ಗದಗ: ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ನಗರಸಭೆ ಗದಗ-ಬೆಟಗೇರಿಯಲ್ಲಿ ಖಾಲಿ ಇರುವ ನೇರಪಾವತಿ ಪೌರಕಾರ್ಮಿಕರ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ನೇಮಕಾತಿ ಮೂಲಕ ಒಟ್ಟು 154 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ವಿದ್ಯಾರ್ಹತೆ ಅಗತ್ಯವಿರುವುದಿಲ್ಲ ಆದರೆ, ಅಭ್ಯರ್ಥಿಯು ಕನ್ನಡ ಭಾಷೆಯನ್ನು ಮಾತನಾಡಲು ಬರಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ ಆಗಸ್ಟ್ 29
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30
- ಅರ್ಜಿ ನಮೂನೆ ಪಡೆಯುವ ವಿಳಾಸ:
- ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಠಡಿ ಸಂಖ್ಯೆ 123, ಗದಗ.
- ನಗರಸಭೆ ಗದಗ ಬೆಟಗೇರಿ.
ಶೈಕ್ಷಣಿಕ ಅರ್ಹತೆ:
- ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.
- ಆದರೆ, ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಮಾತನಾಡಲು ಬರಬೇಕು.
ವಯೋಮಿತಿ:
- ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳು ತುಂಬಿರಬೇಕು.
- ಗರಿಷ್ಠ ವಯೋಮಿತಿ 50 ವರ್ಷಗಳು ಮೀರಿರಬಾರದು.
(ಅಭ್ಯರ್ಥಿಯ ವಯಸ್ಸನ್ನು ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಶೈಕ್ಷಣಿಕ ದಾಖಲಾತಿಗಳ ಆಧಾರದ ಮೇಲೆ ನಿರ್ಧರಿಸಲಾಗುವುದು).
ಆಯ್ಕೆ ಪ್ರಕ್ರಿಯೆ:
ಆದ್ಯತೆ ಮತ್ತು ಜೇಷ್ಠತೆ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದೆ ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಒಂದು ವರ್ಷ ಪೌರಕಾರ್ಮಿಕ, ಲೋಡರ್ಸ್, ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಆಗಿ ಕೆಲಸ ಮಾಡಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಸೇವಾ ಅವಧಿಯ ಜೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಸಮಾನ ಸೇವಾ ಅವಧಿ ಇದ್ದಲ್ಲಿ: ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಸೇವಾ ಅವಧಿ ಒಂದೇ ಆಗಿದ್ದರೆ, ವಯಸ್ಸಿನಲ್ಲಿ ಹಿರಿಯರಾದವರಿಗೆ ಆದ್ಯತೆ ನೀಡಲಾಗುವುದು. ವಯಸ್ಸು ಮತ್ತು ಸೇವೆ ಎರಡೂ ಒಂದೇ ಆಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.
ಕೋವಿಡ್-19 ಸಂತ್ರಸ್ತರು: ಕರ್ತವ್ಯದ ಅವಧಿಯಲ್ಲಿ ಕೋವಿಡ್-19 ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರನ್ನು ನೇಮಕಾತಿಗೆ ಪರಿಗಣಿಸಲಾಗುವುದು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮೀಸಲಾತಿ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಅಧಿನಿಯಮದಡಿ ಗುರುತಿಸಲ್ಪಟ್ಟ ಸಂತ್ರಸ್ತರಿಗೆ ಅಥವಾ ಅವರ ಕುಟುಂಬದವರಿಗೆ ಶೇ. 10 ರಷ್ಟು ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಮೀಸಲಾತಿ ಅನ್ವಯಿಸುವುದಿಲ್ಲ: ಈ ನೇರಪಾವತಿ ನೇಮಕಾತಿಯು ಕರ್ನಾಟಕ ಅನುಸೂಚಿತ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮಕ್ಕೆ ಒಳಪಡುವುದಿಲ್ಲ.
ಇತರ ಷರತ್ತುಗಳು: ಅಭ್ಯರ್ಥಿಗಳು ಆರೋಗ್ಯವಂತರಾಗಿರಬೇಕು (ವೈದ್ಯಕೀಯ ದೃಢೀಕರಣ ಪತ್ರ ಸಲ್ಲಿಸಬೇಕು) ಮತ್ತು ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು ಹಾಗೂ ಸೇವೆಯಿಂದ ವಜಾಗೊಂಡಿರಬಾರದು.
ಸಂಬಳ ಮತ್ತು ಸೌಲಭ್ಯಗಳು:
- ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯನ್ವಯ ವೇತನವನ್ನು ನಿಗದಿಪಡಿಸಲಾಗುವುದು.
- ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ಪರಿಷ್ಕರಿಸುವ ವೇತನದೊಂದಿಗೆ ಪಿ.ಎಫ್ (PF) ಮತ್ತು ಇ.ಎಸ್.ಐ (ESI) ಸೌಲಭ್ಯಗಳನ್ನು ಕಲ್ಪಿಸಲಾಗುವುದು.
- ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಖಾಯಂ ನೌಕರರಿಗೆ ನೀಡುವ ಇತರ ಯಾವುದೇ ಸೌಲಭ್ಯಗಳಿಗೆ ಅಥವಾ ಅನುಕಂಪದ ನೇಮಕಾತಿ, ಪಿಂಚಣಿ ಮುಂತಾದ ಸೇವಾ ಸೌಲಭ್ಯಗಳಿಗೆ ಇವರು ಅರ್ಹರಿರುವುದಿಲ್ಲ.
ಅರ್ಜಿ ಶುಲ್ಕ:
- ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡ(ST), ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100
- ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.200
ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಡಿ.ಡಿ (Demand Draft) ಮೂಲಕ ಸಲ್ಲಿಸಬೇಕು. ಡಿ.ಡಿ ಯನ್ನು “ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಗದಗ” ಇವರ ಹೆಸರಿಗೆ ಪಡೆದಿರಬೇಕು.
ಅರ್ಜಿ ಸಲ್ಲಿಕೆ ಹೇಗೆ.?
ಆಸಕ್ತ ಅಭ್ಯರ್ಥಿಗಳು ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಧಿಕಾರಿಗಳ ಕಾರ್ಯಾಲಯ, ಕೊಠಡಿ ಸಂ.123 ಅಥವಾ ನಗರಸಭೆ ಗದಗ ಬೆಟಗೇರಿ ಇಲ್ಲಿ ಅರ್ಜಿ ನಮೂನೆ ಪಡೆದು ಕೇಳಲಾದ ಮಾಹಿತಿ ತುಂಬಿ ಜೊತೆಗೆ ಅಗತ್ಯ ದಾಖಲೆಗಳನ್ನು ಮತ್ತು ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಭರಿಸಿ ರಶೀದಿಯನ್ನು ಲಗತ್ತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | www.gadagdudc.mrc.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |