ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(ಕೆಆರ್‌ಪಿಸಿ), ಕೆಎಸ್‌ಐಎಸ್‌ಎಫ್ ಮತ್ತು ಐಆರ್‌ಬಿ ಹುದ್ದೆಗಳ ನೇಮಕಾತಿ ಸಂಬಂಧ ಸೆ.20ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಮಂಗಳವಾರ(ಸೆ.15) ಬಿಡುಗಡೆಗೊಳಿಸಿದೆ.
ಸಾಮಾನ್ಯ ಜ್ಞಾನ(ಜಿಕೆ) ಪತ್ರಿಕೆಯನ್ನೊಳಗೊಂಡ ಆರ್‌ಪಿಸಿ ವೃಂದದ ಪತ್ರಿಕೆಯು ಬೆಳಗ್ಗೆ 10:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಕೆಕೆ ವೃಂದದ ಪತ್ರಿಕೆಯು ಮಧ್ಯಾಹ್ನ 3 ಗಂಟೆಯಿಂದ ಸಂಜೆ 4:30ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ ದಲ್ಲಿ ಲಭ್ಯವಿರುವ ಲಿಂಕ್ (https://www.cetonline.karnataka.gov.in/KEA_EXAM_PORTAL/Forms/Candidates/Login) ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.