ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಆರ್‌ಪಿಸಿ ಹಾಗೂ ಕೆಕೆ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಉಳಿದ ಮೂಲ ವೃಂದದ(ಆರ್‌ಪಿಸಿ) ವಾರ್ಡರ್ 560 ಹುದ್ದೆಗಳು, ದ್ವಿತೀಯ ದರ್ಜೆ ಬೋಧಕರು 16 ಹುದ್ದೆಗಳು ಸೇರಿ ಒಟ್ಟು 576 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದ(ಕೆಕೆ)ದಲ್ಲಿ ಜೈಲರ್ 05, ವಾರ್ಡರ್ 275, ದ್ವಿತೀಯ ದರ್ಜೆ ಬೋಧಕರು 08, ವಾರ್ಡರ್ ಕಮ್ ನರ್ಸಿಂಗ್ 05 ಹುದ್ದೆಗಳು ಸೇರಿದಂತೆ ಒಟ್ಟು 293 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಸೆಪ್ಟೆಂಬರ್ 19
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 15
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಅಕ್ಟೋಬರ್ 16
- ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕಗಳು;
- ಉಳಿದ ಮೂಲ ವೃಂದದ ಹುದ್ದೆಗಳಿಗೆ ನವೆಂಬರ್ 21(ಮಧ್ಯಾಹ್ನ 3.00 ರಿಂದ 4.30)
- ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ನವೆಂಬರ್ 22(ಬೆಳಿಗ್ಗೆ 10.30 ರಿಂದ 12.00 ಮತ್ತು ಮಧ್ಯಾಹ್ನ 3.00 ರಿಂದ 4.30)
ಶೈಕ್ಷಣಿಕ ಅರ್ಹತೆ:
ಜೈಲರ್ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು (ಸಮಾಜಶಾಸ್ತ್ರ, ಮನೋವಿಜ್ಞಾನ, ಅಪರಾಧಶಾಸ್ತ್ರ ಅಥವಾ ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು)
ವಾರ್ಡರ್(ವೀಕ್ಷಕರು) ಹುದ್ದೆಗೆ; ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು
ದ್ವಿತೀಯ ದರ್ಜೆ ಬೋಧಕರು(Instructor Grade-II) ಹುದ್ದೆಗೆ; ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರಬೇಕು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟ್ರಿ/ಟೈಲರಿಂಗ್/ಟೆಕ್ಸ್‌ಟೈಲ್/ವೀವಿಂಗ್/ಕಾರ್ಪೆಟ್ ಮೇಕಿಂಗ್ ಇತ್ಯಾದಿ ವಿಷಯಗಳಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು
ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗೆ; ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಪ್ರಥಮ ಚಿಕಿತ್ಸೆ(First Aid) ಪ್ರಮಾಣಪತ್ರ ಹೊಂದಿರಬೇಕು.
(ಗಮನಿಸಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ).
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ಅರ್ಹತೆ (ಜಿಎಂ) ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷಗಳು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ (ಪ್ರವರ್ಗ-1, 2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷಗಳು.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಅವರು ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ಹಂತಗಳ ಮೂಲಕ ಮಾಡಲಾಗುತ್ತದೆ:
- ಸ್ಪರ್ಧಾತ್ಮಕ ಪರೀಕ್ಷೆ
- ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (ಪಿಎಸ್‌ಟಿ & ಇಟಿ)
- ವೈದ್ಯಕೀಯ ಪರೀಕ್ಷೆ (ಎಂಇ)
ಸಂಬಳ:
ಜೈಲರ್ ಹುದ್ದೆಗೆ ರೂ.61,300 – 1,12,900/-
ವಾರ್ಡರ್ (ವೀಕ್ಷಕರು) ಮತ್ತು ದ್ವಿತೀಯ ದರ್ಜೆ ಬೋಧಕ ಹುದ್ದೆಗೆ; ರೂ.37,500 – 76,100/-
ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗೆ ರೂ.34,100 – 67,600/-
ಅರ್ಜಿ ಶುಲ್ಕ:
ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು ಮತ್ತು ಶುಲ್ಕವನ್ನು ಸಹ ಆನ್‌ಲೈನ್ ಮೂಲಕವೇ ಪಾವತಿಸಬೇಕಿರುತ್ತದೆ.
- ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳಿಗೆ ರೂ.750/-
- ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ), ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.500/-
ಅರ್ಜಿ ಸಲ್ಲಿಕೆ ಹೇಗೆ..?
ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿಗಾಗಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಬಹುದು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ (ಕೆಕೆ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ (ಆರ್‌ಪಿಸಿ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಕೆಕೆ ಹುದ್ದೆಗಳ ವರ್ಗೀಕರಣ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆರ್‌ಪಿಸಿ ಹುದ್ದೆಗಳ ವರ್ಗೀಕರಣ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |