/2027 ಬ್ಯಾಚ್ ಅಭ್ಯರ್ಥಿಗಳು – ಡಿಸೆಂಬರ್ 01, 2004 ರಿಂದ ಮೇ 31, 2009 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು.
• ಅಗ್ನಿವೀರ್ (ಅಪ್ರೆಂಟಿಸ್) 02/2027 ಬ್ಯಾಚ್ ಅಭ್ಯರ್ಥಿಗಳು – 01 ಮೇ 2005 ರಿಂದ 31 ಅಕ್ಟೋಬರ್ 2009 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು.
ಭಾರತೀಯ ನೌಕಾಪಡೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಸೇವಾ ಅವಧಿ:
ಅಗ್ನಿವೀರ್ (ಅಪ್ರೆಂಟಿಸ್) ಯೋಜನೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯಲ್ಲಿ 04 ವರ್ಷಗಳ ಕಾಲ ಸೇವೆ ಸಲ್ಲಿಸಲು ಅರ್ಹರಿರುತ್ತಾರೆ.
ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ:
✓ ಮೊದಲ ವರ್ಷ: ಮಾಸಿಕ ವೇತನ 30 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 21 ಸಾವಿರರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9 ಸಾವಿರರೂ. ಹೋಗುತ್ತದೆ.
✓ ಎರಡನೇ ವರ್ಷ: ಮಾಸಿಕ ವೇತನ 33 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9,900ರೂ. ಹೋಗುತ್ತದೆ.
✓ ಮೂರನೇ ವರ್ಷ: ಮಾಸಿಕ ವೇತನ 36,500ರೂ. ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 10,950ರೂ. ಹೋಗುತ್ತದೆ.
✓ ನಾಲ್ಕನೇ ವರ್ಷ: ಮಾಸಿಕ ವೇತನ 40 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 12ಸಾವಿರ ರೂ. ಹೋಗುತ್ತದೆ.
4 ವರ್ಷಗಳ ನಂತರ, ಅಗ್ನಿವೀರ್ ಅಪ್ರೆಂಟಿಸ್ ಅಭ್ಯರ್ಥಿಗಳು 10.04 ಲಕ್ಷರೂ. (ಬಡ್ಡಿ ಸೇರಿದಂತೆ) ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.
ಆಯ್ಕೆ ವಿಧಾನ:
ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ (INET)
ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟ್
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೂ – 550ರೂ. ಮತ್ತು 18% GST
ಅರ್ಜಿ ಸಲ್ಲಿಕೆ ಹೇಗೆ.?
•ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/ ಗೆ ಭೇಟಿ ನೀಡಿ.
• ಬಳಿಕ ಜೂನ್ 05 ರಂದು ಸಕ್ರಿಯವಾಗುವ “ಭಾರತೀಯ ನೌಕಾಪಡೆಯು ಅಗ್ನಿವೀರ್ (ಅಪ್ರೆಂಟಿಸ್) 01/2027 ಮತ್ತು 02/2027 ಬ್ಯಾಚ್ ನೇಮಕಾತಿ” ಅರ್ಜಿ ನಮೂನೆ ಆಯ್ಕೆ ಮಾಡಿ.
• ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.