ಜಂಟಿ ನಿರ್ದೇಶಕ 01, ಉಪ ನಿರ್ದೇಶಕರು 08, ಪ್ರಧಾನ ಖಾಸಗಿ ಕಾರ್ಯದರ್ಶಿ 01, ಹಿರಿಯ ಸಹಾಯಕ ನಿರ್ದೇಶಕ 13, ಹಿರಿಯ ಪ್ರಾಸಿಕ್ಯೂಟರ್ 03, ಸಹಾಯಕ ನಿರ್ದೇಶಕ 12 ಅಭ್ಯರ್ಥಿಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಸರ್ಕಾರಿ/ಸಾರ್ವಜನಿಕ ವಲಯದ ಅಧಿಕಾರಿಗಳು ಜುಲೈ 29ರೊಳಗೆ ಎಸ್ಎಫ್ಐಒ ಅಧಿಕೃತ ಜಾಲತಾಣ https://sfio.gov.in/en/document-category/vacancies/ದ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ‘ನಿರ್ದೇಶಕರು, ಗಂಭೀರ ವಂಚನೆ ತನಿಖಾ ಕಚೇರಿ, ಪಂಡಿತ್ ದೀನದಯಾಳ್ ಅಂತ್ಯೋದಯ ಭವನ, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003’ ವಿಳಾಸಕ್ಕೆ ತಲುಪಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಜುಲೈ 29, 2026(ಜಾಹೀರಾತು ಪ್ರಕಟವಾದ 60 ದಿನಗಳ ಒಳಗೆ)
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳು/ಅರೆ-ಸರ್ಕಾರಿ/ಸ್ವಾಯತ್ತ ಸಂಸ್ಥೆಗಳು ಅಥವಾ ಶಾಸನಬದ್ಧ ಅಥವಾ ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಲ್ಎಲ್ಬಿ ಪದವಿ/ಸಿ.ಎ/ಸಿ.ಎಂ.ಎ/ಸಿ.ಎಸ್/ಸಿ.ಎಫ್.ಎ/ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೋಮಾ ಇತರೆ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
29-07-2026 ರಂತೆ
ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 7ನೇ CPC ಪೇ ಮ್ಯಾಟ್ರಿಕ್ಸ್ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳ ಅರ್ಹತೆ, ವೃತ್ತಿ ಅನುಭವ ಹಾಗೂ ಸೇವಾ ದಾಖಲೆಗಳ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು SFIO ಅಧಿಕೃತ ವೆಬ್ಸೈಟ್ https://sfio.gov.in/en/document-category/vacancies/ಗೆ ಭೇಟಿ ನೀಡಿ.
• ಬಳಿಕ ಹುದ್ದೆಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಎಸ್ಎಫ್ಐಒದಲ್ಲಿ ಡೆಪ್ಯುಟೇಶನ್ (ಐಎಸ್ಟಿಸಿ) ಆಧಾರದ ಮೇಲೆ ಖಾಲಿ ಹುದ್ದೆಗಳ ಭರ್ತಿ – 2026-05 – 38 ಹುದ್ದೆಗಳು* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಉದ್ಯೋಗ ಅಧಿಸೂಚನೆ ಸಂಪೂರ್ಣವಾಗಿ ಓದಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ. ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಜುಲೈ 29ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದು.