ನವದೆಹಲಿ ಸೆ.16: 2026ನೇ ಸಾಲಿನ ಸಂಯುಕ್ತ ರಕ್ಷಣಾ ಸೇವೆಗಳ ಪರೀಕ್ಷೆ(II)ಯ ತಾತ್ಕಾಲಿಕ ಕೀ ಉತ್ತರಗಳನ್ನು ಕೇಂದ್ರ ಲೋಕಸೇವಾ ಆಯೋಗವು ಬುಧವಾರ ಪ್ರಕಟಿಸಿದೆ.
ಪ್ರಾಥಮಿಕ ಗಣಿತ, ಇಂಗ್ಲೀಷ್, ಸಾಮಾನ್ಯ ಜ್ಞಾನ ಪತ್ರಿಕೆಯನ್ನು ಒಳಗೊಂಡ ಪರೀಕ್ಷೆಯನ್ನು ದೇಶದಾದ್ಯಂತ ಸೆ.13ರಂದು ನಡೆಸಲಾಗಿತ್ತು. ಸದರಿ ಪರೀಕ್ಷೆ ಹಾಜರಾಗಿರುವ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ಜಾಲತಾಣ https://www.upsc.gov.in/ಕ್ಕೆ ಭೇಟಿ ನೀಡಿ ತಾತ್ಕಾಲಿಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರತಿಯೊಂದು ಪತ್ರಿಕೆಯು ತಲಾ 100 ಅಂಕಗಳನ್ನು ಹೊಂದಿದೆ.
| ಪತ್ರಿಕೆಯ ಹೆಸರು | ಪಿಡಿಎಫ್ ಲಿಂಕ್ |
|---|---|
| ಇಂಗ್ಲೀಷ್ | ಡೌನ್ಲೋಡ್ ಮಾಡಿ |
| ಸಾಮಾನ್ಯ ಜ್ಞಾನ(ಜಿಕೆ) | ಡೌನ್ಲೋಡ್ ಮಾಡಿ |
| ಪ್ರಾಥಮಿಕ ಗಣಿತ | ಡೌನ್ಲೋಡ್ ಮಾಡಿ |