ನವದೆಹಲಿ ಸೆ.16: ಕೇಂದ್ರ ಲೋಕಸೇವಾ ಆಯೋಗವು ಸೆ.13ರಂದು ನಡೆಸಿದ್ದ 2026ನೇ ಸಾಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (II)ಯ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆಗೊಳಿಸಿದೆ.
ಅಭ್ಯರ್ಥಿಗಳು ಗಣಿತಶಾಸ್ತ್ರ ಹಾಗೂ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ(ಜಿಎಟಿ) ಪತ್ರಿಕೆಗಳ ಎ, ಬಿ, ಸಿ, ಡಿ ಸಿರೀಸ್ ಆಧಾರಿತ ತಾತ್ಕಾಲಿಕ ಕೀ ಉತ್ತರಗಳನ್ನು ಆಯೋಗದ ಅಧಿಕೃತ ಜಾಲತಾಣ https://www.upsc.gov.in/ದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಗಣಿತಶಾಸ್ತ್ರ ಪತ್ರಿಕೆಯು 300 ಅಂಕಗಳನ್ನು, ಜಿಎಟಿ ಪತ್ರಿಕೆಯು 600 ಅಂಕಗಳನ್ನು ಒಳಗೊಂಡಿದ್ದು, ಒಟ್ಟು 900 ಅಂಕಗಳಿಗೆ ಆಫ್‌ಲೈನ್ ಮೂಲಕ ಪರೀಕ್ಷೆ ನಡೆದಿದೆ.
| ಪತ್ರಿಕೆಯ ಹೆಸರು | ಲಿಂಕ್ |
|---|---|
| ಗಣಿತಶಾಸ್ತ್ರ | ಡೌನ್ಲೋಡ್ ಮಾಡಿ |
| ಸಾಮಾನ್ಯ ಸಾಮರ್ಥ್ಯ ಪರೀಕ್ಷೆ(ಜಿಎಟಿ) | ಡೌನ್ಲೋಡ್ ಮಾಡಿ |